ಲಿನಕ್ಸಾಯಣ - ೫೧ - ನೆಟ್ವರ್ಕ್ ತೊಂದರೆಗಳನ್ನು ಸರಿ ಪಡಿಸೋದು ಹೇಗೆ?

ಲಿನಕ್ಸಾಯಣ - ೫೧ - ನೆಟ್ವರ್ಕ್ ತೊಂದರೆಗಳನ್ನು ಸರಿ ಪಡಿಸೋದು ಹೇಗೆ?

ಲಿನಕ್ಸಾಯಣದಲ್ಲಿ ಈಗಾಗ್ಲೇ ಕೆಲವೊಂದು ಲೇಖನಗಳು ನಿಮಗೆ ಗ್ನು/ಲಿನಕ್ಸ್ ನಲ್ಲಿ ನೆಟ್ವರ್ಕಿಂಗ್ ನ ಬಗ್ಗೆ ಕೆಲವು ವಿಷಯಗಳನ್ನು  ತಿಳಿಸಿವೆ.

ಆದ್ರೂ, ಕೆಲವು ನೆಟ್ವರ್ಕ್ ತೊಂದರೆಗಳು ನಿಮ್ಮನ್ನು ಕಾಡುತ್ತಿರಬಹುದು.

ಉದಾಹರಣೆಗೆ

೧: ನೀವು ಉಬುಂಟು ೮.೧೦ ಆವೃತ್ತಿ ಉಪಯೋಗಿಸ್ತಿದ್ರೆ, ಅದರಲ್ಲಿ DNS ಸ್ಟೋರ್ ಆಗೋದಿಲ್ಲ. ಆದ್ರಿಂದ, ಸಿಸ್ಟಂ ಆನ್ ಮಾಡಿದ ನಂತರ ಇಂಟರ್ನೆಟ್ ಬ್ರೌಸ್ ಮಾಡ್ಲಿಕ್ಕೇ ಅಗೋದಿಲ್ಲ. ಇದನ್ನು ಸರಿ ಪಡಿಸಲಿಕ್ಕೆ, ನೆಟ್ವರ್ಕ್ ಸೆಟ್ಟಿಂಗ್ಸ್ ನಲ್ಲಿ, DNS ಟ್ಯಾಬ್ಗೆ ಪ್ರತಿಸಲ ಭೇಟಿ ಕೊಟ್ಟು, ಡಿ.ಎನ್.ಎಸ್ ಐ.ಪಿ ಅನ್ನು ಹಾಕಿಕೊಳ್ಳ ಬೇಕಾಗುತ್ತೆ.

ಇದೊಂದು ಬಗ್! ಇದಕ್ಕಾಗಲೇ ಪರಿಹಾರವನ್ನು ಉಬುಂಟು ಕೊಟ್ಟಿದ್ದು, ನಿಮ್ಮ ಆಪರೇಟಿಂಗ್ ಸಿಸ್ಟಂ ಅಪ್ಡೇಟ್ ಮಾಡಿ ಕೊಳ್ಳುವುದರಿಂದ ಈ ತೊಂದರೆ ಮತ್ತೆ ಮರುಕಳಿಸದಂತೆ ಮಾಡಬಹುದು. ಉಬುಂಟು ಅಪ್ಡೇಟ್ ಮಾಡಿಕೊಳ್ಳಲಿಕ್ಕೆ ಕೆಳಗಿನ ಲೇಖನ ಓದಿ.

೨) ಕೆಲವು ಸಲ, ಎಲ್ಲ ನೆಟ್ವರ್ಕಿಂಗ್ ಆಫ್ಷನ್ ಗಳು ಸರಿಯಿದ್ದರೂ, ನಿಮ್ಮ ಬ್ರೌಸರ್ ಆಫ್ಲೈನ್ (Offline) ಮೋಡಿನಲ್ಲಿದ್ದರೆ ವೆಬ್ಸೈಟ್ ಗಳು ನಿಮಗೆ ಬ್ರೌಸರ್ ನಲ್ಲಿ ಮೂಡೋದಿಲ್ಲ. ಬ್ರೌಸರ್ನಲ್ಲಿ File -> Work Offline ಅನ್ನೋ ಆಫ್ಶನ್ ಟಿಕ್ ಆಗಿಲ್ಲ ಅನ್ನೋದನ್ನು ಧೃಡ ಪಡಿಸಿಕೊಂಡರೆ ನಿಮ್ಮ ನೆಟ್ವರ್ಕ್ ಪ್ರಾಬ್ಲಮ್ ಸರಿ ಹೋಗಬಹುದು.

 

ನಿಮಗೆ ಇನ್ಯಾವುದೇ ರೀತಿಯ ನೆಟ್ವರ್ಕ್ ಪ್ರಾಬ್ಲಮ್ ಗಳು ಎದುರಾದಲ್ಲಿ, ತಿಳಿಸಿ, ಅದಕ್ಕೂ ಸೋಲ್ಯೂಶನ್ಗಳನ್ನು ಇಲ್ಲಿ ಕೊಡ್ಲಿಕ್ಕೆ ಪ್ರಯತ್ನಿಸುತ್ತೇನೆ. 

Rating
No votes yet