ಅನುಭವದ ತಿರುಳು ಮತ್ತು ಅನುಭವದ ಕಾರಣಿಭೂತರು

ಅನುಭವದ ತಿರುಳು ಮತ್ತು ಅನುಭವದ ಕಾರಣಿಭೂತರು

ಬರಹ

ಅನುಭವದ ತಿರುಳು ಮತ್ತು ಅನುಭವದ ಕಾರಣಿಭೂತರು

ಪ್ರತಿಯೊಬ್ಬನಿಗೂ ಅವನದೇ ಆದ ಅನುಭವ ಗಳುಂಟು. ಯಾಕೆಂದರೆ ಪ್ರತಿಯೊಬ್ಬನು ಅವನದೇ ಆದ ರೀತಿಯಲ್ಲಿ ಬದುಕುತ್ತಾನೆ .
ದೊಡ್ಡವರು ಯಾವಾಗಲು ಚಿಕ್ಕವರಿಗೆ ಒಂದು ಮಾತು ಹೇಳುವುದುಂಟು . " ಹೀಗೆ ಮಾಡಬೇಡಪ್ಪ , ಹಾಗೆ ಮಾಡು ಎಂದು " ತಿಳಿ ಹೇಳುವುದುಂಟು. ಜಾಣನಾದವನು ಆ ಕ್ಷಣಕ್ಕೆ ಅರಿತು ಬಾಳಲಿಕ್ಕೆ ಪ್ರಯತ್ನಿಸುತ್ತಾನೆ . ಆದರೆ ೧೦೦ ಕ್ಕೆ ಬಹಳ ಜನರು ಆ ಮಾತುಗಳನು ಅರಿಯುವುದಿಲ್ಲ . ಎಷ್ಟು ಜನರು ಎಂದು ಹೇಳಲು ನಾನು ಇನ್ನು ಚಿಕ್ಕವನು ಎಂದು ಅನ್ಕೊಂಡಿದೆನಿ ಮತ್ತು ನನಗೆ ಇನ್ನು ಬಹಳ ಅನುಭವ ಗಳು ಕಾಯ್ತಾ ಇದ್ದೇವೆ . ಯಾಕೆಂದರೆ ನನಗಿನ್ನೂ ೨೬ ವರುಷ . ಆದರು ಆ ೨೬ ವರುಷಗಳಲ್ಲಿ ಸಾಕಷ್ಟು ಅನುಭವ ವನು ಉಂಡಿದೆನಿ ಅಂತಲೇ ಹೇಳಬಹುದು . ಕೆಲವೊಮ್ಮೆ ಜನರ ಆಶಿರ್ವಾದದಿಂದ ಮತ್ತೊಮ್ಮೆ ಸಂದಿಗ್ತ್ದ ಪರಿಸ್ಥಿತಿ ಗಳಿಂದ . ಹಾಗೆ ನೋಡಿದರೆ ನನ್ನನ್ನು ನಾ ಅದೃಷ್ಟವಂತ ಎಂದು ಹೇಳ್ಕೊಲಿಕ್ಕೆ ನಾ ಹಿಂಜರಿಯುವುದಿಲ್ಲ . ನನಗೆ ಹಿಂದೆ ಒಂದು ಮುಂದೆ ಒಂದು ಮಾತಾಡಿ ಅಭ್ಯಾಸವಿಲ್ಲ . ನೇರ ನಡೆ ಗಳಿಂದ ಬದುಕಿದವನು. ತಲೆ ಯನು ತಗ್ಗಿಸಿ ಬದುಕುವ ಜಾಯಮಾನದವನಲ್ಲ .

ಯಾಕೆ ಜನರು ದೊಡ್ಡವರ ಮಾತು ಅರ್ಥ ಮಾಡ್ಕೋದಿಲ್ಲ ಅಂದ್ರೆ ಎಲ್ಲರಿಗು ಅವರದೇ ಆದಂತ ಕುತೂಹಲ , aggressiveness ಮತ್ತು ತಮ್ಮದೇ ಆದ ಸ್ವಭಾವವ ದಿಂದ ಬದುಕುತ್ತ ಇರುತ್ತಾರೆ ಅಲ್ವ . ಈ ಬಗ್ಗೆ ಒಂದು ಉದಾಹರಣೆ ಕೊಡಲು ಇಚ್ಛಿಸುತ್ತೇನೆ . ಕೆಲವೊಮ್ಮೆ ದೊಡ್ಡವರು ಯುವಕರಿಗೆ ಹೀಗೆ ಹೇಳುವುದುಂಟು . " ಅಲ್ಲಿ ಹೋಗಬೇಡ ಕಣೋ , ಅದನ್ನ ಮಾಡಬೇಡ ಎಂತಲ್ಲ ಹೇಳುವುದುಂಟು " . ಆದರೂ ಬಹಳಷ್ಟು ಜನರು ಆ ಮಾತು ಕೇಳದೆ ತಮ್ಮದೇ ಆದ ಕುತೂಹಲಕ್ಕೆ , aggressiveness ಗೆ ಒಳಗಾಗಿ ತಮ್ಮನ್ನು ತಾವು ಸಂಧಿಗ್ತ್ದ ಪರಿಸ್ಥಿತಿ ಗೆ ಸಿಲಿಕಿಸಿಕೊಂಡು ಬಿಡುತ್ತಾರೆ . ಮತ್ತೆ ಕೆಲವೊಮ್ಮೆ ಸ್ವಲ್ಪ ಜನ ಪರಿಸ್ಥಿತಿಯ ಒತ್ತಡ ಕ್ಕೆ ಮಣಿದು ಅನುಭವಿಸುತ್ತಾರೆ . ಹಾಗಂತ ಮಾತ್ರಕ್ಕೆ ನಾನು ನಿಮ್ಮ ಕುತೂಹಲವನ್ನು ಬಿಡಲು ಹೇಳುತ್ತಿಲ್ಲ . aggressiveness ಬಿಡಲು ಹೇಳುತ್ತಿಲ್ಲ . ಮನುಷ್ಯನಿಗೆ ಇರಬೇಕು ಕುತೂಹಲ , aggressiveness ಆದರೆ ಎಲ್ಲವು " controlled manner " ಅಲ್ಲಿ ಇದ್ದರೆ ಮಾತ್ರ ಅವು ನಮಗೆ ಕ್ರಿಯಾತ್ಮಕವಾಗಿ ಸಹಾಯವಾಗುವುದುಂಟು . ಇಲ್ಲವಾದರೆ ನಮ್ಮ ಕೈ ನಾವೇ ಹಿಸಿಕಿಕೊಳ್ಳುವ ಪ್ರಸಂಗ ಬರಬಹುದು . ಈ ದಿಕ್ಕಿನಲ್ಲಿ ಇನ್ನೊಂದು ಮಾತು ಹೇಳಲಿಕ್ಕೆ ಇಚ್ಚೆ ಪಡುತ್ತೇನೆ . " Never , ever, let your positive strengths to become momentary weakness's in life ". ಇದು ಕೂಡ ಅದನ್ನೇ ಪ್ರತಿಪಾದಿಸುವುದುಂಟು . ಮೇಲೆ ಹೇಳಿದ ಉಕ್ತಿಗೆ ಒಂದು ಒಳ್ಳೆಯ ಉದಾಹರಣೆ ಅಂದ್ರೆ ತಾಳ್ಮೆ ಬಗ್ಗೆ ಹೇಳಬಹುದು . ಹಿರಿಯರು ಕೂಡ ಅದನ್ನೇ ಹೇಳಿದ್ದಾರೆ . " ತಾಳಿದವನು ಬಾಳಿಯಾನು " ಅಂತ. ಅದಾಕ್ಕೆ ಮನುಷ್ಯನಿಗೆ ತಾಳ್ಮೆ ನಿಜವಾಗಲೂ ಬೇಕು . ಆದರೆ ಅದೇ ತಾಳ್ಮೆ ಅವನ weakness ಆಗಿ ಹೊರಹೊಮ್ಮಬಾರದು ಅಂತ. ಇನ್ನು ಒಂದು ಮಾತು ಹೇಳಿ ಇದನ್ನು ಇಲ್ಲಿ ಮುಗಿಸಲು ಯೋಚಿಸುತ್ತೇನೆ. ಜೀವನದಲ್ಲಿ ಎಲ್ಲದಕ್ಕೂ ಒಂದು ಬೆಲೆ ಇದೆ . ನಾವು ನೋಡಬೆಕಾದುದ್ದದು ಇಷ್ಟೇ . ಯಾವುದೇ ಕಾರಣಕ್ಕೂ ಎಲ್ಲದರ ಬೆಲೆ ತಗ್ಗಿಸಬಾರದು . ಈ ಒಂದು ದಿಕ್ಕಿನಲ್ಲಿ ನಡದಿದ್ದೆ ಆದರೆ ಆಗು ಹೋಗುಗಳು ನಿಮ್ಮ ಮಿತಿಯಲ್ಲಿಯೇ ನಡಿತಾ ಇದೆ ಅಂತ ಅನಿಸುತ್ತೆ ಮತ್ತು ಅದೇ ವಾಸ್ತವ ಆಗಿರುತ್ತೆ ಅಂತ ನನ್ನ ಭಾವನೆ ಮತ್ತು ನನ್ನ ಅನಿಸಿಕೆ .
ಸ್ವಲ್ಪ ದಿನಗಳ ಹಿಂದೆ , ನನ್ನ ಸ್ನೇಹಿತನು ಚಹಾ ಸಲುವಾಗಿ ಕರೆದ. ಆತ್ಮ ಸ್ನೇಹಿತ ಆದಮೇಲೆ ಹೋಗಲೇ ಬೇಕಲ್ಲವೇ . ಹೋದೆ. ಅವನು ಯಾವಾಗಲು ಚಹಾ ದ ಜೊತೆ ಸಿಗರೇಟ್ ಸೇದುವ ಹವ್ಯಾಸ ಉಳ್ಳವನು . ಹಾಗೆ ಚಹಾ ಕುಡಿಯುತ್ತ, ಹೊಗೆಯನು ಬಿಡುತ್ತಾ ನನಗೆ ಒಂದು ಮಾತು ಹೇಳಿದ . " ಲೇ ಯಾಕೋ ಗೊತ್ತಿಲ್ಲ , ಮೊದಲಿನ ಹಾಗೆ ಸಿಗರೇಟ್ ನಲ್ಲಿ ನನಗೆ ಕಿಕ್ ಬರ್ತಾ ಇಲ್ಲ ಅಂತ . " ನಾ ಕೇಳಿದೆ ಅವನಿಗೆ . ಯಾಕೆ brnad ಏನಾದರು change ಮಾಡಿದೆಯಾ. ಅವನು ಇಲ್ಲ ಅಂದ . ಈ ಉದಾಹರಣೆ ಏಕೆ ಕೊಟ್ಟನೆ ಎಂದು ನಿಮಗೆ ಅರ್ಥ ಆಗಿದೆ ಅಂತ ತಿಳ್ಕೊತಿನಿ.
ಮತ್ತೆ ಈ ಚಿಂತನೆ ನಮ್ಮನ್ನು ಎಲ್ಲಿಗೆ ತೆಗೆದುಕೊಂಡು ಹೋಗುತ್ತೆ ಅಂದರೆ ನಾವೆಲ್ಲರೂ ನಮ್ಮ ಮನಸ್ಸನ್ನ ನಮ್ಮ ನಿಗ್ರಹದಲ್ಲಿ ಇಟ್ಟುಕೊಂದಾಗಲೇ ಜೀವನದ ನಿಜವಾದ ಸ್ವಾದವನು ಊಟಮಾದಲಿಕ್ಕೆ ಆಗೋದು .

ಆದರೆ ಏನೇ ಹೇಳಿ ಎಲ್ಲರಿಗು ತಮ್ಮದೇ ಆದ ಅನುಭವಗಳು ಮುದ ನಿಡುವುದುಂಟು. ಏಕೆಂದರೆ ಎಲ್ಲರು ಸ್ವಂತ ಅನುಭವದಿಂದಲೇ ಬೇಗ ಕಲಿಯುವುದು ಜೀವನದಲ್ಲಿ .

ಪ್ರತಿಯೊಂದು ಅನುಭವವು ತನ್ನದೇ ಆದಂತ ತಿರುಳನ್ನು ಕೊಡ್ಡುತ್ತೆ ಅಂತ ಮೊದಲನೆಯದಾಗಿ ಹೇಳಲಿಕ್ಕೆ ಹೊರಟವನು ನಾನು . ಕೆಲವೊಮ್ಮೆ ಜನ ಅನಭವ ವನ್ನೇ ದೂಷಿಸಿ " left turn " ತೆಗೆದುಕೊಂಡು ಹಾಳಾದವರು ಇದ್ದಾರೆ . ಸಮಚಿತ್ತ ಉಳ್ಳವರು , ಪ್ರವಾಹಕ್ಕೆ ವಿರುದ್ಧ ಈಜುವವರು , ತಮ್ಮ ಮನಸ್ಸನ್ನು ನಿಗ್ರಹಿಸಿ , ಅನುಭವದ ತಿರುಳನ್ನೇ ದಾರಿದೀಪ ವನ್ನಾಗಿ ಮಾಡಿಕೊಂಡು " right turn " ತೆಗೆದುಕೊಂಡು ಬದುಕಿನಲಿ ಮುಂದೆ ಸಾಗಿದವರು ಇದ್ದಾರೆ . ಹಾಗೆ ನೋಡಿದರೆ ಎಲ್ಲ ಅನುಭವಗಳು ಒಳ್ಳೆಯದಕ್ಕಾಗಿಯೇ ಆಗುತ್ತವೆ ಎಂದು ಹೇಳಬಹುದು . ಸರಿಯಾಗಿ ಸೂಕ್ಷ್ಮವಾಗಿ ಆದ ಅನುಭವವನ್ನು ತಿರುಚಿ ನೋಡಿದರೆ ನಮಗೆ ನಾವು ಅರಿತುಕೊಳ್ಳಬಹುದು. ಆ ದಿಕ್ಕಿನಲ್ಲಿ ನಮಗೆ ತಾಳ್ಮೆ ಇರುವುದು ಮತ್ತು ಬೇಕಾಗುವುದು ಬಹು ಮುಖ್ಯ . ಸೂಕ್ಷ್ಮ ವಾಗಿ ನೋಡಿದರೆ ಅನುಭವವೇ ಗುರುವಾಗುವುದುಂಟು. ಮತ್ತು ನಮ್ಮೆಲ್ಲರ ಅಪ್ರತಿಮೆಯಾಗಿ ಅಡಗಿರುವ ಚಿಲುಮೆಯ ಆಗರ, ಸ್ಫೂರ್ತಿಯ ನೆಲೆ ಯನು ಕಂಡು ಕೊಳ್ಳಲು ನಮಗೆ ಆದ ಅನುಭವಗಳೇ ಸಹಾಯ ಮಾಡುವುದುಂಟು. ನಮ್ಮ ನಿಜವಾದ ಕ್ಷಮತೆಯನ್ನು ತಿಳಿಸುವುದುಂಟು.

ಅನುಭವವು ಒಳ್ಳೆಯದಾಗಿರಬಹುದು ಮತ್ತು ಕೆಟ್ಟದ್ದು ಆಗಿರಬಹುದು. ಆದರೆ ನಾನು ಹೇಳುವುದು ಇಷ್ಟೇ , ಎಲ್ಲ ಅನುಭವದ ಬೆಲೆ ಇರ್ರುತ್ತೆ ಅಂತ. ಅದರದೇ ಆದ ಸ್ವಾದವನು ನಿಮಗೆ ನೀಡುತ್ತದೆ ಅಂತ. ಕೆಟ್ಟ ಅನುಭವಾಯೀತು ಅಂತ ನಾನು ಕೆಟ್ಟವನಾದೆ ಎಂದು ಹೇಳುವವನು ನಿಜವಾಗಲೂ ಹೇಡಿಯೇ ಸೈ. ಅಂತವರೆಲ್ಲ ಪ್ರವಾಹಕ್ಕೆ ಕೊಚ್ಚಿ ಹೋಗುವವರು . ಕೆಟ್ಟ ಅನುಭವಯೀತು ಅಂತ ನಾನು ನನ್ನ ಬದುಕಿನ ರೀತಿಯನ್ನು ಬದಲಿಸಿದೆ ಅಂತ ಹೇಳುವವರು ಕೂಡ ಅವರೇ ಸೈ . ಒಳ್ಳೆಯ ಅನುಭವ ಆದರಂತೂ ನಿಮ್ಮಷ್ಟು ಭಾಗ್ಯಶಾಲಿಗಳು ಯಾರಿಲ್ಲ ಬಿಡಿ !

ಅನುಭವಗಳು ಜೀವನದಲ್ಲಿ ಹಾಗೆ ಆಗುವುದಿಲ್ಲ. ಅದಕ್ಕೆ ಜನರ ಅಶಿರ್ವಾದವು ಇರಬೇಕು ಮತ್ತು ಕಾಲದ್ದು ಕೂಡ. ಕೆಲವೊಮ್ಮೆ ಪರಿಸ್ಥಿತಿಗಳ ಒತ್ತಡವು ಕಾರಣ ಆಗಿರುತ್ತೆ ಅನುಭವಕ್ಕೆ . ಇವರೆಡನ್ನು ಕೂಡ ಕಾರಣಿಭೂತ ಅಂತ ಹೇಳಬಹುದು . ಅನುಭವ ಹೇಗೆ ಇರಲಿ, ಸೂಕ್ಷ್ಮ ಗ್ರಹಿಯಾದವನು ಅದರಿಂದ ಏನಾದರು ಅರಿಯುವನು ಮತ್ತು ಅನುಭವ ಸೂಚಿಸುವ "right turn " ಎಂಬ ಸೂಕ್ಷ್ಮ ವನ್ನು ಅರಿತು left turn ತೆಗೆದು ಕೊಲ್ಲದೆ right turn ತೆಗೆದುಕೊಂಡು ಮುಂದೆ ಹೋಗಿ , ಜೀವನ ವೆಂಬ ಮಹಾ ಸಾಗರದಲಿ ತನ್ನ ಪಡಿಯಚ್ಚನು ಬಿಡಲು ಪ್ರಯತ್ನಿಸುವನು. ಅನುಭವ ಎಷ್ಟೇ ಕೆಟ್ಟದ್ದಾಗಿರಲಿ , ಒಳ್ಳೆದೆಆಗಿರಲಿ , ನಿಜವಾದ ಮನುಷ್ಯ ನಾದವನು ಆ ಅನುಭವದ ಕಾರನಿಭೂತರನ್ನು ಕ್ರತಜ್ಞಾ ಪೂರ್ವಕವಾದರು ಸೈ ಅವರನ್ನು ನೆನೆದು , ಸ್ಮರಿಸಿಯಾದರು ಮರೆಯಬೇಕು . ಅನುಭವದ ತಿರುಳನ್ನು ತೆಗೆದುಕೊಂಡು , ಮರೆತು , ಮುಂದೆ ಸಾಗಬೇಕು ಅಂತ ಹೇಳ್ತಾ ಇಧರ ಬಗ್ಗೆ ಏಷ್ಟು ಚರ್ಚೆ ವಿಮರ್ಶೆ ಮಾಡಿದರು ಕೂಡ ಕಡಿಮೆ ಅಂತ ಹೇಳ್ತಾ ಈ ಚಿಂತನೆಯ ಕೊನೆಯ ಭಾಗಕ್ಕೆ ಬರಲು ಇಚ್ಚಿಸುವೆನು.

ಏನೇ ಹೇಳಿ ಅನುಭವವೇ ಗುರು , ದಾರಿದೀಪ . ಅನುಭವದಿಂದಲೇ ಮನುಷ್ಯ ಪಕ್ವ ವಾಗುವನು ಅನ್ನೋದರಲ್ಲಿ ಎರಡು ಮಾತಿಲ್ಲ ಬಿಡಿ ಎಂದು ಹೇಳಲು ಇಚ್ಚಿಸುವೆನು . ಯಾರಿಗೆ ತಾನೆ ಪಕ್ವವಾದ ಮಾವಿನ ಹಣ್ಣು ಇಷ್ಟ ಆಗಲ್ಲ ಹೇಳಿ . ಅದರಂತೆಯೇ ಪಕ್ವವಾದ ಜೀವನದ ಸ್ವಾದವನು ಅರಿಯಬೇಕಾದರೆ ಒಂದೇ ಒಂದು ಕ್ಷಣ ಕುಳಿತು ಕೆಳಗೆ ಹೇಳಿದುದರ ಬಗ್ಗೆ ಯೋಚನೆ ಮಾಡಿ . " List out all your traps that you encountered in your life till now . Then try to analyze the way you passed through it . I think you will be able to connect all the traps. hmm.. so similarly you should have the belief that the present trap will also lead to some thing in future. so be bold and proceed . Achieve " .

ಕೊನೆಯದಾಗಿ ಇಲ್ಲಿ ಈ ಚಿಂತನೆಯ ಬಗ್ಗೆ ನನ್ನ ಅನಿಸಿಕೆ ಗಳನು ವ್ಯಕ್ತ ಪಡಿಸಿದ್ದುಂಟು. we should always welocme good things in life ಎನ್ನುವ ಜಾಯಮಾನದವನು ನಾನು. ನಿಮಗೆ ಸರಿ ಅನಿಸಿದ್ದನ ಇಲ್ಲಿ ಆರಿಸಿಕೊಳ್ಳಿ ಅಂತ ಹೇಳ್ತಾ ನನ್ನ ಚಿಂತನೆಯನ್ನು ಇಲ್ಲಿಗೆ ಮುಗಿಸಲು ಇಚ್ಛಿಸುತ್ತೇನೆ .