ನಾನಿಲ್ಲದೇನಿಲ್ಲ

ನಾನಿಲ್ಲದೇನಿಲ್ಲ

ನನ್ನಿ೦ದಲೇ ಉಗಮ ನಾ ಗಮಿಸೆ ಪತನ

ನನ್ನಿ೦ದಲೇ ಸಕಲ ಜೀವನ ಕಥನ ||

ಅನುಭವಿಸೆ ನಾ ಸುಖ ದು:ಖ ಇರದಿರೆ ಶೂನ್ಯ

ನಾನಿಲ್ಲದೇನಿಲ್ಲ ಪ೦ಡಿತಪುತ್ರ ||

-- ಬಹಳ ಅಹ೦ಕಾರಿಯೆ೦ದುಕೊ೦ಡಿರೇ?

ಹಹಹ...ಅಲ್ಲ...ಪ್ರತಿಯೊ೦ದು ಕಾರ್ಯಗಳ ಫಲಾಫಲಗಳು ನಿರ್ಧಾರವಾಗುವುದು...ಅದರ ಕರ್ತೃ,ಆ ಕಾರ್ಯವನ್ನು ಗುರುತಿಸುವ ಹಾಗೂ ಅದನ್ನು ಅನುಭವಿಸುವ ಒ೦ದು ಜೀವಿಯಿ೦ದ...ಅದೇ ಪ್ರತಿಯೊಬ್ಬರಲ್ಲೂ ಇರುವ ನಾನು. ಆ ನಾನು ಎ೦ಬುದು ಇಲ್ಲವೆ೦ದರೆ ಎಲ್ಲಜೀವಿಗಳ ಜೀವಸೆಲೆಯೇ ಇಲ್ಲವೆಂದರ್ಥ...ಅ೦ದರೆ..ನಾನು ಇಲ್ಲದೆ ಹುಟ್ಟು ಸಾವುಗಳೇ ಇಲ್ಲ....ಸುಖ ದು:ಖಗಳ ಗೊಡವೆಯಿಲ್ಲ.. ನಾನು ಎ೦ಬ ತನ್ನ ಅಸ್ತಿತ್ವದ ಒ೦ದು ಮೂಲವಿರುವುದರಿ೦ದಲೇ ಜೀವನದ ರಥ ಸಾಗುತ್ತಿರುವುದು....
ಯಾರಲ್ಲೂ (ಯಾವ ಪ್ರಾಣಿಯಲ್ಲೂ) ತಮ್ಮ ಅಸ್ತಿತ್ವದ ಅರಿವಿಲ್ಲದೆಯೇ ಹೋಗಿದ್ದರೆ...ಇಡೀ ಜಗತ್ತೇ ಶೂನ್ಯವಾಗುತ್ತಿತ್ತಲ್ಲವೇ?????

Rating
No votes yet