ಗೋಡ್ಸೆ ಯುಗ .

ಗೋಡ್ಸೆ ಯುಗ .

ಬಹಳ ಚಿಕ್ಕ ವಯಸ್ಸಿನಿಂದಲೂ ಮಹಾತ್ಮರ ತತ್ವಗಳು ನನ್ನ ಮನಸ್ಸಿಗೆ ನಾಟಿದ್ದವು . ಅವರ ಜೀವನ ಸಿದ್ಧಾಂತಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದು ಕಷ್ಟಾಸಾಧ್ಯವೆನಿಸುತ್ತಿತ್ತು .

ಆದರೂ ಪ್ರಯತ್ನ ಮಂದುವರೆದಿದೆ .

ಈ ಸಂಗತಿ ನಡೆದದ್ದು ೨೦೦೩ ನೇ ಇಸವಿಯಲ್ಲಿ ...

ಇವತ್ತು ಮಹಾತ್ಮರು ತೀರಿಕೊಂಡ ಪುಣ್ಯತಿಥಿ . ಹುತಾತ್ಮರ ದಿವಸವಾಗಿ ( martyr 's day ) ಕೂಡ ಆಚರಿಸುತ್ತಾರೆ . tuition ಹೊಸತರಲ್ಲಿ ನನ್ನ ಸ್ನೇಹಿತರು ಮಹಾತ್ಮರ ಬಗ್ಗೆ ಕೇವಲವಾಗಿ ಮತನಾಡಿದ್ದು ಜ್ನಾಪಕಕ್ಕೆ ಬರುತ್ತದೆ . (especially avinash bagur ...) . ಕಾಲೇಜಿನಲ್ಲೂ ಕೂಡ ( MES College) Prof . Venkatesh (ಸಂಸ್ಕೃತ lecturer ) ಬಾಯಿಗೆ ಬಂದ ಹಾಗೆ ಹಗುರವಾಗಿ ಮಾತನಾಡಿದ್ದುಂಟು . PUC ಮೊದಲನೇ ವರ್ಷವಾದ್ದರಿಂದ ದನಿಯೆತ್ತಲು ಅಂಜಿದ್ದೆ . ನನ್ನ frustraion suhas kumar suvarna  ( ನನ್ನ ಸ್ನೇಹಿತ ) ಮೇಲೆ ಎತ್ತಿದ್ದೆ . ಆತ ಹೇಳು ನಿನ್ನ ಮಾತು ಎಂದು ಬಹಳ ಹೇಳಿದ್ದ . ವ್ಯರ್ಥ ಅಯ್ತು ಅವನ ಪ್ರಯತ್ನ .

ವಿಷಯಕ್ಕೆ ಬರೋಣ . ಮಾತಿನ ಚಕಮಕಿಗಳು ...

avinash : ಅವನೊಬ್ಬ loafer ...
ನಾನು : (!!!) ಯಾಕೋ ನಮ್ಮ ರಾಷ್ಟ್ರಪಿತಾ ಕಣೋ . ಸ್ವಾತಂತ್ರ್ಯ ಕೊಡಿಸಿದ ಪುಣ್ಯಾತ್ಮ ಅವರು ನಿಂಗೇನು ಮಡಿದ್ರೋ ... ?
avinash : ನಮ್ಮ ದೇಶ ಒಡೆದಿದ್ದು ಅವನಿಂದಲೇ ಕಣೊ ...

(most popular misconception)

ನಾನು : ಹೇಗೆ ಹೇಳ್ತಿಯಾ ?
avinash : ನೆಹರೂಗೆ ಅವನೇ "ಅಂತೆ" ಕಣೊ pressure ಹಕಿದ್ದು .
ನಾನು : ನಿನಗೆ "blood shed day" ಬಗ್ಗೆ ಗೊತ್ತ ...?
avinash : ಅದೆಲ್ಲ ಏನಿಲ್ವೊ ...!!??
ನಾನು : jinnah ( leader of muslim league ) "blood shed day" ಅಂತ ಮುಸ್ಲೀಮ ಬಾಂಧವರಿಗೆ ಕರೆ ಕೊಟ್ಟ . ಅಂದರೆ ಸಿಕ್ಕಿದ ಹಿಂದೂಗಳನ್ನು ಕೊಂದು ಹಾಕಿ ಅಂತ . ಅವರಿಗೆ ಪ್ರತ್ಯೆಕ ಮುಸ್ಲೀಮ ರಾಜ್ಯ ಬೆಕಾಗಿತ್ತು . ಇದರ ವಿರುದ್ಧ ಏಕೈಕವಾಗಿ ಹೊರಾಟವನ್ನು ಪಾದಯಾತ್ರೆಯಿಂದ ಮೂಲಕ ಮಾಡಿದ ಮಹಾನುಭಾವ ಗಾಂಧೀಜೀ . ಗಲಭೆ ಪ್ರದೇಶದಲ್ಲಿ ಪಾದಯಾತ್ರೆ ಮಾಡಿದ್ರು .ಅದು ಗೊತ್ತ ... ? ಇಲ್ಲ . ಆಗಲೇ ಬಾಪು ಉಪವಾಸ ಸತ್ಯಾಗ್ರಹ ನಿಲ್ಲಲಿ ಎಂದು ಕೇಳಿಕೊಂಡು ನೆಹರು , ಪಟೇಲರು  , ಬಂದಿದ್ದರು . ಆಗಲೇ ಚರ್ಚೆಯಾಗಿ ಉಳಿದ ಮಾರ್ಗ ಕಾಣದೆ , ಬಂದ ವಿಷಯವೇ ಈ "partition" . ವಿಷಯ ಕೂಲಂಕುಷವಾಗಿ ಗೊತ್ತಿಲ್ಲದೆ ಅಂತೆ ಕಂತೆಗಳನ್ನು ಪುರಾವೆ ಇಟ್ಕೊಂಡು ಅವರನ್ನ ತೆಗಳುತ್ತೀಯಲ್ಲ ಸರೀನ ... ? ...

ಮಾತುಕತೆ ಸ್ಥಗಿತ ...

Prof Venkatesh : ಗಾಂಧೀಜೀ was a freedom beggar .(!!!) ಯಾರದ್ರೂ ನಮ್ಮ ದೇಶದ ಮೇಲೆ ಆಕ್ರಮಣ ಮಾಡಿದ್ರೆ ಅವರೆದುರು ಹೊರಾಡಬೇಕು .

ಅನೇಕರಿಂದ ನಗು ಪ್ರಶಂಸೆ .

ನಾನು : (frustrated ) ಲೋ ಸುಹಾಸ ಯಾಕೋ ಇವರು ಗಾಂಧೀಜೀ ಬಗ್ಗೆ ಇಷ್ಟು ಕೇವಲವಾಗಿ ಮತಾಡ್ತಾರೆ ... ? ಆಗ ನೇತಾಜಿ , ಭಗತ್ ಸಿಂಘ , ಆಜ಼ಾದ್ ಮುಂತಾದ revolutionaries ವಿಫಲವಾಗಿದ್ರು . ಇನ್ನೂ ಹೇಳಬೇಕು ಅಂದ್ರೆ ೧೮೫೭ ರಿಂದ ಎಲ್ಲಾ ಯುದ್ಧಗಳನ್ನು ನಮ್ಮನ್ನು ಅಳುತ್ತಿದ್ದ ಬ್ರಿಟೀಷರ ವಿರುದ್ಧ ಸೋತೆವು . ಯಾಕೆ ... ? ಒಗ್ಗಟ್ಟು ಇರಲ್ಲಿಲ್ಲ . ಸಾಮಾನ್ಯ ಜನರ participation nil  . ಆಗ ಗೆದ್ದದ್ದು ಒಬ್ಬರೇ - ಗಾಂಧೀಜೀ "ಅಹಿಂಸಾ" ಮಾರ್ಗದಿಂದ . ಅಹಿಂಸಾ ಮಾರ್ಗ , ಸತ್ಯಾಗ್ರಹ is it begging ... ?

ಮಾತು ಸ್ಥಗಿತ ...

ಇವತ್ತಿಗೂ ಕುಡ  ಮೌನ ಮೆರವಣಿಗೆ , ಚಲುವಳಿ , ರಾಸ್ತಾ ರೊಕೋ , ರೈಲ್ ರೊಕೋ , ಸತ್ಯಾಗ್ರಹ ... , ಇವೆಲ್ಲ ತಮ್ಮ ಹಕ್ಕುಗಳಿಗೆ ಹೊರಾಡಲು ಜನರ ಅಸ್ತ್ರಗಳು ಈ ನಮ್ಮ "Democracy"ನಲ್ಲಿ . is this begging..?

ಅವರ ಮೇಲೆ ಹಲವು ಹತ್ತು ತರಹದ ಅರೋಪಗಳು ಮಾಡಲಾಗಿವೆ . ಭಗತ್ ರನ್ನು ಉಳಿಸಲಿಲ್ಲ ಅಂತ , ಸಿದ್ಧಾಂತ ವಿರೋಧೀ ನಿಲುವು ಇದಕ್ಕೆ ಕಾರಣವಂತೆ . ಎಂದೂ ಹಿಂಸಾ ನೀತಿಯನ್ನು ಮಹಾತ್ಮರು ವಿರೋಧಿಸಿದರು , ನಿಜ ; ಆದರೆ ಅವರ ಹೇಳಿಕೆ - revoltionary ಜನರು ಈ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟರೆ ಅವರನ್ನು ತಬ್ಬಿ ಪ್ರಶಂಸಿಸುವವರಲ್ಲಿ ನಾನು ಮೊದಲಿಗ ... ಈ ಮಾತುಗಳು ಅವರ ನಿರ್ದಿಷ್ಟವಾದ ಗುರಿಯನ್ನು ತೋರಿಸುತ್ತದೆ . ವಿರೋಧ ನಿಲುವಾಗಿದ್ದರೂ ಭಗತ್ , ಆಜ಼ಾದ್ ರ ಮೇಲೆ ಅಪಾರ ಗೌರವವನ್ನು ಹೊಂದಿದ್ದರು . ಅವರೂ ಕೂಡ ಬಾಪುರನ್ನು ಗೌರವಿಸುತ್ತಿದ್ದರು .

ಕಾರಣ ಇಷ್ಟೆ ... ತಮ್ಮ ಜೀವನದ ಹಂಗನ್ನೇ ತೊರೆದು , ಸಂಸಾರ ಎಲ್ಲಾ ಬಿಟ್ಟು ಒಂದು ತುಂಡು ಬಟ್ಟೆ ಹಾಗು ಕೋಲು ಹಿಡಿದು ಹೊರಟಾಗ ಅವರ ಹಿಂದಿದ್ದ ಜನ ಮುರ್ಖರಲ್ಲ . ಅವರಲ್ಲಿದ್ದ ಅಪಾರ ವಿಷ್ವಾಸ ಹಾಗು ಅವರ ನಿಲುವಿನಲ್ಲಿದ್ದ ವಿಷ್ವಾಸ ... ಇವರು beggar..?

ಶೋಚನೀಯ ಅಂದ್ರೆ ನನ್ನ ಅನೇಕ ಸ್ನೇಹಿತರು ಮಹಾತ್ಮರ ತತ್ವಗಳ ವಿರುದ್ಧ . ಅವರ ಅಂತರಾರ್ಥ ತಿಳಿಯದೇ ಮಾತನಾಡುತ್ತಾರೆ . ಇದು ಕಲಿಯುಗ ಅಂತ ಗೊತ್ತಿತ್ತು ಆದರೆ "ಗೋಡ್ಸೆ - ಯುಗ" ಅಂತ ಗೊತ್ತಿರಲಿಲ್ಲ ...!

Rating
No votes yet

Comments