ಸಿನಿಮಾ ( ಈ ನಿಯಮ )

ಸಿನಿಮಾ ( ಈ ನಿಯಮ )

ಬರಹ

ಕನ್ನಡ ಚಿತ್ರರಂಗ ಅದೆಸ್ಟೋ ಕಲಾವಿದರನ್ನ ,ತ0ತ್ರಜ್ಞರನ್ನ ,ಸಂಗೀತ ಸಂಯೋಜಕರನ್ನ ,ಗೀತರಚನೆಕಾರರನ್ನ ಕೊಟ್ಟಂತ ಭಾರತದ .ಬಹು ದೊಡ್ಡ ಚಿತ್ರ ದೇಗುಲ ಅಂತಾನೆ ಹೇಳಬಹುದು .....ಆದರೆ ಬದಲಾದ ಸಮಾಜದಲ್ಲಿ ,ಈಗಿನ ಸಿನಿಮಾ ಎಂಬುದು ಕೇವಲ ಒಂದು ವ್ಯಾಪಾರಿ ಅ0ಗಡಿ ಆಗಿ ಉಳಿದಿದೆಯೇ ಹೊರತು ಸಮಾಜವನ್ನು ಬಿಂಬಿಸುವ ,ಜನರಲ್ಲಿ ಜಾಗೃತಿ ಮೂಡಿಸುವ ಮಾದ್ಯಮವಾಗಿ ಉಳಿದಿಲ್ಲ .ಯಾವುದೇ ಮಾದ್ಯಮವಿರಲಿ ಅದು ಜನರ, ಸಮಾಜದ ಬಿಂಬವಾಗಿರಬೇಕೆ ಹೊರತು ,ಸಮಾಜ ಅದರ ಪ್ರತಿರುಪವಾಗಿರಬಾರದು..ಆದರೆ ನಮ್ಮ ದುರ್ಭಾಗ್ಯವೋ ಏನೋ ....ಯಾವ್ದೂ ಆಗಬಾರ್ದೋ ಅದೇ ಆಗುತ್ತಿದೆ .
ಸಿನಿಮಾ ಎಂಬುದು ,ನಿತ್ಯ ಬದುಕಿನ ಇನ್ನೊಂದು ಮುಖ ಅಂದರೆ ತಪ್ಪಾಗಲಾರದು ,ಆದರೆ ಈಗಿನ ಬದುಕು ಸಿನಿಮಾದ ಒಂದು ಭಾಗವಾಗಿ ಬಿಟ್ಟಿದೆ ಏನೋ ಅನ್ನಿಸುತ್ತದೆ .ಹಿಂದಿನ ಕಾಲದಲ್ಲಿ ಯಕ್ಷಗಾನ ಸಿನಿಮಾದ ಜಾಗದಲ್ಲಿತ್ತು (ಈಗಲೂ ನಮ್ಮ ಕಡೆ ಇದೆ ). ಪ್ರಸಕ್ತ ಸಿನಿಮಾಗಳು ಸಂದೇಶ ನೀಡುವುದು ಹಾಗಿರಲಿ ನೋಡುವುದೇ ಕಸ್ಟಸಾದ್ಯ ಅನ್ನೋ ಹಾಗಿರುತ್ತವೆ .
ನನ್ನನ್ನು ಕಾಡುತ್ತಿರುವ (ಬಹುಶ ನಿಮ್ಮೆಲ್ಲರನ್ನೂ ) ಕೆಲವು ಪ್ರಶ್ನೆಗಳೆಂದರೆ :
ಸಿನಿಮಾಕ್ಕೆ ಗೂಂಡಾಗಿರಿ ಮತ್ತು ಅತಿಯಾದ ಎಕ್ಸ್‌ಪೋಸಿಂಗ್ನ ಅವಶ್ಯಕತೆ ಇದಯೆ ?
ಕಲಾತ್ಮಕ ಸಿನಿಮಾಗಳು ಅಳಿಉತ್ತಿವೆ ಅನ್ನಿಸುವುದಿಲ್ಲವೇ ?

ಇಂತಿ

ವಿನಯ
(ವ್ಯಾಕರಣ ಹಾಗೂ ಇತರೆ ಕಡೆ ತಪ್ಪಿದ್ದರೆ ಕ್ಷಮೆ ಇರಲಿ )