" ಸ್ಲಮ್ ಡಾಗ್ ಮಿಲಿಯನೇರ್ " ಚಲನಚಿತ್ರದಲ್ಲಿ, ' ದರ್ಶನ್ ದೊ ಘನಶ್ಯಾಮ್ ' ಹಾಡನ್ನು ಬರೆದವರು ಯಾರು ? ಎನ್ನುವುದು ಪ್ರಮುಖ ಪ್ರಶ್ನೆಗಳಲ್ಲೊಂದಾಗಿದೆ !

" ಸ್ಲಮ್ ಡಾಗ್ ಮಿಲಿಯನೇರ್ " ಚಲನಚಿತ್ರದಲ್ಲಿ, ' ದರ್ಶನ್ ದೊ ಘನಶ್ಯಾಮ್ ' ಹಾಡನ್ನು ಬರೆದವರು ಯಾರು ? ಎನ್ನುವುದು ಪ್ರಮುಖ ಪ್ರಶ್ನೆಗಳಲ್ಲೊಂದಾಗಿದೆ !

ಬರಹ

ಈ ಚಿತ್ರ, ಗಲ್ಲಾ ಪೆಟ್ಟಿಗೆಯಲ್ಲಿ ವಿಕ್ರಮವನ್ನು ಸಾಧಿಸಿರುವ ವಿಶಯ, ಈಗಾಗಲೇ ಹಳೆಯದೇನೋ ಅನ್ನಿಸಿದೆ. ೮ ಆಸ್ಕರ್ ಪ್ರಶಸ್ತಿಗಳು. ಗಾಂಧಿಚಿತ್ರಕ್ಕೂ ಅಷ್ಟೆ. ಗಾಂಧಿಚಿತ್ರ ತಯಾರಿಸಲು ಪಟ್ಟ ಶ್ರಮವೆಷ್ಟು ? , ನೈಜ ಪ್ರಾಕೃತಿಕ ಸೆಟ್ ಗಳ ರಚನೆ, ಪ್ರತಿಹಂತದಲ್ಲೂ ಪಾಲಿಸಬೇಕಾಗಿದ್ದ ನೈಜತೆಯ ಪರೀಕ್ಷೆ. ಅದಕ್ಕಾಗಿಯೇ ಪುನರ್ನಿರ್ಮಿಸಬೇಕಾಗಿದ್ದ ಕರಾರುವಾಕ್ ಅಪ್ಪಟ ಸನ್ನಿವೇಶಗಳ ಅಗತ್ಯತೆ. ಅಪಾರ ಹಣದ ವ್ಯಯ, ಸಮರ್ಥ ಪಾತ್ರಗಳಿಗೆ ಹುಡುಕಾಟ, ಅದಕ್ಕೆ ಪೋಷಕವಾದ ಅನೇಕಾನೇಕ ಸಿದ್ಧತೆಗಳು ; ಪೋಷಾಕುಗಳ ಹೊಂದಾಣಿಕೆ, ಚಿಕ್ಕ-ಪುಟ್ಟ ಅತಿ ಸಂಕೀರ್ಣ ದೃಶ್ಯಗಳ ಸಿದ್ಧತೆ, ಚಿತ್ರನಿರ್ಮಾಣದ ಎಲ್ಲಾ ಮಟ್ಟದಲ್ಲೂ ಸಂಶೋಧನೆ, ಇತ್ಯಾದಿ ಇತ್ಯಾದಿ. ಇದ್ಯಾವುದೂ ಇಲ್ಲದೆ, ಕೇವಲ, ಸಂಗೀತ, ಮತ್ತು ಕೊಳೆಗೇರಿಯ ವಾಸಿಗಳ, ಕೊಳಕು ಬಟ್ಟೆ, ಹರಿದ ಶರ್ಟು, ಕೆದರಿದ ಕೂದಲು, ಕೊಳಕು, ಅರೆನಗ್ನ ಮೈಯ್ನ ಹುಡುಗ-ಹುಡುಗಿಯರು, ಹಾಗೂ ಪರಿಸರಗಳನ್ನೇ ತೆಗೆದುಕೊಂಡು ಅತಿಕಡಿಮೆ ಸನ್ನದ್ಧತೆಯಿಂದ ಸದ್ದಿಲ್ಲದೆ ನಿರ್ಮಾಣಗೊಂಡ ಚಿತ್ರ, ವಿಶ್ವದಚಲನಚಿತ್ರ ಜಗತ್ತಿನಲ್ಲಿ ಒಂದು ಹೊಸ ಅಧ್ಯಾಯವನ್ನು ಸೃಷ್ಟಿಸಿ, ಹೊಸ ಇತಿಹಾಸದ ಪುಟವನ್ನೇ ತೆರೆದಿಟ್ಟಿದೆ !


ದಶಕಗಳ ಚಿತ್ರರಂಗದ ನಟನೆ, ಚಿತ್ರನಿರ್ಮಾಣ, ಹಾಗೂ ಚಿತ್ರಸಂಗೀತದಲ್ಲಿ ನುರಿತು ಹೆಸರುಮಾಡಿದ ದಿಗ್ಗಜರು, ಮೌನದಿಂದ ತೆರೆಮರೆಗೆ ಸರಿದು ಈ ಚಿತ್ರದ ಆಗಮನವನ್ನು ಸ್ವಾಗತಿಸಿದ್ದಾರೆ. ಈಗಿನ ತನಕ, ತಮ್ಮ ಅಪಾರ ಅನುಭವದಿಂದ, ಹಿಂದೀ ಚಲನ-ಚಿತ್ರರಂಗದಲ್ಲಿ ಆಸ್ಕರ್ ಪ್ರಶಸ್ತಿ ಪಡೆಯಲೋಸುವ, ಮಹಾ-ಮಹಾ-ಘಟಾನು-ಘಟಿಗಳು ತಿಪಿರುಲಾಗಹಾಕುತ್ತಿರುವಾಗ, ಈ ಧಾರಾವಿ-ಕೊಳೆಗೇರಿಯ ಲ್ಲಿ ನಿರ್ಮಿತ, ಸರಳಚಿತ್ರ ಮಾಡಿದ, ಮ್ಯಾಜಿಕ್, ಸೃಷ್ಟಿಸಿದ ಒಂದು ಇತಿಹಾಸ, ಬಾಲಿವುಡ್ ಚಿತ್ರನಿರ್ಪಾಕರ ತಲೆ ಕೆಡೆಸಿದೆ !


 ' ಆಸ್ಕರ್ ಪ್ರಶಸ್ತಿಯ ಕಿರು-ಇತಿಹಾಸ ' :


೧೯೨೭ ರಲ್ಲಿ ಸ್ಥಾಪಿತವಾದ ' ಅಕಾಡೆಮಿ ಆಫ್ ಮೋಶನ್ ಪಿಕ್ಚರ್ಸ್ ಆರ್ಟ್ಸ್ ಅಂಡ್ ಸೈನ್ಸ್ ಎಂಬ ಸಂಸ್ಥೆ ಕೊಡಲ್ಪಟ್ಟಿತು. ೧೯೨೯ ರಲ್ಲಿ 'ರೂಝ್ವೆಲ್ಟ್ ಹಾಲ್' ನಲ್ಲಿ ನಡೆದ ಪ್ರಥಮ ಆಸ್ಕರ್ ಸಮಾವೇಷದಲ್ಲಿ ಉಪಸ್ಥಿತರಿದ್ದ ಆಮಂತ್ರಿತರು ಕೇವಲ ೨೭೦ ಜನಮಾತ್ರ. ಇದೀಗ ೮೧ ನೆಯ ಅವಾರ್ಡ್ ಸಮಾರಂಭದಲ್ಲಿ ( ೯, ಮಾರ್ಚ್, ೨೦೦೯ ರಲ್ಲಿ ) ಹಾಲಿವುಡ್ ನ 'ಕೊಡಕ್ ಥಿಯೇಟರ್,' ನಲ್ಲಿ ಆಗಮಿಸಿದವರ ಸಂಖ್ಯೆ, ೩೫,೦೦೦ ಜನ. ' ಸ್ಲಮ್ ದಾಗ್' ಚಿತ್ರದಲ್ಲಿ ಒಂದು ಚಿಕ್ಕ ತಪ್ಪು ಕಾಣಿಸಿಕೊಂಡಿರುವುದನ್ನು ಮುಂಬೈ ನ ಮರಾಠಿ ಪತ್ರಿಕೆಯೊಂದು ವರದಿಮಾಡಿತ್ತು.


ಅದನ್ನು ಗಮನಿಸಿದ ನಮ್ಮ ಮುಂಬೈ ನ ಹಿರಿಯ ಅಂಕಣಕಾರ, 'ಪ್ರಿಯತಮ' ರವರು ನಮ್ಮಮುಂದೆ ಎತ್ತಿಹಿಡಿದಿದ್ದಾರೆ. ಪ್ರಿಯತಮರು, ಹಿಂದೀ ಚಿತ್ರರಂಗದ ಒಳ-ಹೊರಗುಗಳನ್ನು ಚೆನ್ನಾಗಿ ಬಲ್ಲವರು. ಅದರ ಬಗ್ಗೆ ಅತಿಹೆಚ್ಚಿನ ಜ್ಞಾನವಿರುವವರು. ಮೇಲಾಗಿ ಈಗಾಗಲೇ ಲತಾಮಂಗೇಶ್ಕರ್, ಓಪಿ. ನಯ್ಯಾರ್, ಹೃಶಿಕೇಶ ಮುಖರ್ಜಿಯಂತಹ ಕಲಾವಿದರ ಬಗ್ಗೆ ಸಮರ್ಥವಾಗಿ ಬರೆದು ' ಕರ್ನಾಟಕ ಮಲ್ಲ', ದಿನ-ಪತ್ರಿಕೆಯಲ್ಲಿ, ಪ್ರಕಟಿಸಿರುತ್ತಾರೆ. ತಪ್ಪಿನ ವಿವರ ಹೀಗಿದೆ : ಚಿತ್ರದ ನಾಯಕ, ಜಮಾಲ್ ಮಲ್ಲಿಕ್, (ದೇವ್ ಪಟೇಲ್) ಕಾಲ್ ಸೆಂಟರ್ ನ ಚಹಾ ಮಾರುವ ಹುಡುಗ. ’ಕೌನ್ ಬನೇಗಾ ಕರೋಡ್ ಪತಿ ಶೋ,’ ನಲ್ಲಿ ಭಾಗವಹಿಸುವ ಸುಯೋಗ ಅವನಿಗೆ ಒದಗುತ್ತದೆ. ಅಲ್ಲಿ ಅವನಿಗೆ ಕೇಳಿದ ಪ್ರಶ್ನೆಗೆ ತಪ್ಪು ಉತ್ತರ ಕೊಡುತ್ತಾನೆ. ಆದರೆ, ಅವನುಕೊಟ್ಟ ಉತ್ತರ ಸರಿಯೆಂದು ೨ ಕೋಟಿರೂಪಾಯಿ ಪ್ರಶಸ್ತಿ ಪಡೆದು ಕರೋಡ್ ಪತಿಯಾಗುತ್ತಾನೆ. ಅವನು ಉತ್ತರಿಸಿದ ಪ್ರಶ್ನೆ, ' ದರ್ಶನ್ ದೊ ಘನಶ್ಯಾಮ್ ' ಎಂಬ ಹಾಡನ್ನು ಬರೆದವರ್ಯಾರು ? ಅದಕ್ಕೆ ಜಮಾಲ್ ಉತ್ತರ, ’ಸೂರ್ದಾಸ್,’ ಯೆಂದು.


ಆದರೆ ಚಿತ್ರದಲ್ಲಿ ಅವನ ಉತ್ತರ ಸರಿಯೆಂದು ತೋರಿಸಲಾಗಿದೆ. ಆದರೆ ವಾಸ್ತವದಲ್ಲಿ ಈ ಹಾಡು ಪ್ರಸಿದ್ಧ ಚಿತ್ರನಿರ್ಮಾಪಕ, ದೇವೇಝ್ಂದ್ರ ಗೋಯಲ್ ರವರು ನಿರ್ಮಿಸಿದ ' ನರಸಿಂಹ ಭಗತ್,' ಎಂಬ ಚಿತ್ರದ ಗೋಪಾಲ್ ಸಿಂಹ್ ನೇಹಾಲಿ ಬರೆದ ಹಾಡಾಗಿದೆ.


ಈ ಚಿತ್ರದ ಸಂಗೀತಕಾರ, ರವಿ. ರವಿ ಮತ್ತು ಸಿಂಹ್ ನಮ್ಮ ದೇಶದ ಭಿಕ್ಷುಕರಿಗೆ ಅತಿಪ್ರಿಯರು. ಏಕೆಂದರೆ ಅವರು ತಯಾರಿಸಿದ ಪ್ರತಿಚಿತ್ರದಲ್ಲೂ ಈತರಹದ ಒಂದು ಜನಪ್ರಿಯ ಗೀತೆ ಇದ್ದೇ ಇರುತ್ತದೆ. ಈ ಹಾಡನ್ನು ಭಿಕ್ಷುಕರು, ಸಾರ್ವಜನಿಕ ಸ್ಥಳಗಳಾದ ರೈಲ್ವೆ ಸ್ಟೇಷನ್, ಗಾರ್ಡನ್, ರೈಲ್ವೆ ಡಬ್ಬಿಗಳಲ್ಲಿ ಹಾಡಿ ಹೊಟ್ಟೆತುಂಬಿಕೊಳ್ಳುತ್ತಿದ್ದರೆಂಬ ಮಾತು ಜನಜನಿತವಾಗಿದೆ. ಗುಲ್ಝಾರ್ ರಂಥ ಪ್ರಖ್ಯಾತ, ಹಾಗೂ ಸಮರ್ಥ ಗೀತರಚನಾಕಾರರಿದ್ದಾಗ್ಯೂ ಇಂತಹ ತಪ್ಪು ನಡೇದದ್ದಾದರೂ ಹೇಗೆ ?


ಏನೋ ಹೇಗಾದರೂ ಇರಲಿ ಬಿಡಿ ; ಸದ್ಯ ಬ್ರಿಟಿಷ್ ಚಿತ್ರ-ನಿರ್ಮಾಣದಡಿಯಲ್ಲಿ ೫ ಕೋಟಿ ರೂಪಾಯಿ ವೆಚ್ಚದಲ್ಲಿ ಕ್ರಿಶ್ಟಿಯನ್ ಕಾಲ್ಸನ್ ಡೇನಿ ಬೋಯಲ್ ರವರ ಉತ್ತಮ ನಿರ್ದೇಶನದ ನಿರ್ಮಿಸಿದ, ಭಾರತದ ಬಗೆಗಿನ ಚಿತ್ರಕ್ಕೆ ೮ ಆಸ್ಕರ್ ಗಳ ಪ್ರಶಸ್ತಿ ಸಿಕ್ಕಿತಲ್ಲಾ ಎಂದು ಸುಮ್ಮನಿರೋಣ ಅಂತೀರಾ ? ಈ ಸವಾಲನ್ನು ಹಾಕಿರುವವರು ನಮ್ಮ ಮುಂಬೈ ನ ಪ್ರೀತಿಯ, ಗೌರವಾನ್ವಿತ, ಹಿರಿಯ-ಅಂಕಣಕಾರ, ' ಪ್ರಿಯತಮರವರು.


ಅವರ ಮಾತಿನಲ್ಲಿರುವ ನೈಜತೆಗೆ ನಾವು ಪ್ರಾಮುಖ್ಯತೆ ಕೊಡಬೇಕು ! ಈ ಚಿತ್ರದಿಂದ ಜಗತ್ತಿಗೇ ಭಾರತದ ಕೊಳೇಗೇರಿಗಳು, ಬಡತನ, ನಿರುದ್ಯೋಗ, ಒಳಜಗಳಗಳು, ಮೂರ್ಖತನ, ಮತ್ತು ಇನ್ನೂ ಹಲವು ಹೀನ-ಮುಖಗಳ ದರ್ಶನ ಮಾಡಿಸಿದಂತಾಯಿತಲ್ಲ, ಎನ್ನುವ ವಿಷಾದ ಕೆಲವರಿಗೆ ಇದೆ. ಅದನ್ನು ತಪ್ಪು ಎಂದು ಕರೆಯಲು ನಾವ್ಯಾರು ? -('ಮುಖಾಂತರ'-


 


'ಪ್ರಿಯತಮ', 'ಕರ್ನಾಟಕ ಮಲ್ಲ ದಿನಪತ್ರಿಕೆ ', ಮುಂಬೈ, ೦೭-೦೪-೨೦೦೯, ಪುಟ.೪ ರ ಆಧಾರ).