ಜಗವೇ ನಾಟಕರಂಗ ಅವ ಸೂತ್ರಧಾರ

ಜಗವೇ ನಾಟಕರಂಗ ಅವ ಸೂತ್ರಧಾರ

ದೇವರು ನಗುತ್ತಾನೆ

ಅಯ್ಯೋ ಮೂರ್ಖ ಮಾನವ
ಜಗದಲ್ಲಿ ನಾನಿಲ್ಲ
ಎಂದು ವಾದಿಸಿದರೇನು ಫಲ
ನಿನ್ನೊಳಗಾ ಭಾವ ಮೂಡಿಸಿದವ ನಾನಲ್ಲವೇ?

ಜಗದಾಚಿನ ಲೋಕವ ಹುಡುಕಿ ಏನು ಮಾಡುವೆ
ನಿನ್ನದೇ ಬದುಕಿನ ಅಂತರಾಳ ಕಾಣದೇ ನಿನಗೆ
ನಿನ್ನೊಂದಿಗ್ರಿರುವವರ ದ್ವೇಷಿಸಿ ಕಾಣದವರ ಹುಡುಕೆ
ಬಂತೇನು ಭಾಗ್ಯ

ಬಾಳ ಪ್ರತಿ ಪುಟದಲ್ಲಿಯೂ ಸಹಿ ಮಾಡಿದವ ನಾ
ಅದರಂತೆ ಸಾಗುತಿಹುದು ನಿನ್ನ ಬಾಳು
ಅರಿವಿರದೆ ಅಟ್ಟಹಾಸದಿ ನಗುತಿರುವೆ ನೀ

ವಿಜ್ನಾನದಿ ನೀ ತೋರಬಲ್ಲೆಯಾ ನಾಳೆಯಾ?
ಬರಿ ಗೈಯ್ಯಲ್ಲಿ ಸೂರ್ಯನ ಹಿಡಿಯಬಲ್ಲೆಯಾ?
ನದಿಯೊಂದ ಸೃಷ್ಟಿಸು ನೀನೊಮ್ಮೆ
ಪರ್ವತವ ಮಾಡು ಹಾಗೊಮ್ಮೆ

ಸೃಷ್ಟಿಯಲ್ಲಿ ಪ್ರತಿ ಸೃಷ್ಟಿ ಮಾಡಿ ಗೆಲ್ಲುವೆಯಾ?
ಜೀವವಿರದ ಯಂತ್ರ ಗೊಂಬೆ ಮಾಡಿ ನಲಿವೆಯಾ?
ಜೀವವಿರದ ಯಂತ್ರ ಮಾಡೆ ಏನು ಸಾಧನೆ
ಯಂತ್ರಗೊಂಬೆಗೆ ಜೀವ ತರಲು ಸಾಧ್ಯವೆ?

ಅದಿ ಕಾಲದಿ ಬಂದ ಧರ್ಮದಿ
ಶ್ರದ್ದೆ ಕರ್ತವ್ಯದ ತಳುಕಿದೆ
ಆಧುನಿಕತೆಯ ಹೆಸರಿನಲ್ಲಿ ಮೆರೆವ ನಿನ್ನಲ್ಲಿ
ಅಹಂ, ನಿರ್ಲಕ್ಷ್ಯದ ಕೊಳಕಿದೆ

ಎಲ್ಲ ಬಲ್ಲೆನೆಂಬ ಗರ್ವದಿ ಎನ್ನ ಜರಿದರೇನು ಫಲ
ಫಲಾಫಲಗಳ ಒಡೆಯ ನಾ
ಮಾಡಿದುಂಡ ಇತಿಹಾಸದನೇಕ
ಸುರಾಸುರರ ಪಟ್ಟಿಗೆ ಸೇರುವೆ ನೀ

ಸುಖದ ಸೋಪಾನದಲ್ಲಿ ಮಲಗಿದವನಿಗೆ
ನನ್ನ ಹಂಗೇಕೆ
ಕಷ್ಟ ಕುಲುಮೆಯಲ್ಲಿ ಬೇಯುವವನಿಗೆ
ಮೊರೆಯೊಂದೆ ದಾರಿ ನನ್ನ ಕಟಾಕ್ಷಕೆ

Rating
No votes yet

Comments