ಕಬ್ಬಿಣದ ರೆಕ್ಕೆಗಳಿಗೆ ಹಾರಲಾದೀತೆ?

ಕಬ್ಬಿಣದ ರೆಕ್ಕೆಗಳಿಗೆ ಹಾರಲಾದೀತೆ?

ಹೊಳೆವ ಕಣ್ಗಳಲ್ಲಿ ಆಕಾಶದ ನೀಲಿ,
ಮೋಡಗಳೆಲ್ಲವು ಕಚಗುಳಿ ಇಟ್ಟವು
ಕನಸಲಿ ತೇಲಿ ತೇಲಿ,
ಕಾತರದ ಮನದಲಿ ಸ್ವಚ್ಚಂದದ ಮಿಡಿತ,
ದಿಟ್ಟಿಪ ನೋಟಕೆ ಹಾರಲೇ ತುಡಿತ.

ನೆಲದ ಹಂಗನ್ನು ತೊರೆದು,
ನೀಲಾಕಾಶದಿ ಮೆರೆದು
ಗಾಳಿಯಲಿ ತಾನೊಂದಾಗುವ ಬಯಕೆ,
ಮುಗಿಲೆತ್ತರಕೆ ಹಾರಿ
ತನ್ನೆಲ್ಲವನ್ನು ಮೀರಿ
ನಿರ್ಭಾರದಿ ಹಗುರಾಗುವ ಮನಕೆ.

ಕುಳಿತಲ್ಲೇ ಕಟ್ಟುತಿದೆ ಕನಸ ಗೋಪುರ,
ಕಣ್ಸೆಳೆವ ಬಾನದೆಷ್ಟು ಸುಂದರ,
ಒಟ್ಟುಗೂಡಿಸಲೆತ್ನಿಸುತ್ತಿದೆ ತನ್ನಲ್ಲಿನ ಕಸುವು,
ಕ್ಷಣ ಕ್ಷಣವೂ ಹೆಚ್ಚುತ್ತಿದೆ ಹಾರುವ ಹಸಿವು,

ಯೋಗ್ಯತೆಯ ಮೀರಿದ ಕನಸದು ನನಸಾದೀತೆ,
ಕಬ್ಬಿಣದ ರೆಕ್ಕೆಗಳಿಗೆ ಎಂದಾದರು ಹಾರಲಾದೀತೆ?

(ಏನೋ ಬರೆಯ ಹೊರಟು ಏನೋ ಆಗಿದೆ ಈ ಕವಿತೆ. ಇದನ್ನು ಇನ್ನಷ್ಟು ಚಂದಗೊಳಿಸುವಾಸೆ, ನಿಮ್ಮ ಸಲಹೆಗಳಿಗೆ ಸ್ವಾಗತ.)

Rating
No votes yet

Comments