ಮುಂಬಯಿಯಲ್ಲಿ ಸಿ. ಅಶ್ವಥ್

ಮುಂಬಯಿಯಲ್ಲಿ ಸಿ. ಅಶ್ವಥ್

ಬರಹ

ಮುಂಬಯಿಯ ಕನ್ನಡಿಗರ ಅತ್ಯಂತ ಪ್ರೀತಿಯ ಸಂಸ್ಥೆಯಾಗಿರುವ, ಮಾಟುಂಗಾದ ಕರ್ನಾಟಕ ಸಂಘಕ್ಕೆ ಈ ಬಾರಿ ಅಮೃತ ಮಹೋತ್ಸವದ ಸಂಭ್ರಮ. ಕಳೆದ ಜೂನ್ ತಿಂಗಳಲ್ಲಿ ತನ್ನ ೭೫ನೇ ವರ್ಷಕ್ಕೆ ಕಾಲಿಟ್ಟ ಸಂಘ, ವರ್ಷದುದ್ದಕ್ಕೂ ಹಲವಾರು ವಿಶೇಷ ಹಾಗೂ ಅರ್ಥಪೂರ್ಣ ಕಾರ್ಯಕ್ರಮಗಳನ್ನು ಆಯೋಜಿಸುತ್ತ ಬಂದಿದೆ. ಸಂಘವು ಮುಂಬಯಿಯ ಹಲವಾರು ಸಂಘ ಸಂಸ್ಥೆಗಳ ಜೊತೆಗೂಡಿ ಹಲವಾರು ಸಾಹಿತ್ಯಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿ, ಮುಂಬಯಿಯ ಮೂಲೆಮೂಲೆಗೆ ಕನ್ನಡದ ಕಂಪನ್ನು ಹರಡಿದ್ದು, ನಿಜಕ್ಕೂ ಶ್ಲಾಘನೀಯ.

ಈ ಸಂಭ್ರಮದ ಅಂಗವಾಗಿ, ಬರುವ ರವಿವಾರ ದಿನಾಂಕ ೧೯/೦೪/೨೦೦೯ ರಂದು ಸಂಜೆ ೫.೩೦ ಕ್ಕೆ, ಮುಂಬಯಿಯ ಶಣ್ಮುಖಾನಂದ ಸರಸ್ವತಿ ಸಭಾಗೃಹದಲ್ಲಿ, ಕನ್ನಡದ ಖ್ಯಾತ ಗಾಯಕ ಹಾಗೂ ಸಂಗೀತ ನಿರ್ದೇಶಕ ಶ್ರೀ ಸಿ. ಅಶ್ವಥ್ ಅವರ ’ಕನ್ನಡವೇ ಸತ್ಯ’ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಶಣ್ಮುಖಾನಂದ ಸಭಾಗೃಹದಲ್ಲಿ ನಡೆಯುತ್ತಿರುವ ಮೊದಲ ಕನ್ನಡ ಕಾರ್ಯಕ್ರಮವಿದು. ಅಶ್ವಥ್ ಅವರ ಜೊತೆ ಎಂ.ಡಿ ಪಲ್ಲವಿ, ಸುಪ್ರಿಯಾ, ಸಂಗೀತಾ ಕಟ್ಟಿ, ರವಿ ಮುರೂರು ಹಾಗೂ ವಿನಯ್ ಕುಮಾರರಂಥ ಸುಪ್ರಸಿದ್ಧ ಗಾಯಕರಲ್ಲದೇ, ೨೧ ಜನ ಪಕ್ಕವಾದ್ಯದವರ ತಂಡವೂ ಇರುವುದು ಈ ಕಾರ್ಯಕ್ರಮದ ವಿಶೇಷ.

ಈ ಕಾರ್ಯಕ್ರಮದಲ್ಲಿ ದ.ರಾ.ಬೇಂದ್ರೆ, ನರಸಿಂಹಸ್ವಾಮಿ, ಅಡಿಗ, ಕಣವಿ ಹಾಗೂ ಎಚ್. ಎಸ್. ವೆಂಕಟೇಶಮೂರ್ತಿ ಮುಂತಾದ ಕನ್ನಡದ ಖ್ಯಾತನಾಮ ಸಾಹಿತಿಗಳ ಇಪ್ಪತ್ನಾಲ್ಕು ಹಾಡುಗಳನ್ನು ಕೇಳಿ ಮೈಮರೆಯುವ ಅಪೂರ್ವ ಅವಕಾಶ ಮುಂಬಯಿಯ ಕನ್ನಡಿಗರಿಗೆ ದೊರಕಲಿದೆ. ಕಾರ್ಯಕ್ರಮದಲ್ಲಿ ನೂರಾರು ಖ್ಯಾತ ಸಂಗೀತಗಾರರು ಹಾಗೂ ಬಾಲಿವುಡ್ ಸಂಗೀತ ನಿರ್ದೇಶಕರೂ ಮತ್ತು ಗಾಯಕರೂ ಪಾಲ್ಗೊಳ್ಳಲಿದ್ದಾರೆ.

ಮುಂಬಯಿಯಲ್ಲಿರುವ ಸಂಪದಿಗರು ಹಾಗೂ ಆ ಸಮಯದಲ್ಲಿ ಮುಂಬಯಿಗೆ ಭೇಟಿ ನೀಡಲಿರುವ ಸಂಪದಿಗರು, ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿಚ್ಛಿಸುತ್ತಿದ್ದರೆ, ಕೆಳಕಂಡ ದೂರವಾಣಿ ಸಂಖ್ಯೆಗೆ ಫೋನಾಯಿಸಿ, ತಮ್ಮ ಉಚಿತ ಪಾಸ್ ನ್ನು ಪಡೆದುಕೊಳ್ಳಬಹುದು.

ಹೆಚ್ಚಿನ ಮಾಹಿತಿಗಾಗಿ:

ಶ್ರೀ. ವಿಶ್ವನಾಥ್ ಶೆಟ್ಟಿ, ಪ್ರಬಂಧಕರು, ಕರ್ನಾಟಕ ಸಂಘ, ಮಾಟುಂಗಾ.
ದೂರವಾಣಿ: 022- 24379645/ 24377022
ಮಿಂಚಂಚೆ: karnataka.sangha@yahoo.com
ವೆಬ್ ಸೈಟ್: http://www.karnatakasanghamumbai.com

ಕಾರ್ಯಕ್ರಮಕ್ಕೆ ಖಂಡಿತ ಬನ್ನಿ. ಕಾಯುತ್ತಿರುವೆವು..