ಒಬಾಮಾ, ಲ್ಯಾರಿ ಪೇಜ್, ಗೂಗಲ್ ಮತ್ತು ಮಿನುಗೋ ದೀಪಗಳು !!

ಒಬಾಮಾ, ಲ್ಯಾರಿ ಪೇಜ್, ಗೂಗಲ್ ಮತ್ತು ಮಿನುಗೋ ದೀಪಗಳು !!

ಒಬಾಮಾ ಅವರ Audacity of Hope  ಅನ್ನೋ ಪುಸ್ತಕದಿಂದ ಆಯ್ದ ಕೆಲವು ಸಾಲುಗಳನ್ನು ಗೆಳೆಯ ರೋಹಿತ್ ಕಳಿಸಿದ್ರು. ಒಬಾಮಾ ಅವರು ತಮ್ಮ ಪುಸ್ತಕದಲ್ಲಿ ಗೂಗಲ್ ಕಂಪನಿಯ ಸ್ಥಾಪಕ ಲ್ಯಾರಿ ಪೇಜ್ ಬಗ್ಗೆ ಬರೆಯುತ್ತಾ ಈ ಕೆಳಗಿನ ಸಾಲುಗಳನ್ನು ಬರೆಯುತ್ತಾರೆ.

Larry Page's Google HQ office in Mountain View has a large flat
screen displaying a 3-D model of the globe with lights blinking at
every spot from where Google is receiving a search-hit in real-time.
And these lights are colour coded based on the language in which the search originated!

ಇಲ್ಲೇ ನೋಡಿ, ಜಗತ್ತಿನ ಎಲ್ಲ ಮುಖ್ಯ ಭಾಷೆಗಳ ಬಗ್ಗೆ ಮತ್ತು ಆ ಭಾಷೆಗಳಿಗಿರುವ ಬ್ಯುಸಿನೆಸ್ ಸಾಮರ್ಥ್ಯದ ಬಗ್ಗೆ ಗೂಗಲ್ ಕಂಪನಿಯ ಸಿ.ಇ.ಓ  ನೇ ಎಷ್ಟು ತಲೆ ಕೆಡಿಸಿಕೊಳ್ಳುತ್ತಾರೆಂದು !!
 
ಜಗತ್ತಿನ ಎಲ್ಲ ಮುಖ್ಯ ಭಾಷೆಗಳಿಗಿರುವ ಶಕ್ತಿಯನ್ನು ಎಲ್ಲರಿಗಿಂತ ಚೆನ್ನಾಗಿ ಅರಿತವರು ಗೂಗಲ್ ಕಂಪನಿಯವರು. ಅವರ ಆರ್ಕುಟ್, ಬ್ಲಾಗರ್ ನಲ್ಲಿ ಕನ್ನಡವನ್ನು ತಂದ ಅವರು ಇತ್ತಿಚೆಗೆ ಅವರ ಉಚಿತ ಮಿಂಚೆ ವ್ಯವಸ್ಥೆ ಜಿಮೇಲ್ ನಲ್ಲೂ ನೇರವಾಗಿ ಕನ್ನಡದಲ್ಲೇ ಮಿಂಚೆಗಳನ್ನು ಕಳಿಸುವ ವ್ಯವಸ್ಥೆಯನ್ನು ತಂದಿದ್ದಾರೆ.
 
ಗೂಗಲ್ ನಂತಹ ಕಂಪನಿಗಳು ಕನ್ನಡ ಸೇರಿದಂತೆ ಭಾರತದ ಭಾಷೆಗಳ ಮಹತ್ವ ಅರಿಯುತ್ತಿರುವುದು, ಈ ಭಾಷೆಗಳಲ್ಲಿ ತಂತ್ರಾಂಶ ಅಭಿವೃದ್ಧಿಯತ್ತ ಗಮನ ಕೊಡುತ್ತಿರುವುದು ಗಮನಿಸಿದರೆ ನಮ್ಮ ಭಾಷೆಗಿರುವ ದುಡ್ಡು ಹುಟ್ಟಾಕೋ ಸಾಮರ್ಥ್ಯವನ್ನು ಚೆನ್ನಾಗೇ ಅರ್ಥ ಮಾಡಿಕೊಂಡಿದ್ದಾರೆ ಅನ್ಸುತ್ತೆ. ಸುಮ್ ಸುಮ್ನೆ ಇದನ್ನೆಲ್ಲ ಮಾಡೋಕೆ ಅವರಿಗೇನು ತಿಕ್ಲಾ? :)

 

Rating
No votes yet

Comments