ಏನೋ ಬರೆಯಬೇಕೆನಿಸಿದೆ ...

ಏನೋ ಬರೆಯಬೇಕೆನಿಸಿದೆ ...

ರಾತ್ರಿ (ಅಥವಾ ಬೆಳಿಗ್ಗೆ) ೩:೩೦ ಆಗಿದೆ. ಯಾವುದೋ ತರಾತುರಿ ಕೆಲಸಕ್ಕೆ ಅಂತ ಪ್ರಯೋಗಶಾಲೆಗೆ ಬಂದವನು ಕೆಲಸ ಮಾಡದೇ ಏನೇನೋ ಯೋಚಿಸ್ತಾ ಕೂತಿದೇನೆ. ಏನೋ ಗೀಚಿದ್ದೇನೆ. ಓದಿ ನೋಡಿ. ವಿಚಿತ್ರ ಅಂದ್ರೆ ಇವುಗಳನ್ನು ಓದಿದ ನೆನಪಿಲ್ಲವಾದರೂ, ಇವು ನನ್ನ ಸ್ವಂತದ್ದಾ ಅಂತ ಸಂದೇಹ ಬರ್ತಾ ಇದೆ.

ಸದ್ದು
ಕೆಲಸದಲ್ಲಿರುವವರಿಗೆ ಕರೆಗಂಟೆ ಒಂದು ಸದ್ದು,
ಕೆಲಸವಿಲ್ಲದವರಿಗೆ ಸದ್ದೇ ಕರೆಗಂಟೆ.

ಬಾಗಿಲು
ತೆರೆದಿದ್ದಾಗ "ಬನ್ನಿ" ಎಂದ ಬಾಗಿಲು,
ಮುಚ್ಚಿದ್ದಾಗ "ತೆರೆದಿದ್ದಾಗ ಬನ್ನಿ" ಅಂದಿತು.

ವಿಶ್ವ ಪ್ರಶ್ನೆ
ಕತ್ತಲೆಯಿಲ್ಲದಿದ್ದರೆ ಬೆಳಕಿರುತಿತ್ತೆ? ಬೆಳಕಿರದಿದ್ದರೆ ಕತ್ತಲೆಯಿರುತಿತ್ತೆ?
ಬೆಳಕು ಕತ್ತಲೆಗಳಿರದೆ, ಬೆಳಗು ರಾತ್ರಿಗಳಾಗುತಿದ್ದವೆ?
ಬೆಳಗು ರಾತ್ರಿಗಳಾಗದೆ, ಕಾಲ ಓಡುತಲಿತ್ತೆ?
ಕಾಲವೋಡದೆ, ಬೆಳಗು ರಾತ್ರಿಗಳಾಗದೆ, ಜೀವವಿರುತಿತ್ತೆ?
ಜೀವವಿರದೆ ಕಾಲಕ್ಕೆ ಜೀವವಿತ್ತೆ? ಜೀವ ಕಾಲಗಳಿರದೆ ಈ ವಿಶ್ವವಿತ್ತೆ?
ವಿಶ್ವವಿರದೆ ನಾನಿರುತ್ತಿದ್ದೆನೆ? ನಾನಿರದೇ ಈ ವಿಶ್ವವಿರುತಿತ್ತೆ?

Rating
No votes yet

Comments