ಕೊಲ್ಯಾಬರೇಷನ್ - ಸಹಭಾಗಿತ್ವ ಏಕೆ? ಹೇಗೆ?

ಕೊಲ್ಯಾಬರೇಷನ್ - ಸಹಭಾಗಿತ್ವ ಏಕೆ? ಹೇಗೆ?

ಬರಹ

ವಿಜ್ಞಾನ, ತಂತ್ರಜ್ಞಾನದ ವಿಷಯಗಳನ್ನು ಬರೆಯುವಾಗ ಬಳಸುವವನಿಂದ ಹಿಡಿದು, ವಿಷಯ ಸೃಷ್ಟಿಕರ್ತ, ಹೊಸದಾಗಿ ಅದನ್ನು ಅರಿತುಕೊಳ್ಳಲಿಚ್ಚಿಸುವವನು, ಆ ವಿಷಯದಲ್ಲಿ ಪರಿಣಿತಿ ಹೊಂದಿದವನು, ಇತರೆ ಭಾಷೆಗಳಲ್ಲಿ ಅದನ್ನು ಅನುವಾದಿಸಿ ತನ್ನ ಜನರಿಗೆ ವಿಷಯವನ್ನು ಹಂಚಿಕೊಳ್ಳುವವನು, ಹೀಗೆ ಹತ್ತು ಹಲವು ಮಂದಿ ಒಟ್ಟಿಗೆ ಕುಳಿತು ಒಂದು ವಿಷಯದ ಬಗ್ಗೆ ಚರ್ಚಿಸುತ್ತ, ಎಲ್ಲರ ಪ್ರಶ್ನೆಗಳಿಗೆ ಉತ್ತರ ಕಂಡು ಕೊಳ್ಳಬಹುದು. ಆದರೆ ಇವರೆಲ್ಲಾ ಸಾವಿರಾರು ಮೈಲು ದೂರದಲ್ಲಿದ್ರೆ, ಇಂತಹದ್ದೊಂದು ಕೆಲಸ ಮಾಡಲಿಕ್ಕಾಗುತ್ತದೆಯೇ?

ಈ ಪ್ರಶ್ನೆಗೆ ಉತ್ತರ ನಮ್ಮಲ್ಲಿ ಅನೇಕರಿಗೆ ಗೊತ್ತಿದೆ. ವಿಕಿಪೀಡಿಯಾ, ಸಂಪದದಲ್ಲೊಂದು ಚರ್ಚಾ ಕೊಂಡಿ, ಗೂಗಲ್ Docs, ಹೀಗೆ ಹತ್ತು ಹಲವು ಟೂಲ್ಗಳನ್ನು ನಾವೆಲ್ಲ ಬೇರೆ ಬೇರೆ ವಿಷಯಗಳಿಗೆ ಬಳಸುತ್ತಿದ್ದೇವೆ.

ಒಂದೆರಡು ವಾರಗಳ ಹಿಂದೆ, ನಿಮಗೆಲ್ಲಾ ಕಂಪ್ಯೂಟರ್ ನೆನಪಿಸಿಕೊಂಡರೆ ಜ್ಞಾಪಕ ಬರುವ ಕೆಲವೊಂದು ಪ್ರಶ್ನೆಗಳನ್ನು ಪಟ್ಟಿ ಮಾಡಿ ಅಂತ ಕೇಳಿ ಒಂದು ಲೇಖನ ಬರೆದಿದ್ದೆ. ಕೆಲವು ಪ್ರಶ್ನೆಗಳ ಸುರಿಮಳೆ ವರ್ಷದ ಮೊದಲ ಮಳೆಯಂತೆ ಸಣ್ಣಗೆ ಹರಿಯಿತಾದರೂ, ಸಾಮಾನ್ಯ ಜ್ಞಾನಕ್ಕೆ ಬೇಕಿರುವ ಪ್ರಶ್ನೆಗಳನ್ನು ಒಂದೆಡೆ ಪೇರಿಸಲಿಕ್ಕೆ ಸಹಾಯ ಮಾಡಿತು. ಈಗ ಅಲ್ಲಿರುವ ಪ್ರಶ್ನೆಗಳಿಗೆ ಉತ್ತರ ಬರೆಯುವ ಸಮಯ.

ತಂತ್ರಜ್ಞಾನವನ್ನು ತಿಳಿದಿರುವ ಅನೇಕರು ಸಂಪದದಲ್ಲಿದ್ದೀವಿ. ಮೇಲೆ ಹೇಳಿದಂತೆ ಪಡೆದ ಪ್ರಶ್ನೆಗಳಿಗೆ ಒಬ್ಬಬ್ಬರೂ ಒಂದೊಂದು ವಿಷಯದ ಮೇಲೆ ಉತ್ತರಿಸಲಿಕ್ಕೆ ಕೂತರೆ, ಕೆಲ ಘಂಟೆಗಳಲ್ಲಿ ಕನ್ನಡದ FAQ (Frequently Asked Questions) ಸಿದ್ದವಾಗುತ್ತದೆ.

ಈಗ ನಾವೆಲ್ಲ ಒಂದೆಡೆ ಕೂತು ಈ ರೀತಿಯ ಕೆಲಸ ಮಾಡ್ಲಿಕ್ಕೆ ಯಾವ ಟೂಲ್ ಉಪಯೋಗಿಸಿದರೆ ಸೂಕ್ತ? ನಮ್ಮಲ್ಲಿ ಎಷ್ಟು ಮಂದಿ ಇಂತಹ ಕಾರ್ಯಗಳಲ್ಲಿ ಸಂಪದದ ಜೊತೆ ಕೈ ಜೋಡಿಸಲಿಕ್ಕೆ ಸಾಧ್ಯ? ಈ ಕೆಲಸವನ್ನು ಸಂಪದದಲ್ಲಿ ಹೇಗೆ ಮುಂದುವರೆಸಬಹುದು?

ನೀವೆಲ್ಲಾ ಚರ್ಚೆಗೆ ಸಿದ್ದರಾಗಿದ್ದೀರಾ?