ಬರೀ 3 ವರ್ಷ, ಆಗಲೇ ನಮ್ಮ ಜನ ಅಣ್ಣಾವ್ರನ್ನ ಮರೆತಾಗಿದೆ :(

ಬರೀ 3 ವರ್ಷ, ಆಗಲೇ ನಮ್ಮ ಜನ ಅಣ್ಣಾವ್ರನ್ನ ಮರೆತಾಗಿದೆ :(

ಬರೀ 3 ವರ್ಷದ ಹಿಂದೆ ಲಕ್ಷ ಲಕ್ಷ ಕನ್ನಡಿಗರ ದುಃಖ, ರೋದನೆ, ಕಣ್ಣೀರಿನ ಕೋಡಿಯಲ್ಲಿ ಕನ್ನಡ-ಕರ್ನಾಟಕ ಕಂಡ ಶತಮಾನದ icon, ನಮ್ಮೆಲ್ಲರ ಅಣ್ಣಾವ್ರ ಅಂತಿಮ ಯಾತ್ರೆ ಬೆಂಗಳೂರಿನ ಬೀದಿಗಳಲ್ಲಿ ಸಾಗಿತ್ತು. ಕನ್ನಡಿಗರನ್ನೆಲ್ಲ ಭಾವನಾತ್ಮಕವಾಗಿ ಬೆಸೆದ, ಕನ್ನಡಿಗರ ನಾಡಿಗಳಲ್ಲಿ ಕನ್ನಡತನದ ಪ್ರಜ್ಞೆ ತುಂಬಿದ ಡಾ.ರಾಜಕುಮಾರ ಅವರು ನಮ್ಮನ್ನಗಲಿ ನಿನ್ನೆಗೆ ೩ ವರ್ಷ, ಆದ್ರೆ ಅವರ ಸಮಾಧಿ ಬಳಿ ಬಿಟ್ರೆ ಬೇರೆಲ್ಲೂ ಅವರನ್ನ ನೆನೆಯುವ ಒಂದೇ ಒಂದು ಕಾರ್ಯಕ್ರಮ ಆಗಿದ್ದು ನಾ ಕಾಣೆ.

ತಮ್ಮ ಚಿತ್ರಗಳ ಮೂಲಕ ಕನ್ನಡಿಗರಲ್ಲಿ ಸಾಮಾಜಿಕ ಪ್ರಜ್ಞೆ, ಇತಿಹಾಸ ಪ್ರಜ್ಞೆ ತುಂಬಿದ ರಾಜಕುಮಾರ ಬಗ್ಗೆ, ಅವರ ಅಭಿನಯದ ಬಗ್ಗೆ ಯಾರೇನು ಹೇಳುವುದು ಬೇಡ. ಮಯೂರ ಚಿತ್ರದ ಇದೊಂದು ದೃಶ್ಯ ಸಾಕು ಅವರ ಸಾಟಿಯಿಲ್ಲದ ಅಭಿನಯದ ಬಗ್ಗೆ ತಿಳಿಯಲು:

http://www.youtube.com/watch?v=Jgb84qzs5gQ

ಒಂದು ನಾಡನ್ನು ಭಾವನಾತ್ಮಕವಾಗಿ ಬೆಸೆದ, ಕರ್ನಾಟಕದ ಅತಿ ದೊಡ್ಡ ಐಕಾನ್ ಆದ ಅಣ್ಣಾವ್ರನ್ನು ಇಷ್ಟು ಬೇಗ ಈ ನಾಡು ಮರೆತು ಬಿಟ್ಟಿತೇ? ಮೊನ್ನೆ ಮೊನ್ನೆ ಜಯನಗರದ ಬಳಿ ತಮಿಳು ನಟ ಎಮ್.ಜಿ.ಆರ್ 90ನೇ ಹುಟ್ಟಿದಹಬ್ಬ ಅಂತ ತಮಿಳರು ಆರ್ಕೆಸ್ಟ್ರಾ ಹಾಕೊಂಡು ಹಬ್ಬ ಮಾಡ್ತಾ ಇದ್ದಿದ್ದನ್ನ ಆಫೀಸಿಂದ ಬರ್ತಾ ನೋಡಿದಾಗ, ಕನ್ನಡಿಗರಿಗೆ ಅಂಟಿರುವ ಅಭಿಮಾನ ಶೂನ್ಯತೆ ತುಂಬಾ ಗಾಢವಾಗಿ ಫೀಲ್ ಆಯ್ತು :(

Rating
No votes yet

Comments