ಕರ(೦)ಗು, ಕಱ(೦)ಗು

ಕರ(೦)ಗು, ಕಱ(೦)ಗು

ಬರಹ

ಕನ್ನಡದಲ್ಲಿ ಕರಗು/ಕರಂಗು ಹಾಗೂ ಕಱಗು/ಕಱಂಗು ಎಂದು ಬೇಱೆ ಬೇಱೆ ಅರ್ಥಗಳಲ್ಲಿ ಬೞಕೆಯಾಗುವ ಎರಡು ಪದಗಳಿವೆ. ಎರಡೂ ಕ್ರಿಯಾಪದಗಳೇ.
ಕರಗು/ಕರಂಗು= ನೀರಾಗು, ಕಾಣದಾಗು.
ಉದಾಹರಣೆಗೆ:-
ಬಿಸಿಲಿಗೆ ಮಂಜು ಕರಗಿ ನೀರಾಯ್ತು.
ಕತ್ತಲಲ್ಲಿ ಹಾವೆಂದು ಭ್ರಮಿಸಿದ್ದೆ. ಬೆಳಕು ಬಿದ್ದಾಗ ಅದು ಹಗ್ಗವೆಂದು ಗೊತ್ತಾಗಿ ಹಾವೆಂಬ ಭಯ ಕರಗಿತು.

ಕಱಗು/ಕಱಂಗು= ಕಪ್ಪಾಗು, ಕಱೆಯಾಗು.
ಮಸಿ ಮುಟ್ಟಿದ್ದಱಿಂದ ಕೈ ಕಱಗಿತು.
ಬೆಂಕಿಯಲ್ಲಿ ದೇಹ ಸುಟ್ಟು ಕಱಗಿತು.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet