"ತನ್ಭಾಷೆನ್ಮಾತಾಡೋಕ್ಕೇ ಹಿಂಜರಿಯೋನು ಕನ್ನಡ್ದೋನೆ ಇರ್ಬೇಕು", ಯಾರೋ (ಬೇರ್ಯೋರೇ) ಹೇಳಿದ್ಡೆಫಿನಿಷನ್ನು

"ತನ್ಭಾಷೆನ್ಮಾತಾಡೋಕ್ಕೇ ಹಿಂಜರಿಯೋನು ಕನ್ನಡ್ದೋನೆ ಇರ್ಬೇಕು", ಯಾರೋ (ಬೇರ್ಯೋರೇ) ಹೇಳಿದ್ಡೆಫಿನಿಷನ್ನು

ಮೊನ್ನೆ ಹೊಸಾ ಕನ್ನಡ್ಕಾ ಮಾಡ್ಸೋಕ್ಕೆ ಅಂತ ನಮ್ಮೈಸೂರಿನ್ಕುವೆಂಪು ನಗರದ್ದಿಸ್ಸ್ಮಾಯಿಲ್ ಅಂಗ್ಡೀಗೆ ನಾನು, ನನ್ಸ್ನೇಹಿತ ಇಬ್ಬ್ರೂ ಹೋದ್ವಿ (ಪ್ಯೂಪಿಲ್ ಡೈಲೇಟ್ಮಾಡೋ ಡ್ರಾಪ್ಸ್ ಹಾಕ್ಸ್ಕೊಂಡು ಹೋದ್ಸಲ ಬೈಕ್ ಓಡ್ಸಿದ್ದೆ, ಮರೀಲಾರ್ದನುಭವ ಅದು :) ಸೋ, ಆ ರಿಸ್ಕ್ ಈ ಸಲ ಬೇಡಾಂತ ನನ್ ಸ್ನೇಹಿತ ಜೊತೇಗ್ಬಂದ).

ನಾನು 'ಎಸ್ಪೀ 2 ಬೇಕು, ಹೈ ಇಂಡೆಕ್ಸ್ 1.8 ನಲ್ಲಿ ಇದ್ಯಾ ನೋಡಿ', (ಅದೂ ಇದೂ) ಕೇಳ್ತಾ ಇದ್ದೆ. ಅಂಗ್ಡೀನೋನೂ ಕನ್ನಡ್ದಲ್ಲಿ ತುಂಬಾನೇ ಸ್ಪಷ್ಟ್ವಾಗ್ಮಾತಾಡ್ತಿದ್ದ. ಆಗೊಬ್ಬ್ಳು ಬಂದ್ಳು. ಅಮ್ಮಣ್ಣಿ, ನಮ್ಮಾತುಕತೆ cut short ಮಾಡಿ, ಮಧ್ಯ ನುಗ್ಗಿ, 'hi, I am here to get the glasses that I had ordered last week. Please make it a bit fast, am in a hurry.' ಅಂದ್ಳು. ಏನೋ ಪಾಪ ಅವ್ಸ್ರಾ, ಹೋಗ್ಲಿ ಹೆಣ್ಣ್ಮಗ್ಳು ಅಂತಾ ನಾನೂ ಸುಮ್ನಾದೆ. ;) ಅಷ್ಟ್ ಹೊತ್ತೂ ಕನ್ನಡ್ವೇ ಗೊತ್ತಿಲ್ಲಾ ಅನ್ನೋ ಹಾಗೇ ಮಾತಾಡ್ತಿದ್ದಾಪ್ರೆಟ್ಟಿ ಯಂಗ್ಥಿಂಗು ಫೋನ್ಬಂದಾಗ 'ಹುಪ್ಪಾ, ಹು. ಸರಿ ಅಪ್ಪಾ, ಎರ್ಡೆ ನಿಮ್ಷಾ ಬಂದೇ' ಅಂದಿಟ್ಟ್ಳು.

ವಾಹ್! ಇವ್ಳೇ ನಮ್ಕರ್ನಾಟಕ ಹೆಮ್ಮೆ ಪಡೋಂತಾ ಕನ್ನಡಿತಿ ಅಂದ್ಕೊಂಡೆ. ಅಲ್ಲಾ, ದೊಡ್ದಾಗಿ ಕನ್ನಡ ಉಳ್ಸಿ/ಬಳ್ಸಿ/ಬೆಳ್ಸಿ ಅಂತಾ (ಇವ್ರ್ಗಳೇ) ಮೈಲ್ಮೇಲ್ಮೈಲು ಫಾರ್ವರ್ಡ್ಮಾಡಿದ್ದೇ ಮಾಡ್ತಾರೆ, ಹೊರ್ಗಡೆ ಬಂದಾಗ ಮಾತಾಡೋಕ್ಕೇ ಅಸಹ್ಯ ಪಟ್ಕೋತಾರೆ! :) ನಾವೇ ಕನ್ನಡ ಬಳ್ಸ್ದೇ ಹೊರ್ಗ್ನೋರ್ಕನ್ನಡ್ದೋರ್ಗೆ ಬೆಲೆ ಕೊಡಲ್ಲ ಅಂದ್ರಿನ್ನೇನ್ಹೇಳೋದು? ಹೇಳೋದಾಚಾರ ತಿನ್ನೋದ್ಬದ್ನೇಕಾಯ್ಕತೆ! "ತನ್ಭಾಷೆನ್ಮಾತಾಡೋಕ್ಕೇ ಹಿಂಜರಿಯೋನು ಕನ್ನಡ್ದೋನೆ ಇರ್ಬೇಕು" ಅಂತಾ ಯಾರೋ (ಬೇರ್ಯೋರೇ) ಹೇಳಿದ್ಡೆಫಿನಿಷನ್ನು ನೆನ್ಪಿಗ್ಬಂತು; ಅದ್ನಿರ್ವ್ರು ಸಾಬೀತ್ಪಡ್ಸ್ತಿದಾರಲ್ಲಾಂತಾ ಬೇಜಾರೂ ಆಯ್ತು.

ಏನ್ಮಾಡೋಡು, ಅವ್ರ್ಗೇ ಬುದ್ಧಿ ಬರ್ಬೇಕು ಅಂದ್ಕೊಂಡ್ಸುಮ್ನಾದೆ.

/* ಕೊನೇಗ್ ಹೋಗ್ತಾ ನಾನ್ಸಾಧಾರಣ್ವಾಗ್ಕೊಡೋ cold stare ಒಂದ್ಕೊಟ್ಟು ಬಂದಿದ್ದಾಯ್ತು. ;) */

Rating
No votes yet

Comments