ಸಂಪದದ ಮುಖಪುಟದಲ್ಲಿ ('ವಿಶೇಷ ಬರಹ'ವಾಗಿ) ಪ್ರಕಟವಾಗಲು ಬರಹ ಹೇಗಿರಬೇಕು?
ಬರಹ
- 'ಲೇಖನ'ಗಳಾಗಿ ಸೇರಿಸಿದ ಪುಟಗಳಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗುವುದು.
- ಫೋಟೋ ಇರುವ ಬರಹಗಳಿಗೆ ಹೆಚ್ಚಿನ ಮಾನ್ಯತೆ ನೀಡಲಾಗುವುದು.
- ಒಂದಾದರೂ ಇನ್-ಲೈನ್ ಚಿತ್ರ ("ಸೇರಿಸಿರುವ ಚಿತ್ರಗಳು" ಆಯ್ಕೆ ಬಳಸಿ ಅಪ್ಲೋಡ್ ಮಾಡಿದ ಚಿತ್ರ) ಇರಬೇಕು.
- In-line ಚಿತ್ರಗಳು ಹೇಗೆ ಅಪ್ಲೋಡ್ ಮಾಡುವುದು ಎಂಬುದರ ಬಗ್ಗೆ ಇಲ್ಲಿ ಓದಬಹುದು.
- ಬರಹದಲ್ಲಿ ಕನಿಷ್ಟ ಮುನ್ನೂರೈವತ್ತು ಪದಗಳಾದರೂ ಇರಬೇಕು.
- ಲೇಖನದಲ್ಲಿ ಫಾರ್ಮ್ಯಾಟಿಂಗ್ ಸರಿಯಾಗಿರಬೇಕು, ಬಣ್ಣ ಬಣ್ಣದ ಫಾಂಟ್ ಇರಕೂಡದು, ವಿಪರೀತ ದಪ್ಪಗಾಗಿಸಿದ ಅಕ್ಷರಗಳು, italicised ಅಕ್ಷರಗಳು ಇರಕೂಡದು.
- ಬರಹ ಬೇರೆಡೆ ಆಗಲೇ ಪ್ರಕಟವಾಗಿರಕೂಡದು.
- ಬರಹ ಬೇರೆಲ್ಲಿಂದಲೋ ಆಯ್ದು ತೆಗೆದುಕೊಂಡದ್ದಾಗಿರಕೂಡದು.
- ಬರಹದಲ್ಲಿ ಬೇರೆಡೆಯಿಂದ ತೆಗೆದುಕೊಂಡ ಚಿತ್ರಗಳು ಬಳಕೆಯಾಗಿದ್ದಲ್ಲಿ ಚಿತ್ರಕ್ಕೆ ಸರಿಯಾದ ಕ್ರೆಡಿಟ್ಸ್ ಇರಬೇಕು.
- ಸರಿಯಾಗಿ ಕ್ರೆಡಿಟ್ಸ್ ಕೊಡುವುದು ಹೇಗೆ ಎಂಬುದು ಇಲ್ಲಿ ಓದಬಹುದು.
- ಭರವಸೆಯ ಹೊಸ ಲೇಖಕರಿಗೆ ಹೆಚ್ಚು ಮಾನ್ಯತೆ ನೀಡಲಾಗುವುದು.
- ಸಂಪದ ಸಮುದಾಯದಲ್ಲಿ ಬಹುಕಾಲ ತೊಡಗಿಕೊಂಡಿರುವ ಸದಸ್ಯರಿಗೆ ಮಾನ್ಯತೆ ನೀಡಲಾಗುವುದು.
- ಸರಿಯಾದ ಟ್ಯಾಗ್ಸ್ ಹಾಕಿರುವ ಅಥವ ಸರಿಯಾದ ವರ್ಗಕ್ಕೆ ಸೇರಿಸಲ್ಪಟ್ಟಿರುವ ಬರಹಗಳಿಗೆ ಮಾನ್ಯತೆ ನೀಡಲಾಗುವುದು.
- ಬರಹ MS-Wordನಿಂದ ನೇರ ಕಾಪಿ-ಪೇಸ್ಟ್ ಮಾಡಿರಕೂಡದು.
- ಬರಹ ಮೂಲತಃ MS-Wordನಲ್ಲಿ ಟೈಪ್ ಮಾಡಿಟ್ಟುಕೊಂಡಿದ್ದರೆ ಹೇಗೆ ಅಪ್ಲೋಡ್ ಮಾಡಬೇಕು ಎಂಬುದರ ಕುರಿತು ಇಲ್ಲಿ ಓದಬಹುದು.
('ಸಂಪದ'ದಲ್ಲಿ ಮುಖಪುಟಕ್ಕೆ ಪ್ರಮೋಟ್ ಆಗುವ ಲೇಖನಗಳಿಗೆ ಯಾವ ಮಾನ್ಯತೆಗಳನುಸಾರ ಆಯ್ಕೆ ಮಾಡಲಾಗುತ್ತಿದೆ ಎಂಬ ಕುತೂಹಲ ನಿಮ್ಮೆಲ್ಲರಿಗೂ ಇದ್ದಿರಬಹುದು. ಹೆಚ್ಚು ಕಡಿಮೆ ಮೇಲೆ ಪಟ್ಟಿ ಮಾಡಿರುವಂತೆ ಅವು.
ಈ ಪಟ್ಟಿ ಯಾಕೆ ಇವತ್ತು, ಇಲ್ಲಿ? ಎಂಬ ಕುತೂಹಲ ಕೂಡ ನಿಮ್ಮೆಲ್ಲರಿಗಿದ್ದೀತು! ಬಹಳಷ್ಟು ಜನ ಈ ಬಗ್ಗೆ ವಿಚಾರಿಸುತ್ತಿದ್ದರು ಎಂಬ ಕಾರಣ ಒಂದು, ಮತ್ತೊಂದು ಎಲ್ಲರೂ ಭಾಗಿಯಾಗಿ ಈ ಕುರಿತು ಸಲಹೆಗಳು ನೀಡುತ್ತ ಬರಬಹುದು ಎಂಬುದು. 'ಸಂಪದ' ಸಮುದಾಯ ತನ್ನದೇ ಸಂಹಿತೆ ರೂಪಿಸಿಕೊಳ್ಳಬಹುದು, ಅದರ ಮೊದಲ ಹೆಜ್ಜೆ ಇದಾಗಬಹುದು.
ಈಗ, 'ವಿಶೇಷ ಬರಹ'ವಾಗಿ ಪ್ರಕಟವಾಗುವ ಬರಹಗಳನ್ನು ಆಯ್ಕೆ ಮಾಡುವ ಸಂಹಿತೆಗೆ ಸದಸ್ಯರು ತಮ್ಮ ಸಲಹೆಗಳನ್ನು ನೀಡಬಹುದು. ಸೂಕ್ತವಾದ ಸಲಹೆಗಳನ್ನು ಆಧರಿಸಿ ಮೇಲಿನ ಪಟ್ಟಿಯನ್ನು ಉತ್ತಮಪಡಿಸಲಾಗುವುದು)