ದೇವರ ಕಾಣುವ ಕೈ

ದೇವರ ಕಾಣುವ ಕೈ

ಅರಿಶಿನ ಕುಂಕುಮದ ಡಬ್ಬಕ್ಕೆ ತಡಕಾಡುವ ಮೊದಲೇ ಹೇಳಿಬಿಡುತ್ತೇನೆ - ಇದು ದೇವರ “ಕಾಣದ ಕೈ” ಅಲ್ಲ. ಈ ಹಿಂದೆ “ದೇವರ ಕಣ್ಣು” ಎಂಬ ಚಿತ್ರ ನೀವು ನೋಡಿರಬಹುದು. ಇನ್ನು “ರಾಮಸೇತು” ಥರ ಏನೇನೋ ಆಧಾರ ಕೊಡೋಕೆ ಮುಂದಾಗೋ ಮುಂಚೆ ಹೇಳಿಬಿಡ್ತೀನಿ - ಇದು ಭೂಮಿಯಿಂದ ೫೮೦ ಕಿ.ಮಿ ದೂರದಲ್ಲಿ ಸುತ್ತುತ್ತಿರುವ ನಾಸಾದ "ಚಂದ್ರ ಎಕ್ಸ್-ರೇ" ಅಬ್ಸರರ್ವೇಟರಿಯಿಂದ ತೆಗೆದ ಚಿತ್ರ.

ದೇವರ ಕೈ

ದೇವರ ಕೈ

ನಕ್ಷತ್ರವೊಂದು ಸಿಡಿದು ೨೦ಕಿಮಿ ಅಗಲ ಸುತ್ತುವ ಯುವ ಪಲ್ಸಾರ್‍ ರೂಪುಗೊಂಡಿದ್ದಂತೆ ಇದು. ಆ ಸುತ್ತುವ ಪಲ್ಸಾರ್‍ ೧೫೦ ಬೆಳಕಿನವರ್ಷದಷ್ಟು ದೂರ ಎಲೆಕ್ಟ್ರೋಮ್ಯಾಗ್ನಟಿಕ್ ಶಕ್ತಿ, ಧೂಳು ಮತ್ತು ಹೊಗೆಯ ಮೋಡವನ್ನು ಚೆಲ್ಲುತ್ತಂತೆ. ಈ ಚಿತ್ರದಲ್ಲಿ ಕಾಣುವುದು ಸುಮಾರು ೧೭ ಸಾವಿರ ವರ್ಷದ ಹಿಂದಿನ ಸ್ಥಿತಿಯಂತೆ. ಅಂದು ಅಲ್ಲಿಂದ ಹೊರಟ ಬೆಳಕು ಈಗಷ್ಟೆ
ಭೂಮಿಯ ಬಾಗಿಲು ತಟ್ಟಿದೆಯಂತೆ.

ಹೆಚ್ಚಿನ ವಿವರ ಇಲ್ಲಿದೆ http://www.nasa.gov/mission_pages/chandra/multimedia/photo09-025.html

Rating
No votes yet

Comments