ಓ ಭಾಷೆ ನೀ ಅಳಿಯದಿರು

ಓ ಭಾಷೆ ನೀ ಅಳಿಯದಿರು

ಬದಲಾದ ಕಾಲ
-----------------------
ಹಿಂದಿನ ಕಾಲವೊಂದಿತ್ತು
ಎಡವಿ ಬಿದ್ದಾಕ್ಷಣ ಅಮ್ಮ ಅನ್ನುತ್ತಿತ್ತು ಮಗು
ಬದಲಾದ ಕಾಲದಲ್ಲಿ
ಪದವು ಬದಲಾಗಿದೆ
ಈಗ ಎಡವಿದರೆ ಮಗು ಅನ್ನುವುದು
"ಅವುಚ್ ,ಉಫ್ ,ಶು ,ಶಿಟ್ ".

ಶೌಚಾಲಯ:
////////////////////////
ನಮ್ಮೂರ ತಿಮ್ಮ ಹೋಗಿದ್ದನಂತೆ
ಪಟ್ಟಣದ ಯಾವೊದೋ ಆಫೀಸಿಗೆ,
ಮೂತ್ರ ಮಾಡಲೆಂದು ಯಾರನ್ನೋ ಕೇಳಿದನಂತೆ
ಎಲ್ಲಿದೆ ಸ್ವಾಮಿ ಶೌಚಾಲಯ
ಅವ ಅಂದನಂತೆ ಅಲ್ಲಿದೆ ನೋಡಿ "Rest room"
ಹಾಗೆಯೆ(ಅಲ್ಲಿ ಹೋಗದೆ ) ಬಂದ ತಿಮ್ಮ ನೆಂದ
ಎಷ್ಟು ಗಲೀಜು ಮಂದಿ ಈ ಪಟ್ಟಣದವರು
ಶೌಚಾಲಯ ಕೇಳಿದರೆ ರೂಮ್ ತೋರಿಸುವರಲ್ಲ
ಅದಕ್ಕೆ ನಾನಂದೆ ಅದು ಹಾಗಲ್ಲ
"ರೆಸ್ಟ್ ರೂಮ್ " ಶೌಚಾಲಯದ ಅದುನಿಕ ಹೆಸರು .

Rating
No votes yet