ಕಣ್ಣೊಂದಾಗಿದೆ..ಕನಸೊಂದಾಗಿದೆ..

ಕಣ್ಣೊಂದಾಗಿದೆ..ಕನಸೊಂದಾಗಿದೆ..

’ಸವಾರಿ’- ಕಳೆದ ವಾರ ಬಿಡುಗಡೆಯಾದ ಚಿತ್ರ. ಒಳ್ಳೆಯ ಚಿತ್ರ ಎಂದು ಕೇಳಿಬಂದಮೇಲೆ ಹೋಗಿ ನೋಡಿದೆ. ನಿಜಕ್ಕೂ ಒಂದು ಉತ್ತಮ ಚಿತ್ರ. ನಿರೂಪಣೆ, ನರ್ದೇಶನಗಳು ಚೆನ್ನಾಗಿವೆ. ಮುಖ್ಯವಾಗಿ ಪಾತ್ರಗಳಿಗೆ ತಕ್ಕ ವ್ಯಕ್ತಿಗಳನ್ನೇ
ಆಯ್ಕೆ ಮಾಡಿದ್ದಾರೆ. ಕಥಾನಾಯಕ ಒಬ್ಬ ಶ್ರೀಮಂತ ಯುವಕ. ಅದಕ್ಕೆ ತಕ್ಕಂತೆ ಗಡಸು, ಗರ್ವದ ಧ್ವನಿ, ಉಡಾಫೆಯ ವ್ಯಕ್ತಿತ್ವ ಎಲ್ಲವೂ ಪಾತ್ರಕ್ಕೆ ಚೆನ್ನಾಗಿ ಹೊಂದುತ್ತವೆ. ಒಂದೆ ಹಾಡು ’ಅಲೆಯಲೆಯಲೆಯೋ...’ ಎಂಬ ಒಂದು
ಹಾಡು ಮಾತ್ರ ಉತ್ತಮವಾಗಿ ಮೂಡಿಬಂದಿದೆ. ಇನ್ನು ಸಂಭಾಷಣೆಯಂತೂ ಅದ್ಭುತ. ತಿಳಿಹಾಸ್ಯ ತುಂಬಿದ ಹತ್ತು ಹಲವು ಚುಟುಕು ಮಾತುಕತೆಗಳು. ಉದಾಹರಣೆಗೆ ಹಳ್ಳಿಯ ರೌಡಿಸಂ ನೋಡಿದ ನಾಯಕ ’ಈ ಸರ್ಕಾರದವರು ಇದಕ್ಕೆಲ್ಲಾ
ಏನೂ ಮಾಡಲ್ವಾ..’ ಅಂದಾಗ ಗಾಳಿಸೀನ ’ಎಲೆಕ್ಷನ್ ಮಾಡ್ತಾರಲ್ಲ ಬಾಸೂ..’ ಎನ್ನುತ್ತಾನೆ. ಒಟ್ರಾಶಿ ಸಂಭಾಷಣೆಯೂ ಚಿತ್ರದಲ್ಲಿ ಎಲ್ಲಿಯೂ ಬೋರು ಹೊಡೆಯದಂತೆ ಹಿಡಿದಿಟ್ಟಿದೆ. ಇದು ನಾನು ಈ ವರ್ಷ ನೋಡಿದ ಎರಡನೆಯ ಚಿತ್ರ.
ನಾಯಕಿಯೂ ಸಹ ಉತ್ತಮ ಅಭಿನಯ ನೀಡಿದ್ದಾಳೆ. ಒಂಥರಾ ಸಾತ್ವಿಕ ಕಳೆಯ ಹುಡುಗಿ.

ನಾನು ನೋಡಿದ ಇನ್ನೊಂದು ಚಿತ್ರ ವೆಂಕಟ ಇನ್ ಸಂಕಟ. ಅದೂ ಸಹ ನನಗೆ ಇಷ್ಟವಾಯ್ತು. ರಮೇಶ್ ನಿರ್ದೇಶನದ ನಾಲ್ಕು ಚಿತ್ರಗಳಲ್ಲಿ ’ಸತ್ಯವಾನ್ ಸಾವಿತ್ರಿ’ ಬಿಟ್ಟರೆ ಉಳಿದೆಲ್ಲಾವೂ ಚೆನ್ನಾಗಿದ್ದಾವೆ.

ಅಂಬಾರಿ ಸಹ ಚೆನ್ನಾಗಿದೆ ಎಂದು ಕೇಳಿದ್ದೇನೆ.. ನೋಡಿದ್ದವರು ಕಮೆಂಟಿಸಿ ಅಭಿಪ್ರಾಯ ತಿಳಿಸಿ.

Rating
No votes yet