ಅಲ್ನೋಡಲ್ಲಿ ಗೊಗ್ಗಯ್ಯ

ಅಲ್ನೋಡಲ್ಲಿ ಗೊಗ್ಗಯ್ಯ

ಈ ಲೇಖನ ಯಾವತ್ತೋ ಬರೀ ಬೇಕಿತ್ತು ಆಗಿರ್ಲಿಲ್ಲ. ಇಷ್ಟೊಂದು ದಿನ ಗೊಗ್ಗಯ್ಯನ್ನ ತಮ್ಮ ಮಕ್ಕಳಿಗೆ ತೋರಿಸ್ಲಿಕ್ಕಾಗದಿದ್ದ ತಾಯಂದಿರೇ ಕ್ಷಮೆಯಿರಲಿ :).. ಇನ್ಮುಂದೆ ಮಕ್ಕಳನ್ನ ಹೆದರಿಸ್ತೀರೋ, ನಗಿಸ್ರೀರೋ ನಿಮಗೆ ಬಿಟ್ಟ ವಿಷಯ. ಯಾಕಂದ್ರೆ ಗೊಗ್ಗಯ್ಯ ಇಲ್ಲವನೆ.

ಅಮ್ಮ ಚಿಕ್ಕವರಿದ್ದಾಗ, ನನ್ನ ತಮ್ಮನಿಗೆ ಮಮ್ಮು ತಿನ್ನಿಸ್ಲಿಕ್ಕೆ ಗೊಗ್ಗಯ್ಯನ ನೆವ ಹೇಳ್ತಿದ್ಲು. ಏನಂತೀರಾ ನಮಗೆಲ್ಲಾ ನಗು. ಈಗ ಚಿಕ್ಕಮಕ್ಳು, ಜೊತೆಗೇ ದೊಡ್ಡ ಮಕ್ಳೂ ಕೂಡ ಕೆಲವು ಸಲ ಗೊಗ್ಗಯ್ಯನ ಕಂಡ್ರೆ ಭಯ ಪಡ್ತಾರೆ. ಗೊತ್ತಿದ್ದನ್ನು ಹೇಳ್ಲಿಕ್ಕೆ, ತಿಳಿದ ವಿಷಯಗನ್ನು ಹಂಚಿಕೊಳ್ಳಲಿಕ್ಕೆ, ಗೊತ್ತಿರದ ವಿಷಯವನ್ನು ತಿಳಿದುಕೊಳ್ಳಲಿಕ್ಕೆ ಇವರಿಗೆ ಭಯ.

ಇವತ್ತು ಲಾಲ್-ಬಾಗ್ ಗೆ ಹೋಗಿದ್ದೆ "ಹಸುರು ಉಸಿರು" ಬಳಗದ ಕಾರ್ಯಕ್ರಮಕ್ಕೆ. ಮೆಟ್ರೋ ಬೇಡ, ಲಾಲ್-ಬಾಗ್ ಬೇಕು ಅನ್ನೋ ವಿಷಯವನ್ನು ಮಾನವ ಸರಪಳಿಯ ಮೂಲಕ ಎಲ್ಲರಿಗೆ ತಿಳಿಸ್ಲಿಕ್ಕೆ. ಅಲ್ಲೂ ಕನ್ನಡಿಗರ, ಸ್ಥಳೀಯರ ಕೊರತೆ. ಅವರಿಗೂ ಇದ್ದಿರಬಹುದು ಗೊಗ್ಗಯ್ಯನ ಭಯ. ಕನ್ನಡ ಉಳಿಸಿ, ಬೆಂಗಳೂರು ಉಳಿಸಿ ಅನ್ನೋ ಕೆಲವು ಸಂಘಟನೆಗಳು ಇಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸೋದೇ ಇಲ್ಲ. ಇಂಗ್ಲೀಷ್ ಗೊಗ್ಗಯ್ಯನ ಭಯವೇ?. ಅಲ್ಲಿನ ಬಸ್ ಸ್ಟಾಪ್ ನಲ್ಲಿ ನಿಂತಿದ್ದ ಒಬ್ಬ ಹಿರಿಯ ನಾಗರೀಕರು, ನೀವೆಲ್ಲ ಇದರ ಬಗ್ಗೆ ಚಿಂತಿಸುತ್ತಿರೋದು ತುಂಬಾ ಸಂತಸದ ವಿಷಯ, ನಾನು ಸದಸ್ಯನಾಗಿರೋ ೪ ಸಂಘಟನೆಗಳು, ಸ್ಥಳೀಯರೂ ಇಂತಹ ವಿಚಾರದ ಬಗ್ಗೆ ತಲೆ ಕೆಡಿಸಿಕೊಳ್ಳಲಿ ಅಂತ ಹೇಳಿದ್ರು. ಸೋ! ಎಷ್ಟೋ ವಿಷಯಗಳು ಇಂಗ್ಲೀಷಿನಲ್ಲಿ ಚರ್ಚಿತವಾದವು. ಸರಿ ಫೈನ್! ಇನ್ನೂ ಏನೇನೋ ಭಯಗಳು..

ಸ್ವಲ್ಪ ಮ್ಯಾನೇಜ್ಮೆಂಟ್ ವಿಷಯಕ್ಕೆ ಬಂದ್ರೆ, ನಮ್ಮ ಮುಂದಿರುವ ಅಡಚಣೆಗೆಲ್ಲಾ ಉತ್ತರ ಸಿಗದಿರದು. "Prioritize" ಅಂತೀವಿ. ಯಾವ ಕೆಲಸ ಮೊದಲಾಗಬೇಕು ಅಂತ. ನೆಲ, ಜಲ, ಗಾಳಿ ಮೊದಲು ಉಳಿಸ್ಕೊಳ್ಳೋಣ, ಉಳಿಸಿಕೊಳ್ಳಲಿಕ್ಕೆ ಭಾಷೆಯ ಸದುಪಯೋಗವಾಗಲಿ. ಸದುಪಯೋಗ ತಿಳೀದಿದ್ರೆ, ತಿಳಿದವರ ಬಳಿ ಕೇಳಿ, ಕಲಿತುಕೊಳ್ಳೋಣ, ಭಯಪಡೋದು ಬೇಡ. ಪರಿಸರವೇ ಇಲ್ಲದ ಮೇಲೆ ಭಯವೇ ಇಲ್ಲ ಯಾಕಂದ್ರೆ ಅಲ್ಲಿ ಜೀವದ ಸುಳಿವೇ ಇಲ್ಲದಾಗಬಹುದು.

ನಕ್ಕು, ನಗಿಸಿ, ಸ್ವಲ್ಪ ನಿಮ್ಮ ಮೆದುಳಿಗೆ ಮೇವು ನೀಡಲಷ್ಟೇ ಈ ಲೇಖನ.. ಜೊತೆಗೆ "ಭಯದ ಗೊಗ್ಗಯ್ಯ" ಜೋಕರ್ ತರಾ ಕಾಣ್ಲಿಕ್ಕೆ ಏನ್ಮಾಡ್ಬೇಕು ಅಂತ ಒಂದು ಸಣ್ಣ ಟಿಪ್ಪು...

ನಿಮ್ಮ
ಶಿವು

ಚಿತ್ರ: ಸಂಪದ ಚರ್ಚೆಯ ದಿನ, ವಿ.ವಿ ಪುರಂ ರಸ್ತೆಯ ಚಾಟ್ ಸ್ಟ್ರೀಟ್ ನಲ್ಲಿ ತೆಗೆದದ್ದು (ರಾಘು, ಅನಿಲ ಮತ್ತು ನಿಧಿಯ ಕರಾಮತ್ತು, ಕ್ಯಾಮೆರಾ ನಂದು ಅನ್ಕೊಳ್ತೀನಿ)

Rating
No votes yet

Comments