ಎವರೆಸ್ಟ್-ಆತನೆಂದು ಆ ಪರ್ವತ ನೋಡಿರಲಿಲ್ಲ.

ಎವರೆಸ್ಟ್-ಆತನೆಂದು ಆ ಪರ್ವತ ನೋಡಿರಲಿಲ್ಲ.

ಬರಹ

'ಪ್ರಪಂಚದ ಎತ್ತರವಾದ ಪರ್ವತ ಎವರೆಸ್ಟ್. ಸರ್ ಜಾರ್ಜ್ ಎವರೆಸ್ಟ್ ಮೊದಲಬಾರಿಗೆ ಅದರ ಎತ್ತರ ಕಂಡುಹಿಡಿದ. ಆದ್ದರಿಂದ ಅದಕ್ಕೆ ಅವನ ಹೆಸರೇ ಇಡಲಾಗಿದೆ'-ಹೀಗೆಂದು ನಾವು ಓದಿದ್ದೇವೆ, ಕೇಳಿದ್ದೇವೆ. ಆದರೆ ನಿಜ ನಿಮಗೆ ಗೊತ್ತೇ?

ಸರ್ ಜಾರ್ಜ್ ಎವರೆಸ್ಟ್ ಎಂದೂ ಆ ಪರ್ವತವನ್ನು ಕಣ್ಣಾರೆ ನೋಡಿರಲಿಲ್ಲ.

೧೯ನೇ ಶತಮಾನದ ಆರಂಬದಲ್ಲಿ (೧೮೦೨ರಿನ್ದ) ಈಸ್ಟ್ ಇಂಡಿಯ ಕಂಪನಿಯ ಪ್ರಾಯೋಜಕತ್ವದಲ್ಲಿ ಭಾರತದ ಮಹಾ ಮೊಜಣೆ (The Great Arc project) ಚೆನ್ನೈನಿಂದ ಆರಂಬವಾಯಿತು. ಕೆಲವು ದಶಕಗಳ ಕಾಲ ಈ ಸರ್ವೇ ನಡಿಯಿತು.ಅಂದಿನ ಸರ್ವೇಯರ್ ಜನರಲ್ ಆಫ್ ಇಂಡಿಯ ಜಾರ್ಜ್ ಎವರೆಸ್ಟ್ ಕಾಲದಲ್ಲೂ (೧೮೨೩-೧೮೪೩) ಈ ಸರ್ವೇ ಮುಂದುವರೆದು ಹಿಮಾಲಯದ ಬುಡದವರೆಗೂ ತಲುಪಿತು.ಆತನ ನಂತರ ಬಂದ ಆಂಡ್ರ್ಯೂ ವಾನ ಕಾಲದಲ್ಲಿ ಹಿಮಾಯಲಯದ ಸುತ್ತ ಮುತ್ತ ಸರ್ವೇ ಮಾಡಲಾಯಿತು.

ಆಂಡ್ರ್ಯೂ ವಾ ೧೮೫೬ರಲ್ಲಿ ಕಲ್ಕತ್ತಾ ಎಸಿಯಾಟಿಕ್ ಸೊಸ್ಯಿಟಿಗೆ ೮೮೪೦ ಮೀ ಎತ್ತರದ ಪೀಕ್ XV ಬಹುಷಃ ಪ್ರಪಂಚದ ಅತ್ಯಂತ ಎತ್ತರದ ಪರ್ವತವಾಗಿರಬೇಕೆಂದು ವರದಿ ಮಾಡುತ್ತಾನೆ. (ಅಲ್ಲಿಯವರೆಗೆ ಜನ ಅತಿ ಎತ್ತರದ ಶಿಖರ ಆಂಡಿಸ್ನಲ್ಲೆಲ್ಲೋ ಇರಬೇಕೆಂದು ನಂಬಿದ್ದರು.)ಅಷ್ಟಲ್ಲದೆ ಅದಕ್ಕೆ ತನಗಿಂತ ಮೊದಲು ಸರ್ವೇಯರ್ ಜನರಲ್ ಆಗಿದ್ದ ಎವರೆಸ್ಟ್ ಹೆಸರನ್ನು ಅದಕ್ಕೆ ಸೂಚಿಸುತ್ತಾನೆ.ಅದಕ್ಕೆ ಸಕಾರಣ ಇವತ್ತಿಗೂ ಗೊತ್ತಿಲ್ಲ. (ಆದರೆ ಎವರೆಸ್ಟ್ ಅದಕ್ಕೆ ಸ್ಥಳೀಯ ಹೆಸರಾದ 'ಚೋಮೊಲುನ್ಗ್ಮ'ವೆ ಸರಿಯಾದ್ದೆಂದು ಸುಚಿಸಿದನೆಂದು ಹೇಳಲಾಗಿದೆ.) ಏನೇ ಆಗಲಿ ಆ ಶಿಖರ ಅವನ ಹೆಸರು ಹೊದ್ದು ನಿಂತಿದೆ.ಆದರೆ ಅವನೆಂದು ಅದನ್ನು ಕಣ್ಣಾರೆ ನೋಡಿರಲೇ ಇಲ್ಲ.

ಇದನ್ನು ಓದಿದ ಮೇಲೆ ಕನ್ನಡದ ಒಂದು ಗಾದೆ ನಿಮಗೆ ನೆನಪಾಗುವುದಿಲ್ಲವೇ? (ಸ್ವಲ್ಪ non-ವೆಜ್ ಗಾದೆ ಅದು)