ಶತಾಯುಷಿಯ ತಾರುಣ್ಯ

ಶತಾಯುಷಿಯ ತಾರುಣ್ಯ

ಬರಹ

ತಾರುಣ್ಯ ಅಂದ ಕೂಡಲೇ ಕ್ಲಿಕ್ ಮಾಡಿಬಿಟ್ರಾ? ಇರ್ಲಿ, ಪರವಾಗಿಲ್ಲ.

ಮೊನ್ನೆ "ಯಾಹೂ" ದಲ್ಲಿ ಪ್ರಕಟವಾದದ್ದು. ಇಟಲಿಯ ನೊಬೆಲ್ ಪ್ರಶಸ್ತಿ ವಿಜೇತೆ ರೀಟ ಲೆವಿ ಮೊಂತಾಲ್ಚಿನಿ ನೂರು ವಯಸ್ಸಿನ ಸಂಭ್ರಮ.
೧೯೮೬ ರಲ್ಲಿ ವೈದ್ಯಕೀಯ ಸಂಶೋಧನೆಗೆ ನೊಬೆಲ್ ಪಡೆದ ಈ ಮಹಾ ಮಾತೆ ಇಟಲಿಯ ಆಜೀವ senator ಸಹ ಹೌದು. ತನಗೆ ನೂರು ವಯಸ್ಸಾದರೂ ಬುಧ್ಧಿ ಕ್ಷಮತೆಯಲ್ಲಿ ತಾನು ೨೦ ರ ತರುಣಿಗಿಂತಲೂ ಹೆಚ್ಚು ಎಂದು ಹೆಮ್ಮೆ ಪಡುತ್ತಾರೆ.
ಈಕೆ ಹೇಳಿದ ಮಾತುಗಳು,
"ಎಲ್ಲಕ್ಕೂ ಮಿಗಿಲಾಗಿ ಕಷ್ಟ ಕಾರ್ಪಣ್ಯಗಳಿಗೆ ಭಯ ಬೀಳಬೇಡಿ, ಅವುಗಳಿಂದಲೇ ಅತ್ಯುತ್ತಮವಾದುವು ಹೊರ ಹೊಮ್ಮುತ್ತವೆ"
ಇಟಲಿಯ ಸರ್ವಾಧಿಕಾರಿ ಬೆನಿತ್ತೋ ಮುಸ್ಸೊಲಿನಿ ಯ ಕಾಲದಲ್ಲಿ ಯಹೂದಿಗಳ ವಿರುಧ್ಧ ದಮನವೂ, ಅವರ ವಿರುದ್ಧ ಕಾನೂನುಗಳು ರಚಿತವಾಗಿದ್ದ ದಿನಗಳಲ್ಲಿ ವಿದ್ಯಾರ್ಥಿನಿಯಾಗಿದ್ದ ರೀಟ ಧೃತಿಗೆಡದೆ ಮನೆಯಲ್ಲೇ ಇದ್ದು ಓದು ಮುಗಿಸಿದವರು.
ಕಾಲದ ಸವಾಲಿಗೆ ಎದೆಯೊಡ್ಡಿ ನೂರು, ನೂರಿಪ್ಪತ್ತರವರೆಗೂ ಬದುಕ ಸಾಗಿಸುವ, ಶತಾಯುಷಿಗಳ ರಹಸ್ಯವೇನಿರಬಹುದು? ವಿಶೇಷವಾದ ರೆಸಿಪಿ ಇಲ್ಲ ಅವರಲ್ಲಿ. ಅದೇ ನಮ್ಮ ತಾತ ಮುತ್ತಾತಂದಿರು, ಅಜ್ಜಿಯರು ಹೇಳಿದ್ದೆ.

ಕುಟುಂಬದವರ ನಂಟು ಇರಲಿ. ( ನೆನಪಿದೆಯಲ್ಲ ಅವಿಭಕ್ತ ಕುಟುಂಬ)
ಹೆಚ್ಚು ಚಿಂತೆ ಪಡದಿರುವುದು. ಚಿಂತೆಗೆ ನಾವೇ ಉರುವಲು.
ಧಾರ್ಮಿಕ ಶ್ರದ್ಧೆ
ನಮ್ಮ ಪಾಲಿಗೆ ದೇವರು ದಯಪಾಲಿಸುವ ಪ್ರತಿ ಅರುಣೋದಯವನ್ನು ಮುಗುಳ್ನಕ್ಕು ಸ್ವಾಗತಿಸುವುದು.
ಹೊಸ ಮಿತ್ರರು, ದೈನಂದಿನ ಬೆಳವಣಿಗೆಗಳ ಮೇಲಿನ ಗಮನ, ಹೊಸತನ್ನು ಕಲಿಯುವುದು, ಬುದ್ಧಿಯನ್ನು ತೀಕ್ಷ್ಣ ವಾಗಿಡುವ ಚಟುವಟಿಕೆಗಳಲ್ಲಿ ನಿರತರಾಗುವುದು ಮತ್ತು ವಿಶೇಷವಾಗಿ ಮಕ್ಕಳು ಮೊಮ್ಮಕ್ಕಳ ಮೇಲೆ ಅವಲಂಬಿತರಾಗದೆ ಸ್ವತಂತ್ರ ರಾಗಿರುವುದು.

ಚಿತ್ರ ಕೃಪೆ
flickr.com