"ನ೦ಜು೦ಡ"ನಾವು

"ನ೦ಜು೦ಡ"ನಾವು

ವಿಷ ಬೆರೆಸಿದ ಕಲುಷಿತದ ನೀರ ಕುಡಿದಿಹೆವು
ಮ೦ದ ವಿಷವಿರುವ ಅನ್ನವನು ತಿನುತಿಹೆವು
ಕೊ೦ದ ಇಲಿ ಜಿರಳೆಗಳ ತಿನಿಸಿನಲಿ ಕ೦ಡಿಹೆವು
ಮಿಳಮಿಳನೆ ಉದಯಿಸುವ ಕ್ರಿಮಿ ಕೀಟಗಳು
ಕ೦ದಮ್ಮಗಳು ಕುಡಿವ ಹಾಲಿನಲಿ ತೇಲಿಹವು
ಕೀಟನಾಶಕ ಬೆರೆತ ಮೃದುಪಾನೀಯಗಳ
ಕೂಟಗಳ ಏರ್ಪಡಿಸಿ ಎಲ್ಲರಿಗು ಹ೦ಚುವೆವು
ಚಿಣ್ಣರು ಚಪ್ಪರಿಸಿ ಮೆಲ್ಲುವ ಚಾಕೊಲೇಟಿನಲಿ ಹುಳುವೇ?!
ಬಿಸ್ಕತ್ತು, ಬ್ರೆಡ್ಡು, ಕೇಕು- ಇನ್ನೆಷ್ಟೋ ತಿನಿಸಿನಲಿ
ಬೂಷ್ಟುಗಳ ನಮಗರಿವಿಲ್ಲದೇ ತಿ೦ದಿಹೆವು
ಮತ್ತೆ ರಾಸಾಯನಿಕ ಸೇರಿಸಿದ ಕಡುಬಣ್ಣಗಳ
ಅಟ್ಟು-ಅ೦ಬಲಿಯ ಮಾಡಿ ಸವಿದಿಹೆವು.
ಇ೦ತೆಲ್ಲ ನ೦ಜುಗಳ ಉ೦ಡು೦ಡು ಉಬ್ಬರಿಸಿ
"ನ೦ಜು೦ಡ" ನಾವಾಗಿ ನಗುನಗುತ ಬದುಕಿಹೆವು.

Rating
No votes yet