ಜ್ಞಾಪಕ ಶಕ್ತಿ - ನೆನಪಿಡುವ ತಂತ್ರಗಳು

ಜ್ಞಾಪಕ ಶಕ್ತಿ - ನೆನಪಿಡುವ ತಂತ್ರಗಳು

ಬರಹ

"ಜ್ಞಾಪಕ ಶಕ್ತಿ ಅನ್ನೋದು ನಮ್ಮ ಮಿದುಳಿನ ಶಕ್ತಿಯೋ, ನಮ್ಮ ಬುದ್ದಿ ಶಕ್ತಿ ಗೆ ಸಂಬಂಧಿಸಿದ ವಿಚಾರವೋ ಅಲ್ಲ. ಅದು ನಾವು ನೆನಪಿನಲ್ಲಿ ಇಟ್ಟುಕೊಳ್ಳುವ ವಿಧಾನ ವಾಗಿದೆ". ಅಂದರೆ ಜ್ಞಾಪಕ ಶಕ್ತಿ ಅನ್ನೋದಕ್ಕಿಂತ ಜ್ಞಾಪಕ ತಂತ್ರ ಅನ್ನೋದು ಸೂಕ್ತ.

ಒಬ್ಬ ಸಾಧಾರಣ ವ್ಯಕ್ತಿ ನಾಲ್ಕೇ ನಾಲ್ಕು ವಿಚಾರಗಳನ್ನು ನೆನಪಿಟ್ಟುಕೊಳ್ಳಬಲ್ಲ. ಇದು ನಾನು ಹೇಳುವುದಲ್ಲ, ಒಂದು study ಹೇಳುವುದು. Times of India ವರದಿ ಮಾಡುತ್ತದೆ 'ಒಬ್ಬ ಸಾಧಾರಣ ವ್ಯಕ್ತಿ ನಾಲ್ಕೇ ನಾಲ್ಕು ವಿಚಾರಗಳನ್ನು ನೆನಪಿಟ್ಟುಕೊಲ್ಲಬಲ್ಲ, ಅದಕ್ಕೂ ಮೇಲು ಒಬ್ಬ ನೆನಪಿಡುವುದಾದರೆ ಅದು ಆತ ವಿವಿಧ ತಂತ್ರಗಳಿಂದ ನೆನಪಿಡುವುದಾಗಿದೆ'. ಉದಾಹರಣೆ ಗೆ ವರದಿ ಪ್ರಕಾರ ನಾವು ನಾಲ್ಕಕ್ಕಿಂತ ಹೆಚ್ಹು phone number ನೆನಪಿಡಲು ಸಾದ್ಯವಿಲ್ಲ ಆದರೆ ನಮ್ಮ ಜ್ಞಾಪಕದಲ್ಲಿ ಖಂಡಿತವಾಗಿಯೂ ನಾಲ್ಕಕ್ಕಿಂತ ಹೆಚ್ಹು ನುಂಬ್ರಗಳಿವೆ (ಮೊಬೈಲ್ ಬಂದ ಮೇಲೆ ಸ್ವಂತ ನಂಬ್ರ ವನ್ನೇ ನೆನಪಿಡುವುದು ಕಷ್ಟವಾಗಿದೆ!) ಇವು ನಾವು ಹೇಗೆ ನೆನಪಿಡುತ್ತೇವೆ ಎಂಬುದನ್ನು ಯೋಚಿಸಿ ಖಂಡಿತವಾಗಿಯೂ ಅದಕ್ಕಾಗಿ ಸುಲಭ ದಾರಿಗಳನ್ನು ನಮಗರಿವಿಲ್ಲದೆ ನಾವೇ ಮಾಡಿರುತ್ತೇವೆ. ಒಂದು ವೇಳೆ ನಾವು ಒಂದು ನಂಬ್ರವನ್ನು dail ಮಾಡಿ ಮಾಡಿ ಹವ್ಯಾಸವಾಗಿ ಆ ರೀತಿಯಲ್ಲಿ ನೆನಪಿಟ್ಟುರುತ್ತೇವೆ. ಆದ್ದರಿಂದಲೇ ಯಾರಾದರು ಆ ನಂಬ್ರವನ್ನು ಕೇಳಿದರೆ ಒಮ್ಮೆ ಮನಸ್ಸಲ್ಲೇ dail ಮಾಡಿ memory recall ಮಾಡಿ ಕೊಳ್ಳುತ್ತೇವೆ. ಇದಲ್ಲದೆ ಹೆಚ್ಚುಬಾರಿ ಜೋಡಿ ನಂಬ್ರ ಗಳಾಗಿ ನೆನಪಿಡಲು ಪ್ರಯತ್ನಿಸುತ್ತೇವೆ. ಉದಾಹರಣೆಗೆ 9-88-44-##-### ಮುಂತಾದ ರೀತಿಗಳಲ್ಲಿ ಜೋಡಿ ಜೋಡಿಯಾಗಿ ನೆನಪಿಡುತ್ತೇವೆ. ಹೀಗೆ ನಮಗರಿವಿಲ್ಲದೆ ನಾವು ವಿವಿಧ ತಂತ್ರಗಳನ್ನು ಬಳಸುತ್ತೇವೆ. ಅಂದರೆ ನಾವು ಬಳಸುವ ತಂತ್ರಗಳಾಗಿವೆ ನಮ್ಮ ನೆನಪಿನ ಶಕ್ತಿಯ ಮಾಪನ. ನಾವೆಷ್ಟು ತಂತ್ರಗಳನ್ನು ಬಳಸುತ್ತೇವೋ ಅಷ್ಟು ಹೆಚ್ಹು ನೆನಪಿಡಲು ಸಾದ್ಯ.

ಇದಲ್ಲದೆ ಬೇರೆ ದಾರಿಗಳಿವೆಯೇ?. ಎಂಬುದರ ಬಗ್ಗೆ ಯೋಚಿಸಿನೋಡಿ. ಖಂಡಿತಾ ಇದೆ ! Visualise -ಕಲ್ಪಿಸಿಕೊಲ್ಲು - ಮನಸ್ಸಲ್ಲೇ ಚಿತ್ರಿಸುದು. ನಾನು ಹೇಳುವ ವಿಚಾರ ಮನಸ್ಸಿನ ಒಳಗೆ ನಾವೇ ಮಾಡಿಕೊಳ್ಳುವ ಕೆಲವು Process ಅದನ್ನು ಹೇಳಿ ಅಥವಾ ಬರೆದು ಅರ್ಥ ಮಾಡಿಸುವುದು ಕಷ್ಟ. ಕೆಲವು ಉದಾಹರಣೆ ಗಳನ್ನೂ ನೀಡಬಹುದು. ಅದನ್ನು ಅರ್ಥಮಾಡಿದರಂತೂ ನೆನಪಿನ ಶಕ್ತಿಯ ಸರಳ ವಿಧಾನಗಳನ್ನು ನಾವೇ ಕಂಡುಕೊಳ್ಳಬಹುದು.

ನಿಮ್ಮಲ್ಲಿ ಯಾರೋ ಒಬ್ಬರು ಪೆನ್ನು ಕೇಳಿದರು ಎಂದಿತ್ತುಕ್ಕೊಳ್ಳಿ, ನಿಮಗೆ ಅದು ನೆನಪಿರುತ್ತದೆ, ಆದ್ರೆ ಕೆಲವೊಮ್ಮೆ ಯಾರೋ ಪೆನ್ನು ತಗೊಡಿರುವುದು ನೆನಪಿರುತ್ತದೆ ಆದೆರೆ ಯಾರು ಎಲ್ಲಿ ಅಂತ ನೆನಪೇ ಇರುವುದಿಲ್ಲ. ಆಗ ನೀವು ಹೇಗೆ ನೆನಪಿಸುವುದಕ್ಕೆ ಪ್ರಯತ್ನಿಸುತ್ತೀರಾ?. 'ನಾನು Office ಗೆ ಹೋಗುವಾಗ ಪೆನ್ನಿತ್ತು ಅಲ್ಲಿ sigh ಮಾಡಿದ್ದು ನನ್ನ ಪೆನ್ನಲ್ಲೇ. ಮತ್ತೆ ನನ್ನ ಡೆಸ್ಕ್ನಲ್ಲಿ ಕುಳಿತಾಗ ಇತ್ತು. ನೋಟ್ ಮಾಡೋವಾಗ ಪೆನ್ ತೆಗೆದಿದ್ದೆ... ಆನಂತರ .....' ಹೀಗೆ ನಿಮ್ಮ ಪೆನ್ನಿರುವ ಎಲ್ಲ ಘಟನೆಗಳನ್ನು ನೆನಪಿಸುತ್ತಾ ಹೋಗುತ್ತೀರಿ. ಅಂದರೆ ನಿಮ್ಮ ನೆನಪು ಸನ್ನಿವೇಶ ಗಳಾಗಿ ಉಳಿಸಿ(Save)ಕೊಂಡಿರುತ್ತಿರಿ. ನೀವು ನಿಮ್ಮ ಒಳಗಣ್ಣಿನಿಂದ ನೋಡುತೀರಿ, ಅನುಭವಿಸುತ್ತೀರಿ. ಆಗ ನೀವು ಆ ಘಟನೆ ಯಲ್ಲಿ ಬರುವ ಎಲ್ಲ ವಿಚಾರಗಳನ್ನು ಗುರುತಿಸಲು ಒಳಗಣ್ಣಿನಿಂದ ಕಾಣಲು ಶ್ರಮಿಸುತ್ತಿರಿ. ಅಂದರೆ ನೆನಪು ಘಟನೆಯ ರೂಪದಲ್ಲಿದ್ದರೆ ಜ್ಞಾಪಕ ದಲ್ಲಿಟ್ಟುಕೊಳ್ಳುವುದು ಸರಳ ವಾಗುತ್ತದೆ.

ಇದಕ್ಕೆ ಇನ್ನೊದು ಉತ್ತಮ ಉದಾಹರಣೆ ನೀಡಬಹುದು, ನಾವು ಲೇಖನ ಗಳನ್ನೂ ಓದುದ್ದೇವೆ ಅದೇ ರೀತಿ ಕತೆ ಗಳನ್ನೂ ಓದುತ್ತೇವೆ. ಇವಲ್ಲಿ ಹೆಚ್ಹು ನೆನಪಿನಲ್ಲಿರುವುದು ಕತೆ ಗಳಾಗಿವೆ ಯಾಕೆ? ಉತ್ತರ ಒಂದೇ ಕತೆಗಳನ್ನ ನಾವು ಘಟನೆ ಗಳಾಗಿ ನೆನಪಿಟ್ಟುಕೊಲ್ಲುತ್ತೇವೆ. ಅಂದರೆ ಅದರಲ್ಲಿ ಬರುವ ಸ್ಥಳಗಳು ನಮಗೆ ತಿಳಿದಿರುವ ಮತ್ತು ನೋಡಿರುವ ಸ್ಥಳಗಳಾಗಿ ಕಲ್ಪಿಸಿಕೊಳ್ಳುತ್ತೇವೆ, ಮತ್ತು ಪಾತ್ರಗಳು ನಮಗೆ ತಿಳಿದಿರುವ ವ್ಯಕ್ತಿಗಳೊಂದಿಗೆ ಹೋಲಿಸಿಕೊಳ್ಳುತ್ತೇವೆ. ಆದ್ದರಿಂದ ನಾವು ಅನುಭವಿಸಿದ ಒಂದು ಘಟನೆಯಾಗಿ ಅದು ನಮ್ಮ ಮನಸ್ಸಲ್ಲಿರುತ್ತದೆ. ಆದರೆ ಲೇಖನ ಹಾಗಿರುವುದಿಲ್ಲ. ಇನ್ನು ಕೆಲವರಿಗೆ ಕೆಲವು ಲೇಖನ ನೆನಪಿರಬಹುದು. ಅಲ್ಲೂ 'ಘಟನೆ' ಎಂಬ ವಿಚಾರ ಮುಖ್ಯವಾಗುತ್ತದೆ. ನೀನು ಓದಿದ ಸಮಯ ಸಂದರ್ಭ ಕಾರಣ ದಿಂದ ಆ ಲೇಖನ ನೆನಪಿನಲ್ಲಿರಿತ್ತದೆ. ಸಮಯ ಸಂದರ್ಭ ಎನ್ನುವುದು ಮನಸ್ಸಲ್ಲಿ ಚಿತ್ರಿಸ ಬಹುದಾದ ಒಂದಾಗಿದೇ ಅಂದ್ರೆ ಅದೂ ಒಂದು ಘಟನೆಯ ರೂಪಹೊಂದಿದೆ .

So ಇದು ಹೇಗೆ ನಮ್ಮ ದಿನ ನಿತ್ಯ ಕಾರ್ಯಗಳಲ್ಲಿ ಅಳವಡಿಸುವುದು. ಇಲ್ಲಿ ನೀವು ನಿಮ್ಮ ಸೃಜನಶೀಲತೆಯನ್ನು ಉಪಯೋಗಿಸಬೇಕಾಗುತ್ತದೆ. ಒಂದು ಉದಾಹರಣೆಯ ಮೂಲಕ ವಿವರಿಸುತ್ತೇನೆ.

ನೀವು Office ನಿಂದ ಬರುವಾಗ medicine ತರಬೇಕೆಂದು ನಿಮ್ಮ ಹೆಂಡತಿ ಅಥವಾ ತಾಯಿ ಹೇಳಿರುತ್ತಾರೆ. ಆದರೆ ನೀವು ಪ್ರತೀ ಬಾರಿ ಅದನ್ನು ಮರೆಯುತ್ತಿರ. ಇದನ್ನು ನೆನಪಿಡುವುದಕ್ಕೆ ನಾನು ಕಂಡು ಕೊಳ್ಳುವ ಸುಲಭ ದಾರಿಯನ್ನು ಹೇಳುತ್ತೇನೆ. ನೀವು ಪ್ರತೀ ದಿನ ಮನೆಗೆ ಬರುವ ದಾರಿ - ರೀತಿ (ರೀತಿ ಅಂದರೆ ನಡೆದು ಬರುವುದು ಅಥವಾ ವಾಹನದಲ್ಲಿ ಬರುವುದು) ಒಂದೇ ಆಗಿದ್ದಲ್ಲಿ, ಅಂದರೆ ನೀವುಪ್ರತೀ ದಿನ ಅದೇ ದಾರಿಯಲ್ಲಿ ಮತ್ತು ಅದೇ ರೀತಿಯಲ್ಲಿ ಬರುತ್ತಿರಿ ಎಂದಾದರೆ. ಮತ್ತು ನೀವು ಬರುವ ದಾರಿಯಲ್ಲಿ ಮೆಡಿಕಲ್ ಶಾಪ್ ಇದೆ. ಹಾಗಿದ್ದಲ್ಲಿ ನೀವು ಮನಸ್ಸಲ್ಲೇ ಒಂದು ಘಟನೆ ನೆನಪಿಸಿಕೊಳ್ಳಿ. ಏನಾದರೊಂದು , ಅದು ಇದಕ್ಕೂ ಮೊದಲು ನಡೆದಿಲ್ಲ ವಾಗಿದ್ದಲ್ಲಿ ಉತ್ತಮ. ಮತ್ತು ಅದಕ್ಕೂ ಮೆಡಿಕಲ್ ಶಾಪ್ ಗೂ ಸಂಬಂಧ ಇರ್ಲಿ. ಉದಾಹರಣೆ ಗೆ ನೀವು ಬರುತ್ತಿರುವಾಗ ಮೆಡಿಕಲ್ ಶಾಪ್ ಬಳಿ ಬರುವಾಗ ನಾಯಿ ನಿಮ್ಮನ್ನು ಓಡಿಸಿತು ಹಾಗೆ ಅದರಿಂದ ತಪ್ಪಿಸಲು ಏನೆಲ್ಲಾ ಮಾಡುವಿರಿ ಕಲ್ಪಿಸಿ. ಮತ್ತು ಕೊನೆಗೆ ನೀವು ಅಲ್ಲಿದ್ದ ಮೆಡಿಕಲ್ ಶಾಪ್ ಗೆ ಹೋಗಿ ತಪ್ಪಿಸಿದ್ದುದಾಗಿ ಕಲ್ಪಿಸಿ. ಇನ್ನು ಮೆಡಿಕಲ್ ಶಾಪ್ ಬಳಿ ಬರುವಾಗಲೆಲ್ಲ ಖಂಡಿತ ನಾಯಿ ಓಡಿಸಿದ್ದು ನೆನಪಿಗೆ ಬರುತ್ತದೆ ನೋಡಿ!!. ನಗು ಬರಬಹುದು ಆದರೆ ಈ ರೀತಿ ಶ್ರಮಿಸಿ ನೋಡಿ. ನಾನಂತೂ success ಆಗಿದ್ದೇನೆನೀವೂಕೂಡ ಇದು ಸುಲಭ ದಾರಿ ಎಂದು ಪರಿಗನಿಸುವಿರಿ. ಆದರೆ ನಿಮ್ಮ ಸೃಜನಶೀಲತೆ ಗೆ ಇಲ್ಲಿ ಹೆಚ್ಚಿನ ಕೆಲಸ.

ನಾನೋದು ವೀಡಿಯೊ ಇಲ್ಲಿ ಹಾಕುತ್ತಿದ್ದೇನೆ. ಅದನ್ನು ನೋಡಿ. ಅದು ಕೇವಲ ಒಂದು ಕಾರ್ಯಕ್ರಮದಲ್ಲಿ ನಾನು ನೀಡಿದ show. ನಾನು ಮೆಮೊರಿ ತಂತ್ರಗಳನ್ನೂ ಅಭ್ಯಾಸ ಮಾಡುತ್ತಿದ್ದ ಸಮಯದಲ್ಲಿ ನೀಡಿದ್ದು.

ವೀಡಿಯೊ ವೀಕ್ಷಿಸಿದ್ದಕ್ಕೆ ಧನ್ಯವಾದಗಳು. ಇನ್ನು ಈ ಲೇಖನವನ್ನು ಆಗಾಗ ನೆನಪಿಸುವುದಕ್ಕೆ ಒಂದು ಹೇಳುತ್ತೇನೆ. ನೀವು ಈ ಕೆಳಗಿನ ಭಾಗವನ್ನು ಎರಡು ಅಥವಾ ಹೆಚ್ಹು ಬಾರಿ ಓದಿ.

"ಮುಂದಿನ ಬಾರಿ ನೀವು ಸಂಪದಕ್ಕೆ log in ಆಗುವಾಗ ಈ ಲೇಖನ ನೆನಪಲ್ಲಿರುತ್ತದೆ ನೋಡಿ. ಒಂದು ವೇಳೆ ನೆನಪಾಗಿಲ್ಲ ಅಂದರೆ ನನಗೆ ಹೇಳಿ ಕಾರಣ ಏನಂತ ವಿವರಿಸುತ್ತೇನೆ. ಅಥವಾ ನೆನಪಾದಲ್ಲಿ ಸುಮ್ನೆ ಮುಗಳ್ನಕ್ಕು ಸಂಪದದ ಹೊಸ ಹೊಸ ಲೇಖನಗಳನ್ನು ಓದಿ ಖುಷಿಯಿಂದ logoff ಆಗಿ ಹಾಗೆ..."

********