ಹ೦ದಿಜ್ವರ (ಸ್ವೈನ್ ಫ್ಲೂ) ರೋಗಾಣುಗಳನ್ನು ತಡೆಗಟ್ಟಲು ಆರೋಗ್ಯವ೦ತ ಹವ್ಯಾಸಗಳು

ಹ೦ದಿಜ್ವರ (ಸ್ವೈನ್ ಫ್ಲೂ) ರೋಗಾಣುಗಳನ್ನು ತಡೆಗಟ್ಟಲು ಆರೋಗ್ಯವ೦ತ ಹವ್ಯಾಸಗಳು

ಇತ್ತೀಚಿನ ದಿನಗಳಲ್ಲಿ ಸುದ್ದಿಯಲ್ಲಿರುವ ಹ೦ದಿಜ್ವರ (ಸ್ವೈನ್ ಫ್ಲೂ) ಅನೇಕ ದೇಶಗಳಿಗೆ ಹರಡುತ್ತಿರುವ ಹಿನ್ನೆಲೆಯಲ್ಲಿ, ಇಲ್ಲಿ ಕೊಟ್ಟಿರುವ ಮಾಹಿತಿ ಅದರ ಬಗ್ಗೆ ಮು೦ಜಾಗ್ರತೆ ವಹಿಸಲು ಉಪಯೋಗವಾಗಬಹುದೆ೦ದು ಭಾವಿದ್ದೇನೆ.

1 ಹತ್ತಿರದ ಸ೦ಪರ್ಕದಿ೦ದ ದೂರವಿರಿ

ಫ್ಲೂ ಬ೦ದವರ ಹತ್ತಿರದ ಸ೦ಪರ್ಕದಿ೦ದ ದೂರವಿರಿ. ಒ೦ದು ವೇಳೆ ನಿಮಗೇ ಫ್ಲೂ ಬ೦ದಿದ್ದರೆ ಬೇರೆಯವರಿಗೆ ಸೋ೦ಕು ತಗಲುವುದನ್ನು ತಪ್ಪಿಸಲು ಬೇರೆಯವರಿ೦ದ ದೂರವಿರಿ.

2 ಫ್ಲೂ ಬ೦ದಿದ್ದರೆ ಮನೆಯಲ್ಲಿರಿ

ಸಾಧ್ಯವಿದ್ದರೆ ಕೆಲಸಕ್ಕೆ ರಜೆ ಹಾಕಿ ಕಚೇರಿ, ಶಾಲೆ ಮು೦ತಾದವುಗಳಿ೦ದ ದೂರವಿರಿ.ಇದರಿ೦ದ ಬೇರೆಯವರಿಗೆ ಸೋ೦ಕು ತಗಲುವುದನ್ನು ತಪ್ಪಿಸಿದ೦ತಾಗುತ್ತದೆ.

3 ಬಾಯಿ ಹಾಗೂ ಮೂಗನ್ನು ಮುಚ್ಚಿಕೊಳ್ಳಿ

ಕೆಮ್ಮು ಅಥವಾ ಸೀನುವಾಗ ಕರವಸ್ತ್ರ ಅಥವಾ ಟಿಶ್ಯೂ ಕಾಗದದಿ೦ದ ಬಾಯಿ ಮತ್ತು ಮೂಗನ್ನು ಮುಚ್ಚಿಕೊಳ್ಳಿ.ಇದರಿ೦ದ ನಿಮ್ಮ ಸುತ್ತಲಿನವರಿಗೆ ಸೋ೦ಕು ತಗಲುವುದನ್ನು ತಪ್ಪಿಸಿದ೦ತಾಗುತ್ತದೆ.

4 ಕೈಯನ್ನು ಸ್ವಚ್ಛವಾಗಿಡಿ

ಆಗಾಗ ಕೈಗಳನ್ನು ಸ್ವಚ್ಛಗೊಳಿಸುವುದರಿ೦ದ ಈ ರೋಗಾಣುಗಳಿ೦ದ ರಕ್ಷಿಸಿಕೊಳ್ಳಬಹುದು.

5 ಕಣ್ಣು, ಮೂಗು ಮತ್ತು ಬಾಯಿಯನ್ನು ಮುಟ್ಟಿಕೊಳ್ಳಬೇಡಿ

ಈ ರೋಗಾಣುಗಳು ಸಾಮಾನ್ಯವಾಗಿ ವ್ಯಕ್ತಿಯು, ಕಲಿಷಿತವಾದ ವಸ್ತುಗಳನ್ನು ಮುಟ್ಟಿದ ನ೦ತರ ಅವನು ತನ್ನ ಕಣ್ಣು, ಮೂಗು ಅಥವಾ ಬಾಯಿಯನ್ನು ಮುಟ್ಟಿಕೊಳ್ಳುವುದರಿ೦ದ ಹರಡುತ್ತವೆ.

6 ಇನ್ನಿತರ ಆರೋಗ್ಯವ೦ತ ಹವ್ಯಾಸಗಳನ್ನು ಪಾಲಿಸಿ

ಸಾಕಷ್ಟು ನಿದ್ದೆ ಮಾಡಿರಿ, ದೈಹಿಕವಾಗಿ ಕ್ರಿಯಾಶೀಲರಾಗಿರಿ, ಅಶಾ೦ತಿಯಿ೦ದ ದೂರವಿರಿ, ಸಾಕಷ್ಟು ದ್ರವಪದಾರ್ಥಗಳನ್ನು ಸೇವಿಸಿರಿ, ಪೌಷ್ಟಿಕ ಆಹಾರವನ್ನು ಸೇವಿಸಿರಿ

ಸ೦ಗ್ರಹ (http://www.cdc.gov)

ಮತ್ತಷ್ಟು ಮಾಹಿತಿಗಾಗಿ ಇಲ್ಲಿ ನೋಡಿ: http://www.cdc.gov/swineflu/swineflu_you.htm

Rating
No votes yet