ಬಿಗ್ ಬಜಾರ್, ಬಿಗ್ ತಪ್ಪು!

ಬಿಗ್ ಬಜಾರ್, ಬಿಗ್ ತಪ್ಪು!

ಬಿಗ್ ಬಜಾರ್ ಸೂಪರ್ ಮಾರ್ಕೆಟ್-ನವರು ಕಳೆದ ಕೆಲವು ದಿನಗಳಿಂದ ಎಫ್ ಎಂ ವಾಹಿನಿಗಳಲ್ಲಿ ಹಿ೦ದಿಯಲ್ಲಿ ಜಾಹಿರಾತು ನೀಡುತ್ತಿದಾರೆ.
"ನಾವು ಕೋಟಿ ಲೆಕ್ಕದಲ್ಲಿ ಸಾಮಾನು ಕೊಳ್ಳುತ್ತೇವೆ, ಅದಕ್ಕೇ ಕಮ್ಮಿ ಬೆಲೆಯಲ್ಲಿ ಮಾರಬಲ್ಲೆವು" ಅನ್ನೋ ಜಾಹೀರಾತು ಹಿ೦ದಿಯಲ್ಲಿ ಪ್ರಸಾರ ಆಗ್ತಿದೆ.

ಬೆಂಗಳೂರಲ್ಲಿ ಇರೋ 8 ರಲ್ಲಿ 7 ಎಫ್.ಎಮ್ ಚಾನೆಲ್ ಗಳು ಕನ್ನಡದ ಕಾರ್ಯಕ್ರಮಗಳನ್ನೇ ಹಾಕುತ್ತಾರೆ.
ಇಲ್ಲಿ ಗಮನಿಸಬೇಕಾದ ಅ೦ಶ ಅ೦ದ್ರೆ , ಕನ್ನಡ ಕಾರ್ಯಕ್ರಮಗಳು ಪ್ರಸಾರವಾಗುವಾಗ ಮಧ್ಯದಲ್ಲಿ ಬಿಗ್ ಬಜಾರ್-ನವರು ಹಿಂದಿ ಜಾಹಿರಾತುಗಳನ್ನು ನೀಡುತ್ತಿದ್ದಾರೆ.
ಇಂತಹ ಜಾಹಿರಾತುಗಳಿಂದ ಅದ್ಯಾವ ಜನರನ್ನು ತಲುಪಲು ಬಯಸುತ್ತಾರೋ ಗೊತ್ತಿಲ್ಲ.
ಹಲವಾರು ವರ್ಷಗಳಿಂದ ಬೆಂಗಳೂರಲ್ಲಿ ವ್ಯವಹಾರ ನಡುಸ್ತಿರೋ ಬಿಗ್ ಬಜಾರ್-ಗೆ, ಇಲ್ಲಿಯ ಜನತೆಯನ್ನು ತಲುಪಲು ಯಾವ ಭಾಷೆ ಬಳಸಬೇಕು ಅನ್ನೋದರ ಬಗ್ಗೆ ಇನ್ನೂ ಗೊಂದಲ ಇದ್ದಂತಿದೆ. ಜಾಹಿರಾತಿಗಾಗಿ ಬಳಸಬೇಕಾದ ಭಾಷೆ, ಕನ್ನಡ ಆಗಿತ್ತು, ಕನ್ನಡವೇ ಆಗಿದೆ, ಹಾಗು ಇನ್ನು ಮುಂದೆ ಕೂಡ ಕನ್ನಡವೇ ಆಗಿರುತ್ತೆ ಅನ್ನೋದನ್ನ ಬಿಗ್ ಬಜಾರ್ ಕಂಡುಕೊಳ್ಬೇಕು.

ಇತರೆ ಸೂಪರ್ ಮಾರ್ಕೆಟ್-ಗಳು ಕನ್ನಡ ಬಳಕೆ ಹೆಚ್ಚು ಮಾಡಿರೋ ಸಮಯದಲ್ಲಿ, ಹಿಂದಿಗೆ ಜೋತುಬಿದ್ದು ಪೈಪೋಟಿಯ ಈ ಮಾರುಕಟ್ಟೆಯಲ್ಲಿ ಸೋಲನ್ನು ಅನುಭವಿಸಲು ಬಿಗ್ ಬಜಾರ್ ಸಿದ್ದವಾಗಿರೋ ಹಾಗಿದೆ. ಹೀಗೇ ಮುಂದುವರುದ್ರೆ, ಬಿಗ್ ಬಜಾರ್ ತನ್ನ ಉದ್ಯಮದಲ್ಲಿ ಢಮಾರ್ ಆಗೋದು ಖಂಡಿತ.

ಬನ್ನಿ, ಗ್ರಾಹಕರಾಗಿ ನಾವು ಇವರಿಗೆ ಬುದ್ಧಿ ಹೇಳೋಣ ಜೊತೆಗೆ ಬೆ೦ಗಳೂರ ಜನತೆಯನ್ನು ತಲುಪಲು ಕನ್ನಡವನ್ನು ಬಳಸುವುದೇ ಸರಿ ಎಂದು ಬಿಗ್ ಬಜಾರ್ ಗೆ ಅರ್ಥ ಮಾಡಿಸೋಣ.

ಇವರ ಮಿಂಚೆ:
sharewithus@pantaloon.com
mediarelations@pantaloon.com

Rating
No votes yet

Comments