ಮತ್ತೆ ಕಂಡ ಕುಜಗ್ರಹ(ಮಂಗಳ)

ಮತ್ತೆ ಕಂಡ ಕುಜಗ್ರಹ(ಮಂಗಳ)

Comments

ಬರಹ

ಏಪ್ರಿಲ್ ೧೭ಱಂದು ಕುಜನನ್ನು ಕಂಡ ನಂತರ ಮೞೆ, ಮಂಜು ಮತ್ತು ಮೋಡಗಳಿಂದ ತುಂಬಿದ ಆಗಸದಲ್ಲಿ ಕುಜನನ್ನು ನೋಡಲು ಅಸಮರ್ಥನಾದ ನಾನು ಪುನಃ ಇಂದು ಬೆಳಿಗ್ಗೆ ೫.೩೦ಱಿಂದ ೫.೪೫ಱವರೆಗೆ ಮೂಡಣದಲ್ಲಿ ಅರುಣರಾಗ ಏಱುವ ಮುನ್ನ ಪುನಃ ಮಂಗಳನನ್ನು ನೋಡುವ ಭಾಗ್ಯಶಾಲಿಯಾದೆ. ಬೆಳಿಗ್ಗೆ ೪.೩೦ಱಿಂದಲೇ ಕಾಣಿಸಿಕೊಳ್ಳುತ್ತಿದ್ದ ಕುಜ ಶುಕ್ರನಿಂದ ಸ್ವಲ್ಪ ಕೆೞಗೆ ಮೂಡಣದಲ್ಲಿ ಕಾಣಿಸಿಕೊಂಡ. ಮೂಡಣದಿಂದ ಮೊದಲಿಗೆ ಕುಜ (ಉತ್ತರಾಭಾದ್ರ ೪ನೇ ಪಾದ ಸಂಜೆಗೆ ರೇವತಿ ೧ನೇ ಪಾದಕ್ಕೆ ದಾಟುತ್ತದೆ). ನಂತರ ಸ್ವಲ್ಪ ಮೇಲೆ ಮೂಡಣದಲ್ಲೆ ಕುಜನಿಗೆ ಪಡುವಣದೆಡೆಗೆ ಬೆಳ್ಳಿ(ಶುಕ್ರ) (ಉತ್ತರಾಭಾದ್ರ ೩ನೇ ಪಾದ) ಹಾಗೆಯೇ ಇನ್ನೂ ಮೇಲೆ ಶುಕ್ರನಿಂದ ಪಡುವಣದೆಡೆಗೆ ಹೆಚ್ಚು ಕಡಿಮೆ ನೆತ್ತಿಯ ಮೇಲೆ ಗುರುಗ್ರಹ(ಧನಿಷ್ಠಾ ೩ನೇ ಪಾದ) ಬೆಳಿಗ್ಗೆ ೪.೩೦ಱಿಂದಲೇ ಕಾಣಿಸಿಕೊಳ್ಳುತ್ತಿದ್ದರು. ಶುಕ್ರ ಎಳನೇಸಱು (ಬೆಳಿಗ್ಗೆ ೬.೨೦ಱ ಸುಮಾರಿಗೆ) ಮೂಡಿದ್ದಾಗಲೂ ಗುಱುತಿಸಬಹುದಾದಷ್ಟು ಪ್ರಖರನಾಗಿದ್ದಾನೆ. ಮೞೆ ಮೋಡ ಮತ್ತು ಮಂಜು ಮೂಡಣ ದಿಗಂತವನ್ನು ಆವರಿಸದಿದ್ದರೆ ಸತತವಾಗಿ ಇನ್ನೂ ಒಂದು ತಿಂಗಳವರೆಗೆ ಈ ಮೂಱೂ ಗ್ರಹಗಳನ್ನು ಬೆಳಿಗ್ಗೆ ೪.೩೦ಱಿಂದಲೇ ನೋಡಬಹುದು. ಪೊನ್ನಂಪೇಟೆಯಲ್ಲಿ ಈ ಗ್ರಹಗಳು ಕಂಡ ಬಗೆ ಈ ಕೆೞಗಿನ ಆಕಾಶನಕ್ಷೆಯಲ್ಲಿ ಗಮನಿಸಿ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet