ಒಂದು ಅಪೂರ್ವವಾದ ಗ್ರಂಥ

ಒಂದು ಅಪೂರ್ವವಾದ ಗ್ರಂಥ

ಬರಹ

 

ಸದ್ಗುರು ಶ್ರೀ ಬ್ರಹ್ಮಚೈತನ್ಯ ಮಹಾರಾಜರ ಜೀವನಚರಿತ್ರೆ ; ಒಂದು ಅಪೂರ್ವವಾದ ಗ್ರಂಥ

ಡಾ. ಹೊ.ರಾ. ಶ್ರೀಪಾದ್, ಉಪನ್ಯಾಸಕ, ಭೌತಶಾಸ್ತ್ರ (ಸ್ನಾತಕೋತ್ತರ) ವಿಭಾಗ,  ಸರ್ಕಾರಿ ಮಹಾವಿದ್ಯಾಲಯ(ಸ್ವಾಯತ್ತ),  ಮಂಡ್ಯ. sreepadhr@yahoo.com

ಇದು ಗೋಂದಾವಲೆಯಲ್ಲಿ ವಾಸಿಸಿ ಲೋಕಸಂಗ್ರಹಕಾರ್ಯ ಮಾಡಿದ ಸದ್ಗುರು ಶ್ರೀ ಬ್ರಹ್ಮಚೈತನ್ಯ ಮಹಾರಾಜರ ಜೀವನಚರಿತ್ರೆಯಾಗಿದೆ. ಹಿಂದೆ ಇದು ಕೇವಲ ಮರಾಠಿ ಭಾಷೆಯಲ್ಲಿದ್ದಿತು. ಅದನ್ನು ಪ.ಪೂ. ಶ್ರೀ ಶ್ರೀ ಬೆಲೆಸರೆ ಬಾಬಾಜಿಯವರು ಬರೆದಿದ್ದರು. ಹುಬ್ಬಳ್ಳಿಯ ಸಮೀಪವಿರುವ ಶ್ರೀಕ್ಷೇತ್ರ ಹೆಬ್ಬಳ್ಳಿಯ ಪ.ಪೂ. ಶ್ರೀ ಶ್ರೀ ದತ್ತಾವಧೂತ ಮಹಾರಾಜರು ಅದನ್ನು ಕನ್ನಡಕ್ಕೆ ಭಾಷಾಂತರಿಸಿದ್ದಾರೆ. ಸದ್ಗುರು ಶ್ರೀ ಬ್ರಹ್ಮಚೈತನ್ಯ ವಾಜ್ಮಯ ಪ್ರಕಾಶನ ಪ್ರತಿಷ್ಠಾನದವರು ಇದರ ಪ್ರಥಮ ಆವೃತ್ತಿಯನ್ನು ಕಳೆದ ವರ್ಷ ಹೊರತಂದಿದ್ದಾರೆ.

ಮಹಾರಾಜರ ಸಂಪೂರ್ಣ ಚರಿತ್ರೆಯನ್ನು ಒಳಗೊಂಡಿರುವ ಈ ಮಹಾನ್ ಗ್ರಂಥವು ಮಹಾರಾಜರ ಅನೇಕ ಅಪರೂಪದ ಭಾವಚಿತ್ರಗಳನ್ನೂ ಸಹ ಒಳಗೊಂಡಿದೆ. ಅಷ್ಟೇ ಅಲ್ಲದೇ ಇದರಲ್ಲಿ ಮಹಾರಾಜರ ಗುರುಪರಂಪರೆ ಹಾಗೂ ಶಿಷ್ಯಪರಂಪರೆಯನ್ನೂ ನೀಡಲಾಗಿದೆ.
ನಾಮದ ಮಹಿಮೆಯನ್ನು ಮುಕ್ತಕಂಠದಿಂದ ಜೀವನವಿಡೀ ಸಾರಿದ ಮಹಾರಾಜರ ಉಪದೇಶಗಳನ್ನೂ ಸಹ ಇಲ್ಲಿ ಅಧ್ಯಯನ ಮಾಡಬಹುದಾಗಿದೆ.

ಪುಸ್ತಕದ ಬಗೆಗೆ ಹೆಚ್ಚಿನ ಮಾಹಿತಿಯನ್ನು ಕೆಳಗಿನ ವಿಳಾಸದಿಂದ ಪಡೆಯಬಹುದಾಗಿದೆ:
ಸದ್ಗುರು ಶ್ರೀ ಬ್ರಹ್ಮಚೈತನ್ಯ ವಾಜ್ಮಯ ಪ್ರಕಾಶನ ಪ್ರತಿಷ್ಠಾನ, ಶ್ರೀಕ್ಷೇತ್ರ ಹೆಬ್ಬಳ್ಳಿ-೫೮೦ ೧೧೭, ಧಾರವಾಡ ಜಿಲ್ಲೆ, ದೂರವಾಣಿ- (೦೮೩೬)೨೪೮೪೩೧೮ / ೨೭೮೮೪೨೫
ಇವರ ಇ-ವಿಳಾಸ; shrikshetra_hebballi@rediffmail.com
ಪುಟಗಳು-೩೦+೬೧೮
ಬೆಲೆ- ರೂ. ೧೨೦/-
ನಾಮ ಜಪದ ಬಗೆಗೆ ಉತ್ತಮವಾದ ತಿಳುವಳಿಕೆ, ಭಕ್ತಿಯ ಅಗತ್ಯತೆ, ಪ್ರಪಂಚದಲ್ಲಿದ್ದೇ ಪರಮಾರ್ಥ ಸಾಧಿಸುವ ಬಗೆ - ಮುಂತಾದ ಅಮೂಲ್ಯ ವಿಚಾರಗಳು ಬೇಕಾದಲ್ಲಿ ತಪ್ಪದೇ ಈ ಗ್ರಂಥವನ್ನು ಓದಬೇಕಾಗಿ ವಿನಂತಿಸುವೆ. ಎಲ್ಲಾ ಜಿಜ್ಞಾಸುಗಳೂ ಅತ್ಯವಶ್ಯಕವಾಗಿ ಓದಲೇ ಬೇಕಾದ ಪಾರಾಯಣಗ್ರಂಥ ಇದಾಗಿದೆ.
ಪುಸ್ತಕ ಒದಗಿಸಿದ ಕೃಪೆ: ಶ್ರೀಯುತ ಜಿ. ನೀಲಕಂಠರಾಯರು, ಭದ್ರಾವತಿ.