ವದ್ದಳ್ಳಿ

ವದ್ದಳ್ಳಿ

VADDAllI" mce_src="

VADDAllI

" alt="" border="" hspace="" vspace="" width="" height="" align="" />ಶ್ರೀಧರ ಸ್ವಾಮಿಗಳ ಆಶ್ರಮ ಇರುವ ಊರು ಇದು. ವದ್ದಳ್ಳಿ ಅಥವಾ ವರದಹಳ್ಳಿ.ಇಲ್ಲಿಯ ಅಮ್ಮನವರು ಒಂದುಕಾಲನ್ನು ಮೇಲಕ್ಕೆ ಎತ್ತಿ ದುಷ್ಠರನ್ನು ಒದೆಯುವ ಭಂಗಿಯಲ್ಲಿ ನಿಂತಿದ್ದರಿಂದ ಇದನ್ನು ವದ್ದಳ್ಳಿ ಎಂದು ಕರೆಯುತ್ತಾರೆ. ಶ್ರೀಧರ ಸ್ವಾಮಿಗಳು ತಪಸ್ಸಿದ್ದಿಯ ನಂತರ ಈ ಊರಿನಲ್ಲಿ ನೆಲೆನಿಂತು ಆಶ್ರಮವನ್ನು ಕಟ್ಟಿಬೆಳೆಸಿದವರು. ಈಗ ಮೂರುನಾಲ್ಕು ದಶಕಗಳಿಂದ ಇವರ ಸಮಾಧಿಸ್ಥರಾಗಿದ್ದಾರೆ. ಈಗಲೂ ಇದು ಶ್ರದ್ಧಾ ಭಕ್ತಿ ಕೇದ್ರವಾಗಿ ಸುತ್ತುಮುತ್ತಲಿನ ಜನರನ್ನಲ್ಲದೇ ದೂರದ ಮಹಾರಾಷ್ಟ್ರದ ಜನರನ್ನೂ ಆಕರ್ಶಿಸುತ್ತಲಿದೆ.

ಅನಾದಿ ಕಾಲದಿಂದಲೂ ಶ್ರೀಧರ ಆಶ್ರಮದಲ್ಲಿ ನಿತ್ಯ ಅನ್ನ ಸಂತರ್ಪಣೆ ಇದ್ದು ಅದು ಇಂದಿಗೂ ಮುಂದುವರೆದಿದೆ. ಜಾತಿ ಬೇಧವಿಲ್ಲದ ಈ ಆಶ್ರಮದಲ್ಲಿ ಎಲ್ಲರಿಗೂ ಅನ್ನ ಪೂರ್ಣೆಯ ಅನುಗ್ರಹವಿದೆ. 

ಶಿವಮೊಗ್ಗಾ ಜಿಲ್ಲಾ ಸಾಗರ ಪಟ್ಟಣದಿಂದ ೭ ಕಿಮಿ ದೂರದಲ್ಲಿರುವ ಸೃಷ್ಟಿ ಸೌಂದರ್ಯದ ಈ ಪುಣ್ಯಕ್ಷೇತ್ರದಲ್ಲಿ ಭಕ್ತರಿಗೆ ವಸತಿಗೃಹವಿದೆ.ವಸತಿ ಗೃಹದ ವಿವರಣೆಯು  ಕೊನಯ ಎರಡು ಫೋಟೋಗಳಲ್ಲಿ ಇದೆ.

Rating
No votes yet

Comments