ನೀವು ಕೇಳಿದಿರಿ - ೧ . ೩
ಬರಹ
*ಆಂಟನಿ ಪ್ರಧಾನಿ ಆಗೋದಾದ್ರೆ ಓಕೆ ಅಂದ್ರಂತೆ ಎಡರಂಗ !
- 'ಅಂಟಿ',ನೀ ಅಂತ ಕೇಳಿಸಿಕೊಂಡ ಜಯಕ್ಕ , ನಾ ಒಲ್ಲೆ ಅಂದ ಬಿಟ್ರಂತೆ.ಹಿ ಹೀ
++++++
*ಏನ್ ಆಣೋ ಇದು, ರಾಯಲ್ ಚಾಲೆಂಜರ್ಸ್ ಈ ಪಾಟಿ ಆಡೋಕೆ ಹತ್ಯಾರೆ?
-ದೀಪ ಆರೋ ಮುನ್ನ ಜೋರಾಗಿ ಉರಿಯುತ್ತಲ್ಲ ಹಾಗಗದಿದ್ರೆ ಸಾಕು .
++++++
*ಇಲ್ಲೊಬ್ಬಳು ನಾನೊಬ್ಬ ನಟಿ ಆಕ್ಟಿಂಗ್ ಮಾಡೋದಷ್ಟೇ ನನ್ನ ಕೆಲಸ ಅನ್ನುತಿದ್ದಾಳೆ !
-ಇದು ಆಕ್ಟಿಂಗ್ ಇದ್ದರು ಇರಬಹುದು.
++++++
*ಮೊಬೈಲ್ ಅಲ್ಲಿ ಲೈಂಗಿಕ ಶಿಕ್ಷಣ ನೀಡುವ ಬಗ್ಗೆ ಸರ್ಕಾರದ ಚಿಂತನೆ .
-ಹಿ ಹೀ ಅದಾಗಲೇ ಜಾರಿಯಲ್ಲಿದೆ .
+++++++
*ಕಾಲೇಜು ಬದಲಾವಣೆಗೆ ಅಸ್ತು ಎಂದ ಕೋರ್ಟು .
-ಶಿಕ್ಷಕರನ್ನು (ಕಿಯರನ್ನು ) ಬದಲಾಯಿಸುವ ಹಾಗಿದ್ದರೆ ಚೆನ್ನಾಗಿತ್ತು ಅನ್ನುತಿದ್ದಾರಂತೆ ವಿದ್ಯಾರ್ಥಿಗಳು .
+++++++
*ಯೋಗ್ಯ ಕಾರ್ಯತಂತ್ರ ರೂಪಿಸುತಿದ್ದೇವೆ ನಾವೆಲ್ಲಾ ಅಂದ ಮುಲಾಯಂ .
-ಆ'ಯೋಗ್ಯ' ರ ಕೈಗೆ ಸಿಕ್ಕಿ ಏನಾಗುತ್ತಿವೋ ನಾವು .
++++++