ರಬ್ ನೆ ಬನಾದಿ ಮೀಸೆ

ರಬ್ ನೆ ಬನಾದಿ ಮೀಸೆ

ಹೇರ್‌ಸ್ಟೈಲ್ ಬದಲಿಸಿ ಮೀಸೆ ತೆಗೆದಾಗ ಹೆಂಡತಿಗೆ/ವಿಲನ್‌ಗೆ/ಬಾಸ್‌ಗೆ ಮಾತ್ರ ಗೊತ್ತಾಗದ ಅನೇಕ ಸಿನೆಮಾಗಳು ಬಂದಿವೆ.ಇತ್ತೀಚೆಗೆ ಬಂದ ಸಿನೆಮಾ 'ರಬ್ ನೆ ಬನಾದಿ ಜೋಡಿ'. ಅದರಲ್ಲಿ ಚಿತ್ರದಕೊನೆಯವರೆಗೆ ಹೀರೋಯಿನ್‌ ಮೀಸೆ ತೆಗೆದ ಶಾರುಕ್ ಖಾನ್ ಬೇರೇ ಅಂದು ತಿಳಿದಿದ್ದಳು. ಮೀಸೆ ಇದ್ದವನಿಗಿಂತ ಇಲ್ಲದವನನ್ನು ಬಹಳ ಇಷ್ಟಪಡುತ್ತಿದ್ದಳು. 


 ಕೆಲ ಹೀರೋಗಳು ಕತೆ, ನಿರ್ದೇಶಕರನ್ನೇ ಬದಲಿಸಿಯಾರು, ಆದರೆ ಕೂದಲಿಗೆ ಕತ್ತರಿ ತಾಗಿಸುವುದಿಲ್ಲ. ನಾನೂ ಹಾಗೇ ಇದ್ದೆ! ಕಿವಿಯಿಂದ ಕೆಳಗೆ ಇಳಿಬಿದ್ದ ನನ್ನ ಕೂದಲನ್ನು ಒಂದು ಇಂಚೂ ಜಾಸ್ತಿ ಕಟ್ ಮಾಡಲು ಬಿಡುತ್ತಿರಲಿಲ್ಲ.ಮೀಸೆ ಗಡ್ಡ ೨ ನಿಮಿಷಕ್ಕೊಮ್ಮೆಯಾದರೂ ಹೆಮ್ಮೆಯಿಂದ ಮುಟ್ಟುತ್ತಿದ್ದೆ.


 ನಮ್ಮ ಜೋಶಿಯವರು, ತಮ್ಮ 'ಪರಾಗಸ್ಪರ್ಶ' ಅಂಕಣದಲ್ಲಿ, ದೇಹದ ಪ್ರತೀ ಅಂಗಗಳ ವಯಸ್ಸು ಬೇರೆಬೇರೆ ಎಂದು ಬರೆದಿದ್ದರು. ಹಾಗೇ ನನ್ನ ಮನಸ್ಸು,ದೇಹವೆಲ್ಲಾ ೨೫ರ ಆಸುಪಾಸಿನಲ್ಲಿದ್ದರೂ ಕೂದಲು ಮಾತ್ರ ಬೆಳ್ಳಗಾಗಲು ಶುರುವಾಯಿತು. :( ಮೊದಮೊದಲು ಕಪ್ಪು ಕೂದಲಿಂದ ಮರೆಮಾಡಿದೆ. ಕರಿಯರನ್ನೇ ತುಳಿದು, ಬಿಳಿಯರು ಮೇಲೆ ಬಂದಾಗ-ಇನ್ನು ಸುಮ್ಮನಿರುವುದು ಸರಿಯಲ್ಲ ಅನಿಸಿತು. ಕೂದಲು ಡೈ ಮಾಡಿಸುವ ಬಗ್ಗೆ ನನ್ನ ಗೆಳೆಯನ ಬಳಿ ಸಲಹೆ ಕೇಳಿದೆ. ‘ ಈ ಕಾಡಿಗಾ! ಡೈ ಸಾಲದು, ಪೈಂಟರ್‌ನ ಕರೆಸಿ ಕಪ್ಪು ಪೈಂಟ್ ಹಾಕಿಸು’ ಎಂದು ನಕ್ಕ. “यारत्र केळिदरू क्लॊस फ्रेंड्स हत्तिर ऐडिया कॆळबारदु” - ಪುರಾಣದ ಸುಭಾಷಿತ ನೆನಪಾಯಿತು.


 ಟೈಮ್ ವೇಸ್ಟ್ ಮಾಡದೇ ಸೀದಾ ಸಲೂನ್‌ಗೆ ಹೋದೆ. ಕಣ್ಣು ತುಂಬಾ ಕೂದಲನ್ನು ನೋಡಿ, ಚಿಕ್ಕದಾಗಿ ಕೂದಲನ್ನು ಕತ್ತರಿಸಿ, ಡೈ ಮಾಡಲು, ಮೀಸೆ ತೆಗೆಯಲು ಹೇಳಿ ಕಣ್ಣು ಮುಚ್ಚಿ ಕುಳಿತೆ. ಕಣ್ಣು ತೆರೆದಾಗ ನನಗೇ ನನ್ನ ಗುರುತು ಸಿಗಲಿಲ್ಲ!


 ರಬ್ ನೇ ಬನಾದಿ ಜೋಡಿಯ ಶಾರುಕ್‌ನ ನೆನಪಾಯಿತು.


 ಯಾಕೆ ನಾನೂ ಪ್ರಯತ್ನಿಸಬಾರದು ಎಂದು ಸಲೂನ್‌ನಿಂದ ಡೈರೆಕ್ಟ್ ಮಾಲ್‌ಗೆ ಹೋದೆ. ಟೀಶರ್ಟ್, ಜೀನ್ಸ್, ಕೂಲಿಂಗ್‌ಗ್ಲಾಸ್ ಖರೀದಿಸಿ ಅಲ್ಲೇ ಹಾಕಿಕೊಂಡೆ. ಹೂವಿನ ಅಂಗಡಿಯಿಂದ ಕೆಂಪು ಗುಲಾಬಿ ಕೊಂಡು, ‘ಹೋಲೆ ಹೋಲೆ.. ಹೋಲೆ ಹೋಲೆ..ಪ್ಯಾರ್ ಹುವಾ..’ ಹಾಡು ಗುನುಗುತ್ತಾ ನನ್ನ ಮನೆಬಾಗಿಲು ಮೆಲ್ಲನೆ ತಟ್ಟಿದೆ.


 ...


 .. ನೀವೂ..ನಾನೂ ಅಂದುಕೊಂಡಂತೆ ಏನೂ ಆಗಲಿಲ್ಲ. :(


 ‘ಥತ್, ಇದೇನ್ರೀ..ನಿಮ್ಮ ವೇಷಾ.. .. ..? .. .. :} .. .. ? ....ತರಲು ಹೇಳಿದ್ದೆ.. .. ? .. .. }:) ..ಮೀಸೆ.. ....$#@@*%* ..’ ಉಳಿದ ೭ ಟೀಮಿನಿಂದ ಹೊಡೆಸಿಕೊಂಡ ಕಲ್ಕತ್ತಾ ಟೀಮಿನಂತಾದೆ. :(


-ಗಣೇಶ.

Rating
No votes yet

Comments