ಆರದಿರಲಿ ಹಣತೆ...

ಆರದಿರಲಿ ಹಣತೆ...

ಬರಹ

ಕನಸುಗಳೇ ಎಲ್ಲಿ ಹೋದಿರಿ ನಿವು ನನ್ನ ತೊರೆದು
ನನ್ನ ಎದೆಯ ಭಾವಗಳಿಗೆ ಕನ್ನ ಕೊರೆದು

ದೂರದಂಚಿನ ದಿಗಂತದಲಿ ಅರುಣೋದಯದ ರಂಗೋಲಿಯಂತಿತ್ತು.
ಅದರ ಮಧುರ ನೆನಪು ಉಳಿದಿದೆ - ಎಲ್ಲಿ ಹೋದವು ನನ್ನ ಬಿಟ್ಟು

ನನ್ನ ಕವಿತೆಗೆ ಮಧುರ ಸ್ಪೂರ್ತಿ ಆದಿರಿ ಅಂದು
ಬರೆಯಲೆಂದು ಕುಳಿತರು ಬರೆಯಲಾರದೆ ಹೋದೆ, ನೀವಿಲ್ಲದೆ ಇಂದು

ಅರಳಿದ ಸುಮಗಳ ಸುಮಧುರ ವಾಸನೆಯಂತಿತ್ತು ನನ್ನ ಕನಸು
ಮುದುರಿ ಹೋದವೇ ಎಲ್ಲ - ಯಾಕೆ ಹೀಗೆ ನನ್ನ ಮನಸು

ಮೂಡಿ ಬರಲಿ ಮತ್ತೆ ಕನಸು, ಸುಂದರ ಅರುಣೋದಯದಂತೆ
ದೂರ ಸರಿಯಲಿ ಎಲ್ಲ ನೋವು - ಕಾಡದಿರಲಿ ಮತ್ತೆ ಚಿಂತೆ

ಮರಳಿ ಬರಲಿ ಮತ್ತೆ ಸ್ಪೂರ್ತಿ - ಹೆಣೆಯುತಿರಲಿ ಹೊಸ ಕವಿತೆ
ತೋರುತಿರಲಿ ಬಾಳದಾರಿ - ಆರದಿರಲಿ ಬಾಳ ಹಣತೆ