ಹನಿ-ಗೆ-ವನ

ಹನಿ-ಗೆ-ವನ

ಬರಹ

ಕಾಡಿನಲ್ಲೆಂದೆಂದೂ ಪ್ರೇಮದಾ ಗಂಧ
ನಾಡಿನಲ್ಲಿ ತಾಳ್ಲಾರದ ಹುಚ್ಚು ಜಂಜಾಟ
ಅದಕ್ಕೇ ನನ್ನ ಹುಡುಗಿಗೆ ನಾನೆಂದೆ
ತಲೆನೋವೇಕೆ, ನಡೆಯೋಣ ಹನಿ-ಗೆ-ವನ
_________________________________________________________

ನಾನೇನೂ ಸೂರ್ಯನಲ್ಲ,
ಆದರೂ ಹೊಳೆಯುವಾಸೆ ಅಷ್ಟಿಷ್ಟು,
ನಾ ಬಂದೊಡನೆ ಕರೆಯಬೇಕು ಜನರು
ಬಂದನಿಗೋ ಟ್ಯೂಬ್ಲೈಟು....

_________________________________________________________

ದುಶ್ಯಂತನಿಗೆ ಪ್ರೇಮಜ್ವರ
ಹೂ ವನದಲ್ಲಿ ಶಾಕುಂತಲೆಯ ಕಂಡು
ಗೆಳೆಯ ಪ್ರೇಮ್ ಗೆ ಜ್ವರ
ಆರ್ಕುಟ್ ನಲ್ಲಿ ಪ್ರೇಮಿಯ ಫ್ಯಾನ್ಸ್ ಕಂಡು

_________________________________________________________

ಗೆಳತಿ ಕೇಳಿದಳು ಎನ್ನ
ನಿನಗಿಷ್ಟವಾದ ಸಿಹಿಯಾವುದೆಂದು ??
ಹೇಗೆ ಹೇಳಲಿ ಹುಡುಗಿ,
ನಿನ್ನ ಕಂಗಳಲಿ ಕಾಣ್ಬ ಪ್ರೀತಿಯೆಂದು