ಸಂಗೀತಶಿರೋಮಣಿ, ವಿದ್ಯಾಭೂಷಣರ ದಾಸ-ಸಂಗೀತ ಕಚೇರಿ, ಮುಂಬೈನ " ಮೈಸೂರ್ ಅಸೋಸಿಯೇಷನ್ " ನ ಭವ್ಯ ಸಭಾಂಗಣದಲ್ಲಿ !

ಸಂಗೀತಶಿರೋಮಣಿ, ವಿದ್ಯಾಭೂಷಣರ ದಾಸ-ಸಂಗೀತ ಕಚೇರಿ, ಮುಂಬೈನ " ಮೈಸೂರ್ ಅಸೋಸಿಯೇಷನ್ " ನ ಭವ್ಯ ಸಭಾಂಗಣದಲ್ಲಿ !

ಬರಹ

ದಾಸರ ಪದಗಳಪ್ರಖ್ಯಾತ ಗಾಯಕ, ಶ್ರೀ ವಿದ್ಯಾಭೂಷಣರ ಭಕ್ತಿಸಂಗೀತ ಗಾಯನ-ಕಚೇರಿಯು ಶನಿವಾರ, ಮೇ, ೨೩ ರಂದು, ಸಾಯಂಕಾಲ, ೬-೩೦ ಕ್ಕೆ ಸರಿಯಾಗಿ ’ಮೈಸೂರು ಅಸೋಸಿಯೇಷನ್ ’ ನ ಹವಾನಿಯಂತ್ರಿತ ಭವ್ಯ-ಸಭಾಂಗಣದಲ್ಲಿ ಕಿಕ್ಕಿರಿದ ಜನಸ್ತೋಮದ ಮಧ್ಯೆ, ಸುಮಾರು ೩ ಗಂಟೆಗಳಕಾಲ ಜರುಗಿತು. ವಿದ್ಯಾಭೂಷಣರ ಕಂಚಿನ ಕಂಠದಲ್ಲಿ ಹಾಡಿದ ದಾಸವರೇಣ್ಯರ ಎಲ್ಲಾ ದೇವರನಾಮಗಳನ್ನೂ ಸಭೆಯಲ್ಲಿದ್ದ ಸಂಗೀತ ರಸಿಕರು ತುಂಬುಹೃದಯದಿಂದ ಸ್ವಾಗತಿಸಿದರು. ಸಭಾಂಗಣ ಪೂರ್ತಿಯಾಗಿ ತುಂಬಿದ್ದು, ಹಲವಾರು ಸಂಗೀತಾಸಕ್ತರು ಹೊರಗಡೆ ನಿಂತು ಸಂಗೀತವನ್ನು ಆಲಿಸುತ್ತಿದ್ದರು !

ಮೈಸೂರು ಅಸೋಸಿಯೇಷನ್ ನ ಸದಸ್ಯೆಯರಾದ, ಶ್ರೀಮತಿ, ವಸಂತ್, ಮತ್ತು ಶ್ರೀಮತಿ, ಸೀತಾರಾಂರವರುಗಳು ಸುಪ್ರಸಿದ್ಧ ಗಾಯಕರನ್ನು ಪ್ರಾಸ್ತಾವಿಕವಾಗಿ ಸಭೆಗೆ ಪರಿಚಯಿಸಿದರು. ನಂತರ ಅಸೋಸಿಯೇಷನ್ ನ ಅಧ್ಯಕ್ಷರಾದ, ಶ್ರೀ ರಾಮಭದ್ರರವರು ಶ್ರೀ ವಿದ್ಯಾಭೂಷಣ ಹಾಗೂ ಅವರ ವೃಂದಕ್ಕೆ ಪುಷ್ಪಗುಚ್ಛಗಳನ್ನು ನೀಡಿಗೌರವಿಸಿದರು. ಕಾರ್ಯಕ್ರಮದ ಕೊನೆಯಲ್ಲಿ, ಅಸೋಸಿಯೇಷನ್ ನ ಯುವ ಗಾಯಕ, ಶ್ರೀ. ಪದ್ಮನಾಭರವರು, ವಂದನಾರ್ಪಣೆಯನ್ನು ಮಾಡಿದನಂತರ, ಕಾರ್ಯಕ್ರಮ ಮುಗಿಯಿತು.

ಈ ಭಕ್ತಿ-ಸಂಗೀತಕಾರ್ಯಕ್ರಮವನ್ನು ಪ್ರಾಯೋಜಿಸಿದವರು, ಮುಂಬೈನ ಸುಪ್ರಸಿದ್ಧ ಫ್ಯಾಶನ್ ಡಿಸೈನಿಂಗ್ ಸಂಸ್ಥೆ, ’ಐ. ಐ. ಟಿ. ಸಿ” ಯ ಆಡಳಿತ ನಿರ್ದೇಶಕರಾದ, ಶ್ರೀ. ಎಸ್. ಕೆ. ಉರ್ವಾಲ್, ಮತ್ತು ಅವರ ಧರ್ಮಪತ್ನಿ, ಪ್ರಫುಲ್ಲ ಉರ್ವಾಲ್ ರವರು. ಈ ಉಚಿತ ಸಂಗೀತ ಕಾರ್ಯಕ್ರಮದ ನಂತರದ ಅಲ್ಪಾಹಾರದ ವ್ಯವಸ್ಥೆಯನ್ನೂ ವಹಿಸಿಕೊಂಡಿದ್ದ ಉರ್ವಾಲ್ ಪರಿವಾರ, ಇಂದು, (೨೪-೦೫-೨೦೦೯) ಸಾಂತಾಕ್ರೂಝ್ ಪೂರ್ವದಲ್ಲಿರುವ " ಪೇಜಾವರಯತಿಗಳ ಆಶ್ರಮ " ದಲ್ಲಿ, ಸಾಯಂಕಾಲ ೬-೩೦ ಕ್ಕೆಸರಿಯಾಗಿ ’ದಾಸಸಂಗೀತ ಕಾರ್ಯಕ್ರಮ ’ ವನ್ನು ಹಮ್ಮಿಕೊಂಡಿದ್ದಾರೆ. ಅಲ್ಲಿಯೂ ಶ್ರೀ. ವಿದ್ಯಾಭೂಷಣರೇ ಹಾಡುವವರಿದ್ದಾರೆ. ರಸಿಕರು, ಸಮಯಕ್ಕೆ ಸರಿಯಾಗಿ ಉಪಸ್ಥಿತರಿದ್ದು, ಈ ಸದವಕಾಶವನ್ನು ಉಪಯೋಗಿಸಿಕೊಳ್ಳಬೇಕಾಗಿ ಸವಿನಯ ಪ್ರಾರ್ಥನೆ.

-ಚಿತ್ರ, ವೆಂಕಟೇಶ್.