ಅಂದು ಇಂದು

ಅಂದು ಇಂದು

ಬಾಲ್ಯ ನಮ್ಮ ಬದುಕಿನ ಸಮಗ್ರತೆಯ ಒಂದು ಸಂಕೀರ್ಣ ಬಿಂದು. ಅಂದು ಬಾಲ್ಯಕ್ಕೆ ಸಂದಿದ್ದ ಅನೇಕ ಸಂಕೇತ ಗೀತೆಗಳು ಇಂದು ಮೌನ ಗಾತೆಗಳಾಗಿವೆ.

ನಮ್ಮೆಲರ ಬಾಲ್ಯ ಬಹುತೇಕ ನಮ್ಮ ಒಳಗಿನ ತುಡಿತಗಳ
ಬಣ್ಣ ಬಣ್ಣದ ಚಿತ್ರಪಟಗಳೂ ಹೌದು.

ಇಂದು ಅಂದಿನಂತಿಲ್ಲ, ಅಂದಿನ ಸರಳ ಬದುಕಿನ ಸುಂದರತೆ
ಇಂದಿನ ಸಂಕೀರ್ಣತೆಯಲ್ಲಿ ಎಲ್ಲೋ ಕಳೆದುಹೋಗಿದೆ.

ಇಂದಿನ ಬಾಲ್ಯ ಸರಸರನೆ ಕಂಪುಟರ್ ಗೇಂಗಳ ತೀವ್ರತೆಯಲ್ಲಿ, ಪರೀಕ್ಷೆಗಳ ಹಾವಳಿಯಲ್ಲಿ ಬದುಕಿನ ಜಂಜಾಟದಲ್ಲಿ, ನಡೆಯುವ ಬದಲು ಓಡುವ ಕಾಲದಲ್ಲಿ
ಬಹು ಬೇಗನೆ ಕಳೆಯುತ್ತಿದೆ.

ಅಂದು ಅಮ್ಮ ಅಪ್ಪಂದಿರ ಜೊತೆ ಸಕಲ ಕುಟುಂಬದ ಮಂದಿಯೆಲ್ಲರೊಡನೆ ಕಳೆಯುತ್ತಿದ್ದ ಬಾಲ್ಯದ ಸಂಪು ಇಂದಿಲ್ಲ

ಇಂದು ಹೊರದೇಶಕ್ಕೆ ವಲಸೆ ಬಂದ ನಾವು ಹಕ್ಕಿ ಗೂಡುಗಳಲ್ಲಿ ಕುಳಿತು ಮೆಲ್ಲನೆ ನಮ್ಮ ಬಾಲ್ಯವನ್ನು ಮೆಲುಕುವಾಗ ಅದರ ಸೊಗಸೇ ಬೇರೆ.

ಇಂದಿನ ಮಕ್ಕಳು ಅಜ್ಜ, ಅಜ್ಜಿ , ಮಾವಂದಿರ ಒಲುಮೆಯನ್ನು ಕಾಣದೆ ಬೆಳೆಯುವ ಕೋಡ್ಗಂಬಗಳಾಗುತ್ತಿರುವುದು ಅಧುನೀಕತೆಯ ವೈಷಿಷ್ಟ್ಯ.

ಇಂದಿನ ಅಜ್ಜಿ ಅಜ್ಜಂದಿರು ಕೂಡ ಅಂದಿನತಿಲ್ಲ ಬಿಡಿ, ಅಂದಿನ ಇಂದಿನ ಔಲ್ಯಗಳು ಬೇರೆಯಗಿವೆ. ಅಂದು ಕುಟುಂಬದ ಎಲ್ಲ ಸದಸ್ಯರ ಒಟ್ಟು ಬೆಳವಣಿಗೆ ಇತರ ಕುಟುಂಬದವರ ಜವಾಬ್ದಾರಿಯೂ ಆದದ್ದಿತ್ತು ಆದರೆ ಇಂದು ಕುಟುಂಬ ಎನ್ನುವುದು ಸಣ್ಣ ದ್ವೀಪವಾಗಿ ಮಾನವತೆಯ ಎಷ್ಟೋ ಮೌಲ್ಯಗಳು ಕೂಡ ಕರಗುತ್ತಿವೆ.

ಮಾನವ ಕೂಡ ತಾನೆ ಒಂದು ದ್ವೀಪವಾಗಿ ಬಾಲ್ಯ ಈ ದ್ವೀಪದ ಚುಕ್ಕೆಯಾಗಿ ಬದುಕಿನ ನಿರಂತತೆಯಲ್ಲಿ ಕಾಣೆಯಾಗುತ್ತಿದೆ ನೋಡಿ...

ಕನ್ನ್ಡದಲ್ಲಿ ಬರೆಯೋದು ತುಂಬ ಕಷ್ಟ!...(

Rating
No votes yet

Comments