ಮುಕ್ತಿ ನನ್ನಾಯ್ಕೆ

ಮುಕ್ತಿ ನನ್ನಾಯ್ಕೆ

ಎಲ್ಲ ಚೆಲುವಿಯರ ನಡುವೆ "ಮುಕ್ತಿ" ನನ್ನಾಯ್ಕೆ
'ಮುಕ್ತಿ' ನನ್ನದೆಯ ಗೆದ್ದ ಚಲುವೆ.
'ಮುಕ್ತಿ' ಬಳಿಯಲ್ಲಿ ನಾನು ಓಡಾಡುವೆನು
ಅವಳ ಚೆಲುವಿಗೆ ಮೆಚ್ಚಿ ಮರುಳಾಗಿಹೆನು.

ಬೆಳಗಾಗಿ ಮುಗುಳು ನಗೆ ನನ್ನ ಸ್ವಾಗತಿಸುವುದು
ಮಧ್ಯಾನ್ಹದಲಿ ಊಟವಾಯಿತೇ ? ಎಂಬ ಚಿಕ್ಕ ಸನ್ನೆ
ಸಂಜೆಯಲಿ ಸೋಲಿಲಿಲ್ಲದ ಸೋಬಗ ಸುರಿಸುವ ಚಲುವೆ,
ಕಾಡುವಳು ಕನಸಾಗಿ ರಾತ್ರಿಯಲಿ.

'ಮುಕ್ತಿ'ಯಾ ಮನಸದೋ ಪ್ರೀತಿ ಮಲ್ಲಿಗೆ ತೋಟ
ಕೈ ಮಾಡಿ ನನ್ನನು ಕರೆಯುತಿಹುದು .
ಬಳಿಗೆ ಸುಲಿಯುವದಿಲ್ಲ,ದೂರ ನಿಲುವೆನು ನಾನು
ಮುಟ್ಟಿದರೆ ಪ್ರೀತಿ ಮಲ್ಲಿಗೆಯ ಹೂ ತನ್ನಗಿಹುದು.

ಯಾರೋ ಯಾರೋ ಬಂದು 'ಮುಕ್ತಿ'ಯಾ
ಪ್ರೇಮ ಬಂಧನ ಬಯಸುವವರು ,ಆದರೆ
'ಮುಕ್ತಿ' ಬಯಸುವುದು ನನ್ನ ಬಂಧನ ವನ್ನೇ
ನವಿರಾಗಿ ಬಳಕುವಳು ನನ್ನ ನಲ್ಮೆಯ 'ಮುಕ್ತಿ'
ಅವಳಿಗೂ ಉಂಟೂ ನನಗಿರುವ ನಂಟು .

ಚೆಲುವ ಕಂಡೆನೆ ನಾನು ಚೆಲುವಿಯರ ಗುಂಪಿನಲ್ಲಿ
ಒಲವ ಕಂಡೆನು ನಾನು ಬದುಕಿನಲ್ಲಿ
ಚೆಲುವ ಒಲವುಗಳಲ್ಲಿ ಬಾಳ ಹಾದಿಯ ಕಂಡೆ,
'ಮುಕ್ತಿ' ಪ್ರೀತಿಯಲಿ ನಾ ಧನ್ಯನಾದೆ.

[ ಕೆ .ಎಸ .ಏನ್ . ಅವರ 'ಮಲ್ಲಿಗೆಯೇ ನನ್ನಯ್ಕೆ ' ಎಂಬ ಕವನದ ರೂಪಾಂತರ ]
*********************
ಎಮ್.ಡಿ.ಎನ್.ಪ್ರಭಾಕರ್
******************

Rating
No votes yet

Comments