ಬಾಳಿನ ಪಾಠ

ಬಾಳಿನ ಪಾಠ

ನಗುತಿಹುದು ಹೂವು ನನ್ನ ಕಂಡು
ಮುರ್ಖನಾಗಿಯಲ್ಲೋ ಎಂದು
ನೋಡಿಕಲಿ ನನ್ನನ್ನೊಮ್ಮೆ ಜೀವನದ ಪಾಠವ
ಮಳೆ ಬರಲಿ , ಬಿಸಿಲೆರಲಿ
ಬರಸಿಡಿಲೆ ಬಂದೆರಗಲಿ ತಲೆಯೆತ್ತಿ
ನಿಲ್ಲು ಕೊನೆಯವರೆಗೂ

ಬಾಳ ಹಾದಿಯಲಿ ಚಿವುಟುವರು
ಅದೆಷ್ಟೋ ,ಹೊಸಕುವವರು
ಅದೆಷ್ಟೋ ,ಅಂಜದಿರು ನೀ ಅದಕ್ಕೆಲ್ಲ
ಮಾಡುತಿರು ಯತ್ನವ ಮರಳಿ ಮರಳಿ
ಎಂದಾದರೊಂದು ದಿನ ಆರಳುವುದು
ನಗುವೂ ನಿನ್ನ ಮೊಗದಲಿ

ಇರುವರು ಇಲ್ಲಿ ನಿನ್ನಾ ಆರೈಸುವವರು
ಕಾಯಬೇಕಿದೆ ನೀನು ಅವರಿಗಾಗಿ,
ನಗುಮುಕವ ನೋಡಿದೊಡನೆ
ಗ್ರಹಿಸದಿರು ನೀ ನೋವೆ ಇಲ್ಲವೆಂದು ನನಗೆ
ಇರುವ ನೋವೆಲ್ಲ ಒಡಲೊಳಗೆ ನುಂಗಿ
ರಸವಾಗಿ ಹರಿಯುತಿಹುದು ಇಂದು

ನೋವೆಲ್ಲವನ್ನೂ ರಸವಾಗಿಸಿ
ಒಡಲೊಳಗೆ ಬಚ್ಚಿಟ್ಟರು ಬಿಡಲೊಲ್ಲರು
ಇಲ್ಲಿ ಕೆಲವರು ನನ್ನ ಸುಖದಿಂದಿರಲು
ಒಡಲ ಒಡೆದು ರಸವ ಹಿರಿ ಸಿಹಿಯಾಗಿದೆ
ಎಂದು ಹಿಗ್ಗುತ್ತಿಹರು

ತಿಳಿ ಮನುಜನೆ ಬಾಳಿನ
ಅರ್ಥವೊಮ್ಮೆ
ತ್ಯಾಗಕ್ಕಿಂತ ದೊಡ್ಡ ಗುಣವಿಲ್ಲ
ನಗುವಿಗಿಂತ ದೊಡ್ಡ ಅಸ್ತ್ರವಿಲ್ಲ

Rating
No votes yet

Comments