ಭಾನುವಾರ ಕೋಲಾರದಲ್ಲಿ 'ನೀರ ನಿಶ್ಚಿಂತೆ' ಕಾರ್ಯಕ್ರಮ

ಭಾನುವಾರ ಕೋಲಾರದಲ್ಲಿ 'ನೀರ ನಿಶ್ಚಿಂತೆ' ಕಾರ್ಯಕ್ರಮ

ಈ ಭಾನುವಾರ ಕೋಲಾರದ ಪತ್ರಕರ್ತರ ಭವನದಲ್ಲಿ 'ನೀರ ನಿಶ್ಚಿಂತೆ' ಕಾರ್ಯಕ್ರಮದ ಮತ್ತೊಂದು ಆವೃತ್ತಿ!

ಎಂದಿನಂತೆ,

ಅವಧಿ ೧: ಸ್ಥಳೀಯ ಸಮುದಾಯದ ಪರಿಚಯ

ಅವಧಿ ೨: ನೀರ ಕುರಿತು ಅರಿವು ಮೂಡಿಸಲು ತಂತ್ರಜ್ಞಾನ, ಇಂಟರ್ನೆಟ್ ಬಳಕೆ - ಹೇಗೆ?

ಅವಧಿ ೩: ಡಾಕ್ಯುಮೆಂಟರಿ

ಕೋಲಾರದ ಕನ್ನಡಿಗರೆಲ್ಲ, ಆಸಕ್ತರೆಲ್ಲ ಒಟ್ಟಾಗಿ ಬರ್ತೀರಲ್ವ?

'ನೀರ ನಿಶ್ಚಿಂತೆ' ಕಾರ್ಯಕ್ರಮ ಈ ಹಿಂದೆ ಧಾರವಾಡದಲ್ಲಿ, ಒಮ್ಮೆ ಮಂಗಳೂರಿನಲ್ಲಿ, ಮತ್ತೊಮ್ಮೆ ತುಮಕೂರಿನಲ್ಲಿ ನಡೆದಿತ್ತು.
ಈ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಪರಿಚಿತರಾದ ಹಲವರು ಆನ್ಲೈನ್ ಸಮುದಾಯಗಳಲ್ಲಿ ಈಗ ಸಕ್ರಿಯರಾಗಿದ್ದಾರೆ. ಕೃಷಿ, ನೀರು ಮುಂತಾದ ವಿಷಯಗಳ ಬಗ್ಗೆ ಬರೆಯುತ್ತ ನಮ್ಮೊಂದಿಗೆ ಹಲವು ವಿಷಯಗಳನ್ನು ಹಂಚಿಕೊಳ್ಳುತ್ತಿದ್ದಾರೆ.
ಬರುವ ಭಾನುವಾರ ಮತ್ತಷ್ಟು ಆಸಕ್ತರು ಸಂವಾದದಲ್ಲಿ ಪಾಲ್ಗೊಳ್ಳುವುರಲ್ಲದೆ ಮುಂದೊಂದು ದಿನ ತಂತ್ರಜ್ಞಾನ, ಅಂತರ್ಜಾಲ ಹಾಗು ಹೊರಗಿನ ಜಗತ್ತಿನ ನಡುವೆ ಇರುವ ಅಂತರವನ್ನು ಕಡಿಮೆ ಮಾಡುವಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವರು, ತಂತ್ರಜ್ಞಾನದ ಜಗತ್ತು ತರುವ ಉಪಯೋಗಗಳನ್ನು ಸದುಪಯೋಗಪಡಿಸಿಕೊಳ್ಳುವರು ಎಂಬ ದೂರದೃಷ್ಟಿಯ ಆಕಾಂಕ್ಷೆ ಹೊತ್ತ ಕಾರ್ಯಕ್ರಮ ಇದು.

ನಾವೆಲ್ಲ ಭಾನುವಾರ ಅಲ್ಲಿರುತ್ತೇವೆ. ನೀವೂ ಬನ್ನಿ, ಕೋಲಾರದ ನಿಮ್ಮ ಸ್ನೇಹಿತರಿಗೂ ತಿಳಿಸಿ!

ಸಮಯ:

1.30 PM to 5.30 PM

ಸ್ಥಳ:
ಪತ್ರಕರ್ತರ ಭವನ
ಅಂತರಗಂಗೆ ರಸ್ತೆ, LIC ಆಪೀಸ್ ಪಕ್ಕ,
ಕೋಲಾರ

ನಿಮ್ಮ ಗಮನಕ್ಕೆ:
೧) ಕಾರ್ಯಕ್ರಮಕ್ಕೆ ನಿಮ್ಮ ಸ್ನೇಹಿತರನ್ನೂ ಅಹ್ವಾನಿಸಬಹುದು.
೨) ಕಾರ್ಯಕ್ರಮ ಕಂಪ್ಯೂಟರ್ ಬಳಕೆಯ ಪ್ರಾಥಮಿಕ ಪರಿಚಯ ನೀಡುವುದಿಲ್ಲ, ಬದಲಿಗೆ ಮಾಹಿತಿ
ತಂತ್ರಜ್ಞಾನವನ್ನು ಜನರಿಗೆ ಉಪಯೋಗವಾಗಬಹುದಾದ ಮಾಹಿತಿ ಹಂಚಿಕೊಳ್ಳಲು ಉತ್ತಮವಾಗಿ
ಹೇಗೆ ಬಳಸಿಕೊಳ್ಳಬಹುದು ಎಂಬುದರ ಕುರಿತು. ಭಾಗವಹಿಸುವವರಿಗೆ ಕಂಪ್ಯೂಟರ್ ಬಳಕೆ ಪರಿಚಿತವಾಗಿದ್ದಲ್ಲಿ ಮಾತ್ರ ಕಾರ್ಯಕ್ರಮ ಉಪಯುಕ್ತವಾಗಬಹುದು.
೩) ಈ ಕಾರ್ಯಕ್ರಮ ಕಂಪ್ಯೂಟರ್ ಬಳಕೆಯ ಪರಿಚಯವಿರುವ ಪತ್ರಕರ್ತರಿಗೆ, ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ಬಹಳ
ಉಪಯುಕ್ತವಾಗಬಲ್ಲುದು. ಹೊಸ ಬ್ಲಾಗ್ ಪ್ರಾರಂಭಿಸಲು ಆಸಕ್ತಿ ಇಟ್ಟುಕೊಂಡವರಿಗೆ,
ಈಗಾಗಲೇ ಬ್ಲಾಗ್ ಒಂದರಲ್ಲಿ ಬರೆಯುತ್ತ ತಮ್ಮ ಬರಹಗಳನ್ನು ಹಂಚಿಕೊಳ್ಳುತ್ತಿರುವವರಿಗೆ
ಈ ಕಾರ್ಯಕ್ರಮ ಉಪಯುಕ್ತವಾಗುವುದು.
೪) ಕಾರ್ಯಕ್ರಮದ ನೋಂದಣಿಗೆ ಶುಲ್ಕವಿಲ್ಲ, ಆದರೆ ಊಟ/ಉಪಾಹಾರ ಹಾಗೂ ಸಾಂದರ್ಭಿಕ ಖರ್ಚುಗಳಿಗೆ ಸಿದ್ಧವಾಗಿರಿ.