ಸ್ಪಟಿಕ ಎಸ್ಟೇಟ್ - 4

ಸ್ಪಟಿಕ ಎಸ್ಟೇಟ್ - 4

http://sampada.net/blog/malathi-shimoga/08/05/2009/20002
http://sampada.net/blog/malathi-shimoga/06/05/2009/19934
http://sampada.net/blog/malathi-shimoga/05/05/2009/19901

ಕೈ ಇಡಿದು ಬೇಗ ಬೇಗ ಹೊರಕರೆದುಕೊಂಡು ಬಂದರು ಅಬ್ಬ ರಾಮಮುರ್ತಿ ಸಧ್ಯ ಭವಾನಿ ನಿನ್ನುನ್ನ ಎಲ್ಲಿ ಏನ್ ಕೇಳ್ಬಿಡ್ತಾಳೊ ಅನ್ಕೊಂಡಿದ್ದೆ........ಯಾಕ್ ರಾಯ್ರೆ? ಏನಾಯ್ತು? ದುಗುಡ ವ್ಯಕ್ತಪಡಿಸಿದರು ಏನ್ ಹೇಳ್ಲಿ ರಾಮಮುರ್ತಿ ಒಳ್ಳೆ ಇಕ್ಕಟ್ಟಿನ್ ಪರಿಸ್ಥಿತಿಯಲ್ಲಿ ಸಿಕ್ಕಾಕ್ಕೊಂಡಿದ್ದೀನಿ ಎಂದು ಎಲ್ಲವನ್ನು ವಿವರಿಸಿದರು...ತಮ್ಮ ತಳಮಳಕ್ಕೆಲ್ಲ ಉತ್ತರ ಸಿಕ್ಕಂತಾಗಿ ನಿಟ್ಟುಸಿರು ಬಿಟ್ಟರು ರಾಮಮುರ್ತಿ.ಹೋಗ್ಲಿ ಬಿಡಿ ಒಳ್ಳೆದೆ ಆಯ್ತು ನೋಡಿ ಭವಾನಿಯವ್ರ್ ಮುಖದಲ್ಲಿ ಆ ಸಂತೋಷ ನೋಡಿ ಬಂಗಲೆಯತ್ತ ಮುಖ ಮಾಡಿ ನಕ್ಕರು.ಎಲ್ಲಿ
ಒಳ್ಳೆದೆ ಆಯ್ತು ರಾಮಮುರ್ತಿ ಅವಳ ಸಂಕಟ ನೋಡ್ಲಾರ್ದೆ ಅವ್ಳುನ್ನ ಸಮಾಧಾನ ಮಾಡೊದುಕ್ಕೊಸ್ಕರ ಸುಳ್ಳುನ್ನ ಸೃಷ್ಟಿ ಮಾಡ್ದೆ ಈಗ ಅದುನ್ನೆ ನಿಜ ಅನ್ಕೊಂಡಿದಾಳೆ, ಹೇಳು ರಾಮಮುರ್ತಿ ಸುಹಾಸ್ ನಮ್ ಮಾತ್ ಕೇಳ್ತಾನ, ನನಿಗೇನೊ ಅವ್ನು India ಗೆ ವಾಪಸ್ ಬರ್ತಾನೆ ಅನ್ಸಲ್ಲ, ಯಾಕ್ ರಾಯ್ರೆ ಆ ಥರ ಯೋಚ್ನೆ ಮಾಡ್ತೀರ ಪ್ರಯತ್ನ ನಮ್ದು ಫಲ ಅವುನ್ದಲ್ವ ಕೈಅನ್ನು ಮೇಲೆತ್ತಿ ಆಕಾಶದೆಡೆ ತೋರಿಸುತ್ತ ಅಷ್ಟುಕ್ಕು ಚಿಕ್ಕಂದಿನಿಂದ ನಾನು ಆಡ್ಸಿ ಬೆಳ್ಸಿಲ್ವೆ ತೀರ ನಮ್ ಸುಹಾಸ್ ತಂದೆ ತಾಯಿನ ದ್ವೇಷ ಮಾಡೊಅಂತ ಹುಡ್ಗ ಅಲ್ಲ ಬಿಡಿ ಏನೊ ಹುಡ್ಗ್ ಬುದ್ಧಿ ಸ್ವಲ್ಪ ಹಠ ಮಾಡ್ತಿದಾನೆ ಅಷ್ಟೆ ತಿಳಿ ಹೇಳಿದ್ರೆ India ಗೆ ವಾಪಸ್ ಬಂದೆ ಬರ್ತಾನೆ ಅವ್ನಿಗಾದ್ರು ಬೇರೆ ಯಾರಿದಾರೆ ರಾಯ್ರೆ ನಿಮಿಗೆ ಅವ್ನು, ಅವ್ನಿಗೆ ನೀವೆ ಅಲ್ವೆ........ಅದು ಸರಿ ರಾಮಮುರ್ತಿ ಆದ್ರೆ ಅದುನ್ನ ಕಾರ್ಯರೂಪಕ್ಕೆ ತರೊದಾದ್ರು ಹೇಗೆ ಅಂತ...........ಕೈ ಮುಗಿಯುತ್ತ ಅದು ಅಲ್ದೆ ನಿನ್ನುನ್ನ ಒಂದು ಮಾತು ಕೇಳ್ದೆ ನಿನ್ ಹೆಸ್ರುನ್ನು ಭವಾನಿಯತ್ರ ಹೇಳ್ಬಿಟ್ಟೆ ದಯವಿಟ್ಟು ಕ್ಶಮಿಸ್ಬೇಕು............ಅಯ್ಯೋ ಅಯ್ಯೋ ಅದುಕ್ಕೆ ಕೈ ಮುಗಿಯೋದೆ ತುಂಬಾ ದೊಡ್ಡ ಮಾತು!!!! ನಮ್ಮ ಸ್ಪಟಿಕದ ಮುಂದಿನ ವಾರಸುದಾರ , ನಾನ್ ಎತ್ತಿ ಆಡ್ಸಿದ ಹುಡುಗ ಮತ್ತೆ ಸ್ಪಟಿಕಕ್ಕೆ ಬರ್ತಾನೆ, ಸ್ಪಟಿಕದಲ್ಲಿ ಮತ್ತೆ ಸಂತೋಷ ತುಂಬುತ್ತೆ ಅನ್ನೋದಾದ್ರೆ ಅದುಕ್ಕೆ ಒಂದು ಚಿಕ್ಕ ಸಹಾಯ ಮಾಡೊಕಾಗಲ್ವೆ ನನ್ನಿಂದ, ನಾನಿಲ್ಲಿ ಒಬ್ಬ manager ಆದ್ರೆ ಅದು ನನ್ನ ವೃತ್ತಿ ಆದರೆ ಅದುಕ್ಕಿಂತ ಹೆಚ್ಚಿಂದಲ್ವೆ ನಮ್ಮಿಬ್ರು ಮುವತ್ತ್ಯೆದು ವರ್ಷದ ಸ್ನೇಹ ಅದುಕ್ಕಾದ್ರು ಬೆಲೆ ಕೊಡೊದ್ ಬೇಡ್ವೆ, ಅಯ್ಯೋ ಅಯ್ಯೋ ಹೌದು ರಾಮಮುರ್ತಿ ಆ ನಂಬಿಕೆಯಿಂದ್ಲೆ ನನ್ ಬಾಯಿಂದ ಸುಳ್ ಬಂದ್ಬಿಡ್ತು ಅನ್ಸುತ್ತೆ ಎಲ್ಲ ನಿನ್ ಕೈಯಲ್ಲಿದೆ ರಾಮಮುರ್ತಿ ಅದೇನ್ ಮಾಡ್ತೀಯೊ ಗೊತ್ತಿಲ್ಲ ಇಷ್ಟು ವರ್ಷದ ನನ್ ಪ್ರಯತ್ನದಲ್ಲಿ ಸುಹಾಸ್ ಮನಸ್ನ ನನ್ ಕೈಯಲ್ಲಂತು ಬದ್ಲಾಯ್ಸ್ಲಿಕ್ಕಂತು ಆಗ್ಲಿಲ್ಲ ಆದ್ರೆ ನಿನ್ ಕೈಯಲ್ಲಿ ಅದಾಗುತ್ತೆ ಅನ್ಸುತ್ತೆ. ಆಗ್ಲಿ ರಾಯ್ರೆ ನಿರಾಳ್ ವಾಗಿರಿ ಎಲ್ಲ ಒಳ್ಳೆದಾಗುತ್ತೆ
ಅಬ್ಬ ಈಗ ಮನಸ್ಸಿಗೆ ಸಮಾಧಾನ ಆಯ್ತು ನೋಡು ಎಂದು ನಿಟ್ಟುಸಿರು ಬಿಟ್ಟು ಆಫೀಸ್ ನಡೆಗೆ ಇಬ್ಬರು ನಡೆದರು.

ರ‍ಾಯ್ರೆ ಇನ್ನೊಂದು ವಿಷಯ!!! ಮತ್ತೇನ್ ವಿಷಯ ರಾಮಮುರ್ತಿ ಆಗಲ್ಲ ಅಂತ ಮಾತ್ರ ಹೇಳ್ಬೇಡಯ್ಯ .......ರಾಯ್ರೆ ಆ ಚಿಂತೆ ತಲೆಯಿಂದ ತೆಗೆದ್ಬಿಡಿ ನಾನೀಗ ವಿಷಯ ಮಾತಡ್ಬೇಕು ಅಂತಿರೋದು ನನ್ ಮಗಳು ಸುಮನ್ ಮದುವೆ ವಿಷಯ****ಎಲ್ಲ ವಿಷಯವನ್ನು ಸಂಕ್ಷಿಪ್ತವಾಗೆ ವಿವರಿಸಿದರು......ಏನಯ್ಯ ರಾಮಮುರ್ತಿ ಆಗ್ಲೆ ಸುಮ ಮದುವೆ ವಯಸ್ಸಿಗೆ ಬಂದ್ಬಿಟ್ಟಿದಾಳ್ಯೆ, ಎಷ್ಟು ವರ್ಷ ಆಯ್ತಯ್ಯ ನಿನ್ ಇಬ್ರು ಮಕ್ಳನ್ನ ನೋಡಿ ಆಗ್ಲೆ ಐದಾರು ವರ್ಷ ಆಯ್ತಲ್ವೆ ನೋಡಿ ..ಹೌದು ರಾಯ್ರೆ ಆಗೆಲ್ಲ ಹೊರಗಡೆ ಬಂದಾಗ್ಲೆಲ್ಲ ನಮ್ ಮನೆಗು ಬರ್ತಿದ್ರಿ ಮಕ್ಳುನ್ನ ನೋಡ್ತಿದ್ರಿ...........ಆದ್ರೆ ಸುಹಾಸ್ ಆಸ್ಟ್ರೇಲಿಯಾಕೆ ಹೋದ್ಮೆಲೆ ನೀವು ಸ್ಪಟಿಕದಿಂದ ಹೊರಗಡೆ ಹೋಗದೆ ಅಪರೂಪ ಆಗೋಗಿದೆ ಇನ್ನೆಲ್ಲಿ ಅವ್ರುನ್ನ ನೀವು ನೋಡೋಕೆ ಸಾಧ್ಯಾ. ಅದು ಸರಿ ರಾಮಮುರ್ತಿ ಏನ್ ಮಾಡ್ಲಿ ಸಂಕಟ ಮಗ ಆಸ್ಟ್ರೇಲಿಯಾಕೆ ಹೋದ್ಮೆಲೆ ಯಾಕೊ ಯಾವುದ್ರಲ್ಲು ಆಸಕ್ತಿನೆ ಇಲ್ಲಯ್ಯ ಅದು ಬಿಡು ನಮ್ ದುರಾದೃಷ್ಠ. ನಾನೇನೊ ಬರ್ಲಿಲ್ಲ ನೀನಾದ್ರು ಕರ್ಕೊಂಡು ಬರ್ಬಾರ್ದೆ ....ಎಲ್ಲಿ ರಾಯ್ರೆ ಅವ್ರು ಅವ್ರ ಓದು ಕಾಲೇಜು ಅಂತ ಇರ್ತಿದ್ರು...........ಆಗ್ಲಿಲ್ಲ..........ಅವರ ಮಾತನ್ನು ಅರ್ಧಕ್ಕ್ಕೆ ತುಂಡರಿಸುತ್ತ ಸರಿ ಬಿಡು ರಾಮಮುರ್ತಿ ನಾನೆ ಬರ್ತೀನಿ ಸುಮನ್ನು ಕವನನ್ನು ನೋಡೋದಕ್ಕೆ........ಶಾರದಮ್ಮ್ಮನ್ನು ನೋಡಿ ತುಂಬಾ ದಿನ ಆಯ್ತು.........ಹೇಗಿದ್ದಾರಯ್ಯ ಸುಮ ಕವನ ಇಬ್ರು ಆಗ್ಲೆ ತೊಳೆದ ಮುತ್ತಂಗಿದ್ರು ನಡೆ ,ನುಡಿ, ರೂಪ ಯಾವುದ್ರಲ್ಲಯ್ಯ ಕಡಿಮೆ ಇದಾರೆ ಇನ್ನು ಹೆಣ್ಮಕ್ಳು ವಯಸ್ಸಿಗೆ ಬಂದ್ಮೇಲೆ ಕೇಳ್ಬೇಕೆ. ಅಂತು ಒಳ್ಳೆ ಕಡೆ ಸಂಭಂದ ಬಂದಿದೆ ಎಲ್ಲ ರೀತಿಲು ಹೊಂದಿಕೆಯಾದ್ರೆ ವಾಲಗ ಊದ್ಸಬಿಡು. ಅದು ಸರಿ ಅನ್ನಿ ಆದ್ರೆ ಎಲ್ಲದುಕ್ಕು ೠಣಾನುಭಂದ ಅಂತ ಒಂದಿರ್ಬೇಕಲ್ವೆ ರಾಯ್ರೆ ನಮ್ ಪ್ರಯತ್ನನ ನಾವ್ ಮಡೋದು.ಕವನ ಏನ್ ಮಾಡ್ತಿದಾಳೀಗ.........ಅವ್ಳು ಈ ವರ್ಷ ಎಮ್ ಕಾಮ್ ಮುಗ್ಸಿದಾಳೆ ಮುಂದೆ Auditor ಹತ್ರ practice ಮಾಡೋದು ಇಲ್ಲಾಂದ್ರೆ CA correspondence ಮಾಡೋದು ಅಂತ ಯೋಚ್ನೆ ಮಾಡ್ತಾಇದಾಳೆ ನೋಡೋದು ಎಲ್ಲ ಆ ದೇವ್ರಿಟ್ಟಂಗಾಗ್ಲಿ ಅವಳಿಷ್ಟ ಈ ವರ್ಷ ಸುಮನ್ ಮದುವೆ ಮುಗ್ಸಿ ಇನ್ನೊದೆರಡು ವರ್ಷಕ್ಕೆ ಕವನಂದು ಮದುವೆ ಮಾಡೋದು ಅನ್ಕೋಂಡಿದೀವಿ ಅಲ್ಲಿವರ್ಗು ಅವಳಿಷ್ಟದಂಗಿರ್ಲಿ.Auditor ಹತ್ರ practice ಅಂದ್ರೆ ನಮ್ Auditor ಹತ್ರಾನೆ ಕರ್ಕೊಂಡ್ ಬಾರಯ್ಯ ಅವಳ ಆಸೆನು ನೆರವೇರಿದಂಗಾಗುತ್ತೆ ಮಗಳು ನಿನ್ ಕಣ್ಮುಂದೆನೆ ಇದ್ದಂಗಾಗುತ್ತೆ...........ರಾಯರ ಸಲಹೆ ಸೂಕ್ತವಾದೆಂತೆನಿಸಿತು ಹೀಗೆ ಅವರ ಮಾತು ಆಫೀಸಿನ ಕೆಲಸದತ್ತ ಹೊರಳಿತು.

ಶಾರದಮ್ಮ ಬೇಗ ಬೇಗ ತಯಾರಗುತ್ತಿದ್ದರು ಅವರ ಸಡಗರ ಕಂಡು ಸುಮ ಏನಮ್ಮ ನನ್ನನ್ನು ಬೇಗ ಮದುವೆ ಮಾಡಿ ಸಾಗಹಾಕೊಹಂಗಿದೆ ನಿಮ್ ತಯಾರಿ....ಅವಳ ತುಂಟತನ ಕಂಡು ಶಾರದಮ್ಮ ತಮಾಷೆಗೆ ಸರಿ ಬಿಡು ಹಾಗಾದ್ರೆ ಅಪ್ಪಂಗೆ ಹೇಳ್ಬಿಡ್ತೀನಿ ಸುಮಂಗೆ ಈ ಮದುವೆ ಬೇಡಂತೆ ಅಂತ..........ಅಯ್ಯಯ್ಯೋ ತಮಾಷೆಗೆ ಹಂಗಂದೆ ಅಮ ಆಮೇಲೆ ಅಪ್ಪ ಸುಮ್ನೆ ಬೇಜಾರ್ ಮಾಡ್ಕೊಂಬಿಡ್ತಾರೆ..ಆಹ್ಹ್ಹ್ ಹ್ಹ್ ಹ್ಹ್ ಶಾರದಮ್ಮ ಕವನ ಇಬ್ಬರು ಜೋರಾಗಿ ನಗುತ್ತ ಬೇಜಾರು ಅಪ್ಪಂಗಾಗುತ್ತೊ ಇಲ್ಲ ನಿನಿಗಾಗುತ್ತೊ ಅಕ್ಕ ನಗುತ್ತ ಕೆನ್ನೆ ಚಿವುಟಿದಳು ಕವನ..ಹೋ......... ಎನು ಎಲ್ಲ ನಕ್ತಿದೀರ ಏನ್ ವಿಶೇಷ...........ಕವನ ಅಪ್ಪನನ್ನು ಕಂಡು ಅವರತ್ತ ಹಾರಿ ಬಂದು ತನ್ನ ಎಡ ಕಣ್ಣನ್ನು ಮಿಟುಕಿಸಿ ಅವರ ತೋಳನ್ನು ತನ್ನ ಕೈಯಲ್ಲಿ ಬಳಸಿ ಅಪ್ಪ ಅಕ್ಕಂಗೆ ಈ ಮದುವೆ ಬೇಡವಂತೆ ಜೋರಾಗಿ ನಕ್ಕಳು.............ಅರಿತವರಂತೆ ಸರಿ ಬಿಡು ಜೋಯಿಸರನ್ನು ವಿಚಾರಿಸುವುದು ಬೇಡ ಹಾಗಾದ್ರೆ ಎಂದರು.....ಅಯ್ಯೋ ಅಪ್ಪ ಹಾಗೇನು ಇಲ್ಲ ಇವ್ರೆಲ್ಲ ಸುಮ್ನೆ ತಮಾಷೆ ಮಾಡ್ತಾಇದಾರೆ ಪಾಪ ಚಂದ್ರಕಾಂತ್ ಮನೆವ್ರಿಗೆಲ್ಲ ಯಾಕ್ ಬೇಜಾರು..........ಹೊ ಹೋ ಹೊ ಆಗ್ಲೆ ಪಾಪ ಬೇರೆ ಜೋರಾಗಿ ಎಲ್ಲರು ನಕ್ಕರು. ರಾಮಮುರ್ತಿ ಬೇಗ ಬೇಗ ತಯಾರಾಗಿ ಬ್ಮ್ದು ಸರಿ ಸರಿ ಶಾರು ನಡಿ ಬೇಗ ಹೋಗ್ಬಂದ್ಬಿಡನ ಮತ್ತೆ ಮಳೆಲ್ಲಿ ಸಿಕ್ಕಾಕ್ಕೊಳ್ಳೋದು ಬೇಡ.ಸರಿ ನಡೀರೀ ಅಂದ್ರೆ.......ಸುಮಿ ಕವನ ಹುಷಾರು ಬೇಗ ಬಂದ್ಬಿಡ್ತೀವಿ...ಎಂದು ಹೊರ ನಡೆದರು. ದಾರಿಯುದ್ದಕು ರಾಮಮುರ್ತಿ ಸ್ಪಟಿಕದಲ್ಲಿ ನಡೆದ ಘಟನೆಗಳನ್ನು ಶಾರದಾಗೆ ವಿವರಿಸಿದರು......ಹೌದ್ರಿ ಪಾಪ ರಾಯರು ತುಂಬಾ ಒಳ್ಳೆ ಜನ ನಿಮ್ ಪ್ರಯತ್ನ ನೀವ್ ಮಾಡಿ ಒಟ್ಟ್ನಲ್ಲೆ ಅವ್ರು ನಿಮ್ ಮೇಲಿಟ್ಟಿರೊ ನಂಬಿಕೆ ಸುಳ್ಳಾಗ್ಲಿಲ್ಲ ಅಂದ್ರೆ ಸಾಕು, ಏಷ್ಟಾದ್ರು ಹೆತ್ತ ಕರುಳಲ್ವೆ ಯಾವತ್ತಾದ್ರು ಸೋಲಲೇಬೇಕು.......ಅದು ಸರಿ ಶಾರು ಆದ್ರೆ ನಮ್ ಸುಮನ್ ಮದುವೆ ಪ್ರಯತ್ನ ಮಾಡ್ತಾ ಇದೀವಲ ಇದ್ರು ಮಧ್ಯೆ ನಾನು ಆಸ್ತ್ರೇಲಿಯಾಗೆ ಹೋಗ್ಬರೋದು ಅಂದ್ರೆ............ಅಲ್ಲಾರೀ ನೀವೇನು ತಿಂಗ್ಳಾನ್ ಗಟ್ಲೆ ಹೋಗ್ಬೆಕಾಗಿದೀಯೆ ಹೆಚ್ಚು ಅಂದ್ರೆ ಒಂದ್ವಾರ ಆಗ್ಬೋದಲ್ವೆ ಅದು ಸರಿ ಅನ್ನು ಆಮೇಲೆ ಶಾರು ನಮ್ ಕವನ ಮುಂದೆ ಓದೋದ್ರು ಬಗ್ಗೆನು ರಾಯ್ರು ಜೊತೆ ಮಾತಾಡ್ದೆ ಅದುಕ್ಕೆ ಅವ್ರು ನಮ್ ಎಸ್ಟೇಟ್ ಆಡಿಟರ್ ಹತ್ರಾನೆ ಪ್ರಾಕ್ಟೀಸ್ ಮಾಡೋಕೇಳಿದಾರೆ. ಅದು ಓಳ್ಳೆದೆ ಆಯ್ತು ಬಿಡಿ ನಮ್ ಸುಮಿನ್ ಮದುವೆ ಆದ್ಮೇಲೆ ಅವ್ಳಿಗು ಬೇಜಾರು ಅವಳಿಗ್ ಒಪ್ಗೆ ಆದ್ರೆ ನೀವ್ ಹೇಳ್ದಾಗೆ ಒಂದೆರಡು ವರ್ಷ ಮಾಡ್ಲಿ ಬಿಡಿ...ಹಾಗೆ ಮಾತಾಡುತ್ತ ಜೋಯಿಸರ ಮನೆ ತಲುಪಿದರು.ಜೋಯಿಸರು ಯಾವುದೊ ಪುಸ್ತಕದ ಮೊರೆ ಹೋಗೆದ್ದವರು ಇವರನ್ನು ಕಂಡು ಒಹೋ ರಾಮಮುರ್ತಿಯವರು ಬನ್ನಿ ಬನ್ನಿ ಏನು ಇಷ್ಟು ದೊರ ಬಂದ್ಬಿಟ್ಟಿದೀರಿ ಏನ್ ವಿಶೇಷ............ಸಧ್ಯಕ್ಕಂತು ಏನು ಇಲ್ಲ ಆದ್ರೆ ವಿಶೇಷ ಇನ್ಮೇಲೆ ಶುರು ಆಗ್ಬೇಕು ಜೋಯಿಸರೆ ಎಂದು ಇಬ್ಬರು ಒಳ ಬಂದು ಕುರ್ಚಿಯಲ್ಲಿ ಕುಳಿತರು.ಪುಸ್ತಕವನ್ನು ಪಕ್ಕಕ್ಕಿಡುತ್ತ ಕನ್ನಡಕವನ್ನು ಸರಿಮಾಡಿಕೊಂಡು ಹೇಳಿ ಏನ್ ಬಂದಿದ್ದು ಎಂದು ಇಬ್ಬರನ್ನು ನೋಡಿ ನಕ್ಕರು.ಚಂದ್ರಕಾಂತನ ಮತ್ತು ಮಗಳ ಜಾತಕ, ಫೋಟೊವನ್ನು ಅವರ ಮುಂದಿಡಿದು ಜೋಯಿಸರೆ ಇದು ನಮ್ ಸುಮಂಗೆ ಬಂದಿರೊ ವರ ಜಾತಕ ಎಲ್ಲ ಹೊಂದುತ್ಯೆ ಹೇಗೆ ಏನು ಅಂತ ನೋಡಿ ಹೇಳ್ಬೇಕು.ಜೋಯಿಸರು ಅದನ್ನು ಕೈಗೆ ತೆಗೆದು ಕೊಂಡು ಹುಡುಗ ಲಕ್ಷಣವಾಗಿದ್ದಾನೆ ಫೋಟೊವನ್ನು ಪಕ್ಕಕ್ಕಿಟ್ಟು ಎರಡು ಜಾತಕವನ್ನು ಕೂಲಂಕುಷವಾಗಿ ಪರಿಶೀಲಿಸಲಾರಂಭಿಸಿದರು ಅವರ ಉತ್ತರಕ್ಕಾಗಿ ಜಾತಕಪಕ್ಷಿಗಳಂತೆ ಇಬ್ಬರು ಕಾಯುತ್ತ ಕುಳಿತರು..........ರಾಮಮುರ್ತಿ ಯೋಚ್ನೆ ಮಾಡ್ಬೇಕಾದ್ದೆ ಇಲ್ಲ ಕಣಯ್ಯ ಇಬ್ಬರ ಜಾತಕ ಹೇಳ್ ಮಾಡುಸ್ದ್ಂಗಿದೆ ಸಾವಿರಕ್ಕೊಂದು. ಎಲ್ಲಾ ರೀತಿಯಲ್ಲು ಹೊಂದಾಣಿಕೆಯಾಗುತ್ತೆ ಕಣ್ಮುಚ್ಕೊಂಡು ಮುಂದುವರಿಬಹುದು.ನಿಮ್ ಮಗಳು ಸುಖವಾಗಿರ್ತಾಳೆ ಅದರಲ್ಲಿ ಎರಡು ಮಾತಿಲ್ಲ ನಗುತ್ತ ಹೇಳಿದರು. ಇಬ್ಬರ ಮುಖದಲ್ಲು ಸಂತೋಷ ಉಕ್ಕಿ ಬಂದಿತು..........ಜೋಯಿಸರು ಮುಂದುವರೆಸುತ್ತ ಇನ್ ಮೂರು ತಿಂಗ್ಳಲ್ಲೆಲ್ಲ ಮಗಳ ಮದುವೆ ಮಾಡಿರ್ತೀರ....ಇನ್ ಮೂರು ತಿಂಗ್ಳಲ್ಲೆ ? ಇನ್ನು ಹುಡ್ಗನ್ನೆ ನೋಡಿಲ್ವಲ್ಲ ಜೋಯಿಸರೆ............ಇಬ್ಬರ ಜಾತಕದ ಪ್ರಕಾರ ಇಬ್ಬರಿಗು ಕಂಕಣ ಬಲ ಕೂಡಿ ಬಂದಿದೆ.....ಎಲ್ಲ ಹೂ ಎತ್ತಿದ ಹಾಗೆ ಸುಸೂತ್ರವಾಗಿ ನಡೆಯುತ್ತೆ ನೊಡ್ತಾ ಇರಯ್ಯ......ಏನೊ ಎಲ್ಲ ಆ ದೇವರ ದಯೆ, ನಿಮ್ಮಂತವರ ಆಶೀರ್ವಾದ...ಮೊಂದೆ ನಿಂತು ಎಲ್ಲ ಪೌರೋಹಿತ್ಯನು ನಡುಸ್ಕೊಡ್ಬೇಕು ಎಂದು ಅವರ ಕಾಣಿಕೆಯನ್ನು ಕೊಟ್ಟು ನಮಸ್ಕರಿಸಿದರು..ಆಗ್ಲಯ್ಯ ಅದುಕ್ಕಿಂತ ಪುಣ್ಯದ ಕೆಲ್ಸ ಇದೀಯೆ ಎಲ್ಲ ಒಳ್ಳೆದಾಗ್ಲಿ ಹೋಗ್ಬನ್ನಿ ಎಂದು ಬೀಳ್ಕೊಟ್ಟರು..........

"ಶಾರು ಅಂತು ನಮ್ ಸುಮ ಪುಣ್ಯ ಮಾಡಿದಾಳೆ ಕಣೆ "... ಹೌದು ಅಂದ್ರೆ ದೇವರ ದಯೆಯಿಂದ ಎಲ್ಲ ಸುಸೂತ್ರವಾಗೆ ನಡೆದ್ರೆ ಸಾಕು.ನಡಿ ನಡಿ ಮಕ್ಳಿಗೆ ಏನಾದ್ರು sweet ತಗೊಂಡು ಹೋಗೋಣ.ಎಂದು ಅಯ್ಯಂಗಾರ್ ಬೇಕರಿಗೆ ನಡೆದರು.....ಅರ್ಧ ಕೇಜಿ ಮೈಸೂರು ಪಾಕ್, ಚೌ ಚೌ ಪ್ಯಾಕ್ ಮಾಡಪ್ಪ ಎಂದು ಕಟ್ಟಿಸಿಕೊಂಡು ಮನೆಹತ್ತ ಹೆಜ್ಜೆ ಇಟ್ಟರು.ಗೇಟು ತೆರೆದು ಒಳಬಂದರು.ಇವರು ಬಂದದ್ದನ್ನು ನೋಡಿ ಮಾತಿನಲ್ಲಿ ತಲ್ಲೀನರಾಗಿದ್ದ ರಾಧ, ಸುಮ ಕವನ ಎಚ್ಚೆತ್ತರು.........ರಾಧ ಹೊರಡಲನುವಾದಳು ಸರಿ ಸುಮಿ ನಾ ಬರ್ತೀನಿ...........ಇರಮ್ಮ ರಾಧ sweet ತಿನ್ಕೋಂಡು ಹೋಗ್ವಂತೆ ..............ಹೋಗು ಸುಮಿ ಎಲ್ಲರಿಗು ತಟ್ಟೆಲಿ ಹಾಕ್ಕೊಂಬಾ........ಎಂದು ಕವರನ್ನು ಮಗಳ ಕೈಗಿಟ್ಟರು ಶಾರದಮ್ಮ....ನಾನೆ ಹಾಕ್ಕೊಂದು ಬರ್ತೀನಿ ಕೊಡಮ್ಮ ಎಂದು ಕವನನೆ ಕವರನ್ನು ತೆಗೆದುಕೊಂಡು ಒಳನಡೆದಳು...ವಿಷಯ ತಿಳಿದಿದ್ದ ರಾಧ ಏನ್ ವಿಷೇಶ ಆಂಟಿ......ಎಂದಳು........ಏನು ಇಲ್ಲಮ್ಮ ಹೊರಗಡೆ ಹೋಗಿದ್ವಲ್ಲ ಬರುವಾಗ ಹಾಗೆ ತಂದ್ವಿ ಅಷ್ಟೆ.........ಅವರ ಜೊತೆಯೆ ಮಾತಿಗೆ ಕುಳಿತರು.....ರಾಮಮೂರ್ತಿ ಬಟ್ಟೆ ಬದಲಾಯಿಸಲು ಒಳನಡೆದರು.ಕಾರ ಸ್ವೀಟ್ ತಟ್ಟೆಗೆ ಹಾಕಿಕೊಂಡು ಬಂದು ರಾಧಾಳಿಗೆ ಕೊಟ್ಟಳು...
ಅಮ್ಮ.. ಯಾವಾಗ್ ಬರ್ತಾರೆ ರಾಧ? ಆಗ್ಲೆ ಒಂದು ತಿಂಗಳ್ ಮೇಲಾಕ್ತಾ ಬಂತಲ್ವ (ಅವ್ರ ದೊಡ್ಡಮಗಳ ಬಾಣಂತನಕ್ಕೆ ಊರಿಗೋಗಿದ್ದು ನೆನೆದು ) ಊರಿಗೋಗಿ......ಹೌದಾಂಟಿ ಪಾಪುಗೆ ಮೂರೊ ತಿಂಗ್ಳು ತುಂಬೇಕಲ್ವ ಆಮೇಲೆ ಬರ್ತಾರೆ.....ರಾಧಾ ..ಅತ್ತಿಗೆ ಮನೆಯೊಳಗಿಂದಲೆ ಕೂಗಿದ್ದನ್ನು ಕೇಳೆ ಸರಿ ಆಂಟಿ ನಾ ಬರ್ತೀನಿ ಎಂದು ನಡೆದಳು...ಶಾರದಮ್ಮ ಒಳಬಂದರು....ಕವನ ತಂದೆ ತಾಯಿಯರಿಬ್ಬರಿಗು ಕಾಫಿ ತಂದು ಕೊಟ್ಟಳು...ಬಾಮ್ಮ ಕೂತ್ಕೊ ಸುಮನ್ನು ಕರಿ....ಸುಮ ಕಾದಿದ್ದವಳಂತೆ ಒಳಬಂದಳು ....ರಾಮಮೂರ್ತಿ ಕನ್ನಡಕವನ್ನು ತಗೆದಿರಿಸುತ್ತ....ಸುಮಿ ಬಾಮ್ಮ ವಿಷಯ ನಿನಿಗೆ ಸಂಬಂಧ ಪಟ್ಟಿದ್ದೆ.....ಶಾರದಮ್ಮ ತಮ್ಮ ಪಕ್ಕ ಕುಳಿತ ಮಗಳ ತಲೆಯ ಮೇಲೆ ಪ್ರೀತಿಯಿಂದ ಕೈಆಡಿಸಿದರು...ಜೋಯಿಸರ ಹತ್ತಿರ ಜಾತಕ ತೋರ್ಸಿದ್ವಿ ಎಲ್ಲಾ ರೀತೀಲು ಹೊಂದಾಣಿಕೆಯಾಗಿದೆ... ಹುಡ್ಗಾನು ಚೆನಾಗಿದಾನೆ.. ನಿನ್ನ ಒಪ್ಗೆ ತಿಳ್ಸಿದ್ರೆ ಮುಂದುವರಿಬಹುದು...ಏನು ಎಂಬಂತೆ ಅವಳ ಮುಖವನ್ನೆ ನೋಡುತ್ತ ಉತ್ತರಕ್ಕಾಗಿ ಕಾದರು...
ನಾಚಿದವಳಂತೆ ತೆಲೆತಗ್ಗಿಸಿದಳು...ನಿಮ್ಮೆಲ್ಲರ ಒಪ್ಪಿಗೆನೆ ನನ್ನ ಒಪ್ಪಿಗೆ ಎಂದು ತೆಲೆಆಡಿಸಿದಳು.

(ಮುಂದುವರೆಯುವುದು)

Rating
No votes yet