ಉದರ ನಿಮಿತ್ತಂ

ಉದರ ನಿಮಿತ್ತಂ

From Online Edits" mce_src="

From Online Edits

" alt="" border="" hspace="" vspace="" width="" height="" align="" />

 

ಉದರ ನಿಮಿತ್ತಂ

ಮೊನ್ನೆ ಒಬ್ಬಾತ ಮನೆಗೆ 
ಬಂದಿದ್ದ. ಒಂದು ಚೀಟಿಯನ್ನು ಕೊಟ್ಟು ಸರಸರನೆ ಪಕ್ಕದ ಮನೆಯೆಡಗೆನಡೆದ. ನೋಡಿದೆ.ವಿಷಯ
ಅರ್ಥವಾಯಿತು. ಆದರೆ ಅರ್ಥವಾಗದ್ದೆಂದರೆ ಇಂತವರಿಗೆ ಸಹಾಯಮಾಡಬೇಕೋ ಬೇಡವೋ ಎಂಬುದು.

ಬಸ್ಸ್ ಹೊರಡುವಸಮಯದಲ್ಲಿ ಇಂತವರು ಬರುತ್ತಾರೆ.ಚೀಟಿಯನ್ನು ಕೊಡುತ್ತ
ಹೋಗುತ್ತಾರೆ.ನಂತರ ಹಿಂದಕ್ಕೆ ಪಡೆಯುತ್ತಾರೆ.ಅವರು ಸಾಮಾನ್ಯುವಾಗಿ ಎಷ್ಠು ಕೊಟ್ಟರೂ
ತೆಗೆದುಕೊಳ್ಳುತ್ತಾರೆ.

ಅವನ ಪತ್ರವನ್ನು ಓದಿನೋಡಿ.

 ಆದರೆ ಮನೆ
ಬಾಗಿಲಿಗೆ  ಬರುವವರು ಇಷ್ಠೇಕೊಡಿ ಎಂದು
ವತ್ತಾಯಿಸುವವರೂ ಇರುತ್ತಾರೆ.ಅದರಲ್ಲೂ ಸನ್ಯಾಸಿವೇಷದ. ಕಾವಿವೇಷದವರಿಂದ ಬಿಡಿಸಿಕೊಳ್ಳುವುದು ಬಲು
ಕಷ್ಠ. ವಿಧವಾಶೃಮ, ಬಾಲಾಶೃಮ. ಮಕ್ಕಳ ಓದು, ಮಗಳ ಮದುವೆ.ಮಠದ ದಾಸೋಹ, ಕ್ಯಾನ್ಸರ್ ಚಿಕಿತ್ಸೆ
ಹೀಗೆ ಹಲವು ಹನ್ನೊಂದು. ಕೆಲವರು ರಸೀದಿಯನ್ನೂ ಕೊಡುತ್ತಾರೆ. ಈ ಹಿಂದೆ ಸತ್ಯನಾರಾಯಣ ಕಥೆ
ಮಾಡಬೇಕಾಗಿದೆ.ತಿರುಪತಿಗೆ ಹೋಗಬೇಕಾಗಿದೆ ಮುಂತಾಗಿ ಬರುತ್ತಿದ್ದರು. ಈಗ ಅಂತವರಿಲ್ಲ.

ಇಲ್ಲಿ ನನ್ನ ದ್ವಂದ್ವ ಎಂದರೆ ಕೊಡಬೇಕೋ? ಬೇಡವೋ? ಅದು ಒಳ್ಳೆಯ ಕಾರ್ಯಕ್ಕೇ
 ಹೋಗುತ್ತಿದ್ದು ನಿನ್ನಿಂದ ಒಂಚೂರು ಅವರಿಗೆ
ಸಹಾಯವಾಗುತ್ತಿದ್ದಲ್ಲಿ ನಾನು ಕೊಡದೇ ತಪ್ಪುಮಾಡಬಾರದಲ್ಲ
! ಕೆಟ್ಟದಕ್ಕೆ
ಹೋಗುತ್ತಿದ್ದರೆ?

ಇಷ್ಟಕ್ಕೂ ನೋನುಕೊಡುವುದೆಷ್ಟು? ಮೂರುಕಾಸು!! ಅದಕ್ಕೆ ಇಷ್ಟೆಲ್ಲಾ
ಯೋಚಿಸಬೇಕೇ-ಸಮಾಧಾನದ ಸ್ವಗತ.

        ಆತಕೊಟ್ಟ
ಚೀಟಿಯನ್ನು ಕ್ಯಾಮರಾದಲ್ಲಿ ಸೆರೆ ಹಿಡಿದೆ. ಅವನ ಫೋಟೋವನ್ನೂ ಸೆರೆಹಿಡಿಯಲು ಕ್ಯಾಮರಾ ಸಜ್ಜು
ಗೊಳಿಸಿದೆ. ಆದರೆ ನಾನು ಕೈ ತೊಳೆದು ಕೊಳ್ಳುವ ಮೂರುಕಾಸಿಗೆ ಅದು ಸರಿಅಲ್ಲ ಎನ್ನಿಸಿತು. ಇವನ
ಹೊಟ್ಟೆಯ ಹಿಂದೆ ಅದೆಷ್ಟು ಅರೆಹೊಟ್ಟೆ ಇದೆಯೋ ಅನ್ನಿಸಿತು. ಅವನ ನಮಸ್ಕಾರಕ್ಕೆ ಪ್ರತಿನಮಸ್ಕಾರ
ಕೊಟ್ಟು ಬೀಲ್ಕೊಟ್ಟೆ.

Rating
No votes yet

Comments