ಜೀವನ ಅಂದರೆ...

ಜೀವನ ಅಂದರೆ...

 

ನಮ್ಮ ನಿತ್ಯ ಜೀವನದ ಅವಶ್ಯಕತೆಗಳನ್ನ ಪೂರೈಸುವುದಕ್ಕೆ, ಸಾಲಮಾಡಿ ಕಟ್ಟಿದ ಮನೆಯಿಂದ / ಬಾಡಿಗೆ ಮನೆಯಿಂದ, ನೀಟಾದ ಬಟ್ಟೆ ಧರಿಸಿ, ಸಾಲಮಾಡಿ ಕೊಂಡ ಕಾರಲ್ಲಿ, ಬೆಲೆಯೇರಿಕೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸುತ್ತಾ ಕಾರಿಗೆ ಇಂಧನ ತುಂಬಿಸಿ, ನಿತ್ಯದ traffic ಗದ್ದಲದೊಳಗೆ ಕಷ್ಟಪಟ್ಟು ಕಾರ್ drive ಮಾಡಿಕೊಂಡು ನಮಗಿಷ್ಟವಿಲ್ಲದ ಕೆಲಸ ಮಾಡಲು ಕಚೇರಿಗೆ ಹೋಗುವುದು, ಈ ಕೆಲಸ ನಮಗ ಎಷ್ಟೊಂದು ಅನಿವಾರ್ಯ ಎಂದರೆ, ಇದರಿಂದಲೇ ನಮ್ಮ ನಿತ್ಯ ಅವಶ್ಯಕತೆಗಳಾದ ಮನೆ ಸಾಲ ಕಟ್ಟುವುದು, ಬಟ್ಟೆ ಕೊಂಡುಕೊಳ್ಳೋದು, ಆಹಾರ ಪೂರೈಕೆ, ವಾಹನದ ಇಂಧನ ಪೂರೈಕೆ, ಇವುಗಳ ಪೂರೈಕೆ ಈ ಇಷ್ಟವಿಲ್ಲ ಕೆಲಸದಿಂದಲೇ ಆಗಬೇಕು.

ನಾವು ಯಾವ ಮನೆಯಲ್ಲಿರುತ್ತೇವೆಯೋ ಆ ಮನೆಯನ್ನ ದಿನಪೂರ್ತಿ ಖಾಲಿಬಿಟ್ಟು, ಕಛೇರಿಯಲ್ಲಿ ದಿನದ ಹೆಚ್ಚು ಹೊತ್ತು ಕಳೆಯುತ್ತೇವೆ.. ಏಕೆಂದರೆ ನಾವು ಆ ಮನೆಯಲ್ಲಿ ವಾಸಿಸಬೇಕು :-)

ಎಲ್ಲರಿಗೂ ಅವರ ಕೆಲಸ ಇಷ್ಟವಿಲ್ಲ ಅಂದಲ್ಲ.. ಇದು ಕೇವಲ ನನ್ನ ಅನಿಸಿಕೆ..

 

Rating
No votes yet

Comments