ನಾಚಿಕೆ

ನಾಚಿಕೆ

೪ ತಿಂಗಳ ಹಿಂದೆ ನನ್ನ ಸ್ನೇಹಿತ ಸಂಗು(ಸಂಗಮೇಶ್) ಅವನ ಜೊತೆಗೂಡಿ ಅವರ ಸಂಬಂಧಿಕರ ಮನೆಗೆ ಹೋಗಿದ್ವಿ.
ನನ್ನನ್ನು ಹಾಲ್'ನಲ್ಲಿದ್ದ ಸೋಫಾದ ಮೇಲೆ ಕುಳ್ಳಿರಿಸಿ ಒಳಗಡೆ ಹೋದ.
ಅವರು ಬಾಗಲಕೋಟೆ ಕಡೆಯವರು. ತುಂಬಾ ಆತ್ಮೀಯವಾಗಿ ಮಾತನಾಡಿಸಿದರು.
ಸ್ವಲ್ಪ ಸಮಯದ ಬಳಿಕ ಒಳಗಡೆಯಿಂದ ಅವರ ಮನೆಯವರು ದೊಡ್ಡ ಗ್ಲಾಸಿನಲ್ಲಿ ಏನೋ ಹಿಡಿದು ತಂದು ನನಗೆ ಕೊಡುವುದಕ್ಕೆ ಮುಂದಾದರು.
ನಾನು ಮೊದೆಲೇ ನಾಚಿಕೆ ಸ್ವಭಾವದವನು.
ಬೇಡ ಬೇಡ ಎಂದು ನಾಚಿಕೆಯಿಂದಲೇ ಸ್ವಲ್ಪ ದೂರ ಸರಿಯುತ್ತ ಕೈಯನ್ನು ಅಡ್ಡ ಹಿಡಿದೆ.
ಅವರು ಸ್ವಲ್ಪ ಆಲೋಚಿಸುತ್ತ ನಿಂತು, ನೀವು ಗ್ಲಾಸಿನಲ್ಲಿ ಏನಿದೆ ಎಂದುಕೊಂಡಿರಿ ಅಂದ್ರು...
ನಾನು ಗ್ಲಾಸಿನಲ್ಲಿ ಏನಿದೆ ಎಂದು ಇಣಿಕಿ ನೋಡಿದೆ.
ಅದ್ರಲ್ಲಿ ಇದ್ದದ್ದು ನೀರು.
ನಾಚಿಕೆಯಿಂದ ತಲೆ ತಗ್ಗಿಸಿದೆ.
ಮನೆಗೆ ಬಂದವರಿಗೆ ಮೊದಲು ಕುಡಿಯಲು ನೀರು ಕೊಡುವುದು ಸಂಪ್ರದಾಯ.
ಏನ್ ಮಾಡೋದು, ನನಗೆ ಗೊತ್ತಿರ್ಲಿಲ್ಲ.
ಅಂತು ಅವತ್ತು, ನಾನು ಅವರ ಮನೆಯಲ್ಲಿ ಊಟ ಮಾಡುವವರೆಗೂ ಬಿಡಲಿಲ್ಲ.

ಇನ್ನೊಂದು ನನ್ನ ಚಿಕ್ಕ ಉಪದೇಶ:
ಮೊನ್ನೆ ನನ್ನ ಇನ್ನೊಬ್ಬ ಸ್ನೇಹಿತ ರಘು ಹಾಗು ಅವರ ತಮ್ಮ ಮಹೇಶ ಅವರ ಮನೆಗೆ ಊಟಕ್ಕೆ ಬಲವಂತವಾಗಿ ಕರೆದರು.
ನಾನು ಆಯ್ತು ಅಂದೇ.
ಹಾಗೆ ಅವರಿಗೆ ಒಂದು ಆದೇಶವನ್ನಿತ್ತೆ.
"ಲೋ, ನಾನು ಸ್ವಲ್ಪ ನಾಚಿಕೆ ಸ್ವಭಾವದವನು.
ನಾನು ನಿಮ್ಮ ಮನೆಯವರು ಊಟ ಬಡಿಸುತ್ತಿರುವಾಗ "ಸಾಕು ಸಾಕು" ಅಂತ ಇರ್ತೀನಿ.
ನೀವು "ಹಾಕಿಸ್ಕೊಳೋ ಹಾಕಿಸ್ಕೊಳೋ" ಅಂತ ಬಲವಂತ ಮಾಡಿ ಊಟ ಬಡಿಸಬೇಕು ಓಕೆನಾ ... ?" ಅಂದೇ.

ನೀವು ಕೂಡ ಅಸ್ಟೆ, ನಾನು ನಿಮ್ಮ ಮನೆಗೆ ಊಟಕ್ಕೆ ಬಂದರೆ "ಹಾಕಿಸ್ಕೊಳೋ, ಹಾಕಿಸ್ಕೊಳೋ" ಅಂತ ಬಲವಂತ ಮಾಡಿ ಬಡಿಸಬೇಕು.. ಓಕೆ ನಾ ? :P ಹ್ಹಾ ಹ್ಹಾ ಹ್ಹಾ....

Rating
No votes yet

Comments