ಏಕರೂಪ ಭಾಷೆ ಮತ್ತು ಕನ್ನಡ ಏಕೀಕರಣ

ಏಕರೂಪ ಭಾಷೆ ಮತ್ತು ಕನ್ನಡ ಏಕೀಕರಣ

೧೯೦೭ ರ ಜೂನ್ ನಲ್ಲಿ ಕರ್ನಾಟಕ ವಿದ್ಯಾವರ್ಧಕ ಸಂಘವು ಅಖಿಲ ಕರ್ನಾಟಕ ಗ್ರಂಥಕರ್ತರ ಸಮ್ಮೇಳನವನ್ನು ಏರ್ಪಡಿಸಿ ಎಲ್ಲ ವಿದ್ವಾಂಸರಲ್ಲಿ ಪರಸ್ಪರ ಸಂಪರ್ಕ ಉಂಟಾಗುವಂತೆ ಮಾಡಿತು. 'ಕರ್ನಾಟಕ ಗ್ರಂಥಗಳಲ್ಲಿ ಉಪಯೋಗಿಸುವ ಭಾಷೆಗಳಲ್ಲಿ ಏಕರೂಪತೆಯನ್ನುಂಟುಮಾಡುವದು ಸಾಧ್ಯವಾದುದರಿಂದ ಕೂಡಿದ ಮಟ್ಟಿಗೆ ಆ ಪ್ರಕಾರ ಮಾಡುವದು ಉಚಿತವಾಗಿದೆ. ' ಎಂದು ನಿರ್ಣಯಿಸಿತು .... ಮುಂದಿನ ಸಮ್ಮೇಳನವನ್ನು ಬೆಂಗಳೂರಿನಲ್ಲಿ ಕೂಡಿಸಬೇಕೆಂದೂ ನಿಶ್ಚಯಿಸಲಾಯಿತು. ಇದೇ ಕನ್ನಡ ಸಾಹಿತ್ಯ ಪರಿಷತ್ತಿನ ಬೀಜಾಂಕುರವಾಯಿತು.

....೧೯೧೭ರ ಸಭೆಯಲ್ಲಿ ಈ ನಿರ್ಣಯವನ್ನು ಸರ್ವಾನುಮತದಿಂದ ಪಾಸು ಮಾಡಲಾಯಿತು . "ಬ್ರಿಟಿಷ್ ಅಧಿಕಾರಕ್ಕೆ ಒಳಗಾದ ಎಲ್ಲ ಕನ್ನಡ ಊರು , ತಾಲೂಕು , ಜಿಲ್ಲೆಗಳನ್ನು ಒಟ್ಟುಗೂಡಿಸಿ ಒಂದು ರಾಜಕೀಯ ವಿಭಾಗವನ್ನು ಮಾಡಿ ಅದಕ್ಕೆ ಕರ್ನಾಟಕ ಪ್ರಾಂತವೆಂದು ಕರೆಯುವ ಬಗ್ಗೆ ಸರ್ಕಾರಕ್ಕೆ ಬಿನ್ನಹ ಮಾಡಬೇಕು . ಉದಾಹರಣಾರ್ಥವಾಗಿ ಸೊಲ್ಲಾಪುರ ಜಿಲ್ಲೆಯ ಕೆಲವು ಭಾಗ ಕನ್ನಡ ಇರುತ್ತದೆ . ಮದ್ರಾಸ ಇಲಾಖೆಯಲ್ಲಿ ಬಳ್ಳಾರಿ , ದಕ್ಷಿಣ ಕನ್ನಡ ಈ ಜಿಲ್ಲೆಗಳು ಪೂರ್ಣ ಕನಡವಿದ್ದು , ಕಡಪಾ ,ಕರ್ನೂಲ , ಅನಂತಪುರ ಮುಂತಾದ ಜಿಲ್ಲೆಗಳಲ್ಲಿ ಎಷ್ಟೋ ಹಳ್ಳಿಗಳೂ ತಾಲೂಕುಗಳೂ ಕನ್ನಡ ಇರುತ್ತವೆ . ಇವುಗಳನ್ನೆಲ್ಲ ಒಂದುಗೂಡಿಸಿ ಒಂದು ಕರ್ನಾಟಕ ಇಲಾಖೆ ಅಥವಾ ಪ್ರಾಂತವೆಂಬ ರಾಜಕೀಯ ವಿಭಾಗವನ್ನು ಮಾಡಿದರೆ ಕನ್ನಡಿಗರ ಐಕ್ಯಕ್ಕೂ ಹಿತಕ್ಕೂ ಬೆಳವಣಿಗೆಗೂ ಅನುಕೂಲವಾಗುವದು " .

ಕನ್ನಡದ ಉದ್ಧಾರಕರಲ್ಲಿ ರಸೆಲ್ ಸಾಹೇಬರಿಗೆ ಬಹಳ ಮಹ್ತ್ವದ ಮತ್ತು ಉನ್ನತ ಸ್ಥಾನವಿದೆ. ಈ ಭಾಗದ ಭಾಷೆ ಕನ್ನಡವೆಂದು ಕಂಡು ಹಿಡಿದ ಪ್ರಥಮ ಅಧಿಕಾರಿ ಅಂಬ ಶ್ರೇಯಸ್ಸು ಅವರದು. ಅವರು ಕನ್ನಡದ ಪ್ರಾಣಪ್ರತಿಷ್ಠೆಗಾಗಿ ಬಹು ಪ್ರಯತ್ನಪಟ್ತರು . ಅವರಂಥವರೇ ಆ ಮುಂದು ಅಧಿಕಾರಿಗಳಾಗಿ ಬಂದಿದ್ದರೆ ಕನ್ನಡದ ದೈವ ಇನ್ನೂ ಹತ್ತು ಮಾರು ಮುಂದೆ ಸಾಗುತ್ತಿತ್ತು.
ನೆಲ್ಸನ್ ಫ್ರೇಜರ್ ಎಂಬವರ್ ೧೯೧೨ರಲ್ಲಿ ಹೀಗೆ ಬರೆದಿದ್ದಾರೆ ..... The language of the people was Kanarese but Marathi was taught to the people in schools in preference to the mothertongue. ... Mr Russel put his foot down and said that the language of the people must be taught to the people "

Rating
No votes yet