ಕನ್ನಡ ಮತ್ತು ಮಾಹಿತಿ ತಂತ್ರಜ್ಞಾನ ಬಗ್ಗೆ ನನ್ನ ಲೇಖನ
ಎಲ್ಲರಿಗೂ ನಮಸ್ಕಾರ,
ಬಹುದಿನಗಳ ನಂತರ ಇಲ್ಲಿ ಬರೆಯುತ್ತಿದ್ದೇನೆ.
ಮಾಹಿತಿ ತಂತ್ರಜ್ಞಾನದಲ್ಲಿ ಕನ್ನಡದ ಸರಿಯಾದ ಅಳವಡಿಕೆ ಮತ್ತು ಶಿಷ್ಟತೆ ಬಗ್ಗೆ ಸಲಹೆ ನೀಡಲು ಸಮಿತಿಯೊಂದನ್ನು ಕರ್ನಾಟಕ ಸರಕಾರವು ಹಿಂದೊಮ್ಮೆ ನೇಮಿಸಿತ್ತು. ಆ ಸಮಿತಿ ತನ್ನ ವರದಿ ನೀಡಿ ಅದರಂತೆ ಕೆಲವು ಅಧಿಸೂಚನೆ ಹೊರಡಿಸಿದ್ದು, ನುಡಿ ಎಂಬ ತಂತ್ರಾಶವನ್ನು ತಯಾರಿಸಿ ಬಿಡುಗಡೆ ಮಾಡಿದ್ದು -ಇವೆಲ್ಲ ಈಗ ಇತಿಹಾಸ. ಆದರೆ ಯುನಿಕೋಡ್ ಜಗತ್ತಿನಲ್ಲಿ ನುಡಿ ತನ್ನ ಪ್ರಸ್ತುತತೆಯನ್ನು ಕಳೆದುಕೊಳ್ಳುತ್ತದೆ. ಇದಕ್ಕೆ ಕಾರಣ ವಿಂಡೋಸ್ ಎಕ್ಸ್‌ಪಿ ಮತ್ತು ಲಿನಕ್ಸ್‌ಗಳಲ್ಲಿ ಕಾರ್ಯಾಚರಣೆಯ ವ್ಯವಸ್ಥೆಯಲ್ಲೇ ಕನ್ನಡ ಯುನಿಕೋಡ್ ಬಳಸಲು ಬೇಕಾದ ಎಲ್ಲ ಸವಲತ್ತುಗಳು ಲಭ್ಯವಿವೆ. ಲಿನಕ್ಸ್‌ನಲ್ಲಿ ನುಡಿ ಕೆಲಸ ಮಾಡುವುದೂ ಇಲ್ಲ.
ಈ ಸಂದರ್ಭದಲ್ಲಿ ಒಂದು ಸರಳವಾದ ಲೇಖನವನ್ನು ಬರೆದುಕೊಡಿ ಎಂದು ಉಷಾಕಿರಣ ಪತ್ರಿಕೆಯ ಜಯರಾಮ ಅಡಿಗರ ಕೋರಿಕೆ ಮೇರೆಗೆ ನಾನು ಒಂದು ಲೇಖನ ಬರೆದು ಕೊಟ್ಟಿದ್ದೆ. ಅದನ್ನು ಈಗ ನನ್ನ [http://vishvakannada.com/node/271|ತಾಣದಲ್ಲಿ] ಓದಬಹುದು. ದಯವಿಟ್ಟು ಓದಿ ಚರ್ಚೆಯಲ್ಲಿ ಭಾಗವಹಿಸಿ. ಈಗಾಗಲೇ ಒಂದಿಬ್ಬರು ತಮ್ಮ ಅಭಿಪ್ರಾಯ ದಾಖಲಿಸಿದ್ದಾರೆ.
ಸಿಗೋಣ,
ಪವನಜ
Comments
ಒಂದು ಸಲಹೆ
ಲೇಖನದ ಮುಂದಿನ ಭಾಗ