ಆದಿಮ - ಒಂದಷ್ಟು ಚಿತ್ರಗಳು

ಆದಿಮ - ಒಂದಷ್ಟು ಚಿತ್ರಗಳು

ಹೋದವಾರ ಕೋಲಾರದಲ್ಲಿ ನೀರ ನಿಶ್ಚಿಂತೆ ಕಾರ್ಯಕ್ರಮಕ್ಕೆಂದು ಹೋದಾಗ 'ಆದಿಮ'ಕ್ಕೂ ಭೇಟಿ ಕೊಟ್ಟಿದ್ದೆವು ಎಂದು ಬರೆದಿದ್ದೆ. ಅಲ್ಲಿಯ ಕೆಲವು ಚಿತ್ರಗಳು ಇಲ್ಲಿವೆ. ಇನ್ನೂ ನೂರಾರು ಫೋಟೋಗಳು ಕಂಪ್ಯೂಟರಿನಲ್ಲಿಯೇ ಕುಳಿತಿವೆ. ಅವಕಾಶವಾದಂತೆಲ್ಲ ಸೇರಿಸುತ್ತ ಹೋಗುತ್ತಿರುತ್ತೇವೆ.
ಆದರೆ ಕೆಳಗಿರುವ ಕಲಾಕೃತಿಗಳ ಕಲಾಮಯ ಜಗತ್ತು ಸಂಪದಿಗರ ಕಲೆಯ ಸಂಪತ್ತನ್ನು ಹೊರಗೆಳೆಯುವುದೋ ನೋಡೋಣ್ವ?
(ಇಂದು ಹುಣ್ಣಿಮೆ. 'ಆದಿಮ'ದಲ್ಲಿ ಇಂದು ನಾಟಕ, ಜಾನಪದ ಉತ್ಸವ ಮತ್ತಷ್ಟು! ಕೆಲಸದ ಪ್ರಯುಕ್ತ ಹೋಗಲಾಗದಿದ್ದರೂ ಈ ಜಾಗ ಆಗಲೇ ಮನಸ್ಸಿನಲ್ಲಿ ಅಚ್ಚಾಗಿ ಬೇರೂರಿವ ನೆನಪಿನ ಗುಂಗಿನಲ್ಲಿ ಈ ಚಿತ್ರಗಳನ್ನು ಸಂಪದಿಗರೊಂದಿಗೆ ಹಂಚಿಕೊಳ್ಳುತ್ತಿರುವೆ)

ಇವಳ್ಯಾರು ಗೊತ್ತ?

ನಾಲ್ಕು ಪರಿಧಿ, ಮತ್ತೆ ಒಂದಷ್ಟು

ನಾನ್ಯಾರ ನೆನಪ ತಂದೀನಿ? 

ಕೆಂಪು ಹಣೆಬಟ್ಟು, ಮೂಗುತಿ
ನಾ ಕ್ಷಮಯಾಧರಿತ್ರಿ!

ಮರದ ಮರೆಯಲ್ಲಿ ನಾನಿಲ್ಲ, ಮರವೇ ನಾನು, ನಾನದರಲ್ಲಿ!

ಎಂತ ಹೇಳುತಿ? ನೀರು ಸಿಗದಿಲ್ಲಿ! ಬಾಡಿ ಬಾಯಾರಿ ನೀರಡಿಕೆಯಾದೀತು, ಬೇಗ ನಡಿ ಮನೆಗೆ!

ಚಿತ್ರಗಳು: ನಾನೇ ತೆಗೆದದ್ದು. ಚಿತ್ರಗಳನ್ನು ಬೇರೆಡೆ ಬಳಸಿದರೆ ಅನುಮತಿ ಪಡೆದು ಬಳಸುತ್ತೀರಲ್ವ? :)

 

Rating
No votes yet

Comments