ಸ್ರೀವಾದ ಮತ್ತು ಸಮಾಜ

ಸ್ರೀವಾದ ಮತ್ತು ಸಮಾಜ

Comments

ಬರಹ

ಇದೀಗ ನಮ್ಮ ಸಮಾಜ ಪುರುಷ ಪ್ರಧಾನ ಸಮಾಜವಾಗಿ ಇನ್ನೂ ಉಳಿದಿದೆಯೇ?  ಖಂಡಿತ ಇಲ್ಲ.  ಹಿಂದೊಂದು ಕಾಲವಿತ್ತು ಹೆಣ್ಣು ಮುಸುಕೆಳೆದುಕೊಂಡೇ ತಿರುಗುವ ಕಾಲ. ಈಗ ಹೆಣ್ಣು ಸಂಪೂರ್ಣ ಸ್ವಾತಂತ್ರ ಪಡೆದಿದ್ದಾಳೆ. ನಿರ್ಭಿಡೆಯಿಂದ, ಅಷ್ಟೇಕೆ  ಹಿಂದೆಂದಿಗಿಂತಲೂ  ಬಲು ಸ್ವಚ್ಛಂಧವಾಗಿ  ತೆರೆದುಕೊಂಡಿದ್ದಾಳೆ ಅಂಥ “ರಮ್ಯ” ಕಾಲವಿದಾಗಿದೆ.  ಹೌದು, ಜೀವನಾನಂದದ ಸ್ವರೂಪವೇ ಹೆಣ್ಣು. ಅವಳು ಎಲ್ಲಿ ಗೌರವಿಸಲ್ಪಡುತ್ತಾಳೋ ಅಲ್ಲಿ ದೇವತೆಗಳು ಸಂಪ್ರೀತರಾಗಿರುತ್ತಾರೆ” ಎಂಬುದೀಗ ಕ್ಲೀಷೆಯಾಗಿದೆ.  ಇದೀಗ ಹೆಣ್ಣು ಎಲ್ಲಿ ದೇವತೆಯಂತೆ ಕಂಗೊಳಿಸತ್ತಾಳೋ ಅಲ್ಲಿ ಅವಳೇ ಪೂಜಿಸಲ್ಪಡುತ್ತಾಳೆ.  ಯುವ ಜನಾಂಗದ ಕನಸಿನ ಕನ್ಯೆಯೆ ಅವಳಾಗಿರುತ್ತಾಳೆ ಎಂಬುದು ಉತ್ಪ್ರೇಕ್ಷೆಯಾಗಲಾರದು.

ಇಂದಿನ ದಿನಗಳಲ್ಲಿ ಜಾಹೀರಾತು ಪ್ರಪಂಚದಿಂದ ಹಿಡಿದು, ಸಿನಿಮಾ, ಟೆಲಿ ಸಿನಿಮಾಗಳವರೆಗೆ ಆಕೆ ರೋಮ್ಯಾಂಟಿಕ್- ಗ್ಲಾಮರಸ್ ಪ್ರಪಂಚದಲ್ಲಿ ಮೆರೆದಿದ್ದಾಳೆ; ಮೆರೆಯುತ್ತಿದ್ದಾಳೆ.  ಈಗ ಗಂಡು ಹೆತ್ತವರಿಗೇ ಕಷ್ಟ.   ಅವರಿಗೆ ತಮ್ಮ ಮಕ್ಕಳನ್ನು ಜೋಪಾನ ಮಾಡಿಕೊಳ್ಳಬೇಕಾದ ದುರ್ದರ ಪ್ರಸಂಗ.  ಯಾಕೆಂದರೆ, ಯಾವ ಹೊತ್ತಿನಲ್ಲಿ ಯಾವ ಹುಡುಗಿಯನ್ನು ತಂದು-ತಂದೆ ತಾಯಿಗಳ ಎದುರಿನಲ್ಲಿ ನಿಲ್ಲಿಸುತ್ತಾನೋ ಮಗ ಎಂಬ ಆತಂಕ.  ವಯಸ್ಸಿಗೆ ಬಂದ ಹುಡುಗಿಯೂ ಅಷ್ಟೇ.... ಯಾವ ಹುಡುಗನನ್ನು ಯಾವ ಘಳಿಗೆಯಲ್ಲಿ ತಂದು ತಂದೆ-ತಾಯಿಯರೆದುರಿಗೆ ನಿಲ್ಲಿಸಿ ಇವನನ್ನೇ ಲವ್ ಮಾಡುತ್ತಿದ್ದೇನೆ; ಮದುವೆಯಾಗುತ್ತಿದ್ದೇನೆ ಎಂದು ಹೇಳುತ್ತಾಳೋ ಎಂಬ ಆಂದೋಲನವೇ ಪೀಡಿಸುವಂತಹ ಕಾಲ ಘಟ್ಟದಲ್ಲಿ ನಾವಿಂದು ಬದುಕುತ್ತಿರುವಾಗ ಹಳೆಯ ವಾದಗಳು ನೆರವಿಗೆ ಬರಲಾರವು.

ಸ್ತ್ರೀ ಇಂದಿನ ಪುರುಷನಿಗೆ ಸರಿಸಮಾನವಾಗಿ ಬದುಕುತ್ತಿದ್ದಾಳೆ; ಸಂತೋಷವೇ.  ಹಾಗಿರುವಾಗ ಅವಳದೇ ವಾದವೆಂದರೇನು?ಹೆಣ್ಣಾಗಿ ಹುಟ್ಟಿದ್ದಕ್ಕೆ ಅವಳದೇ ಕೆಲ ಸಮಸ್ಯಗಳು ಲಿಂಗ ರೀತ್ಯ ಪ್ರತ್ಯೇಕವೆನಿಸುತ್ತದೆಯಾದರೂ. ಗಂಡೂ ಅವಳ ಆ ಪರಿಯ ಸಮಸ್ಯೆಗಳಿಗೆ ಸ್ವಂದಿಸಬೇಕು ನಿಜ. ಅವಳೂ ಅಷ್ಟೇ. ಇಬ್ಬರೂ ಬದುಕುತ್ತಿರುವ ಸಮಾಜ ಒಂದೇ ಆದಾಗ ಪರಸ್ಪರ ಹೊಂದಾಣಿಕೆ ಸೌಹಾರ್ದತೆ ಅನಿವಾರ್ಯ. ಪುರುಷರೇ ಇಲ್ಲದ ಸಮಾಜವನ್ನು ನಾವು ಹೇಗೆ ಊಹಿಸಿಕೊಳ್ಳಲು ಅಸಾಧ್ಯವೋ ಹಾಗೆಯೆ ಸ್ತ್ರೀಯರೇ ಇಲ್ಲದ ಬದುದು ಭವಿಷ್ಯವನ್ನು ಕಾಣಲಾರೆವು. ಅಂದರೆ, ಹೆಣ್ಣಿಗೆ  ಗಂಡು, ಗಂಡಿಗೆ ಹೆಣ್ಣು ಇಬ್ಬರೂ ಇಂದಿ ದಿನ ದಿನಗಳಲ್ಲಿ ಸಾಮಾಜಿಕವಾಗಿ ಸರಿಸಮಾನರೇ.    ಇಬ್ಬರಲ್ಲೂ ಸಾಮಾಜಿಕ ಹೊಣೆಗಾರಿಕೆ ಎಂಬದಿರುವಾಗ ಪ್ರತ್ಯೇಕ ವಾದಗಳೇಕೆ? 

 ಹಿಂದಿತ್ತು ಪುರುಷ ಪ್ರಧಾನ ಕಾಲ. ಆಗ ಬೇಕಿತ್ತು ಸ್ತ್ರೀವಾದ...  
ಪ್ರೇಮಕ್ಕೂ ಮತ್ತು ಪ್ರೀತಿಗೂ ಇರುವ ಹೋಲಿಕೆ ವ್ಯತ್ಯಾಸಗಳು ಇಂದಿನ ಯುವ ಜನಾಂಗ ಅರಿತಂತಿಲ್ಲ.   ಹೊಸ ಮೌಲ್ಯಗಳನ್ನು ಹುಟ್ಟು ಹಾಕುವ ಕಾತರತೆಯ ಸಡಗರದಲ್ಲಿದ್ದಾರೆ. ಇಂದಿನ ಯುವತಿ ಯುವಕರ  ವಾದಕ್ಕೆ ಹಿರಿಯರಾದ ನಾವು ಉತ್ತರ ಹೇಳುವುದೇ ಕಷ್ಟವಾಗಿದೆ..  ಸಿನಿಮಾ ಮತ್ತು ಟಿ.ವಿ. ಚಾನೆಲ್ ಹಾಗೂ ಪಾಶ್ಚಿಮಾತ್ಯ ಸಂಸ್ಕೃತಿಗಳ ಕಲಸು ಮೇಲೋಗರದಲ್ಲಿ  ಅವರು ಹಪ ಹಪಿಸುತ್ತಿದ್ದಾರೆ.  ಅವರಿಗೆ ಸೂಕ್ತ ಮಾರ್ಗ ದರ್ಶನ ನೀಡುವಂಥ  ಹೊಸ ಮೌಲಿಕವಾದ ಆಯಾಮವೊಂದನ್ನು ಹಿರಿಯರಾದ ನಾವು ಅಂದರೆ  ಹಿರಿಯ ಸ್ತ್ರೀ ಮತ್ತು ಪುರುಷರಾದ ನಾವೆಲ್ಲರೂ ಒಂದು ಗೂಡಿ  ಹಳೆಯದು ಮತ್ತು ಹೊಸತೆಂಬ ಜೀವನ ಶೈಲಿಯ  ಸಮನ್ವಯಕಾರರಾಗಿ  ಆರೋಗ್ಯಕರ ಸಮಾಜವನ್ನು ಕಟ್ಟುವಂತಹ ಅವರಿಗೆ ಭವಿಷ್ಯದಲ್ಲಿ ತುಂಬು ಭರವಸೆ ನೀಡುವಂತಹ “ಹೊಸ ಸಮಾಜವಾದ”ವನ್ನು  ಹುಟ್ಟು ಹಾಕಬೇಕಾಗಿರುವ ಹೊಣೆ ನಮ್ಮೆಲ್ಲರದು ಆಗಿದೆ.
-ಎಚ್.ಶಿವರಾಂ          18 ಆಗಸ್ಟ್ , 2006

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet