ಜನುಮ ಜನುಮದ ಅನುಬಂದ .......(ನನ್ನ ಹೊಟ್ಟೆ ಮತ್ತು ತಲೆ)

ಜನುಮ ಜನುಮದ ಅನುಬಂದ .......(ನನ್ನ ಹೊಟ್ಟೆ ಮತ್ತು ತಲೆ)

ಲೇ ಹೊಟ್ಟೆನೋವು ಕಣೆ ಎನ್ದೆ. ನಿಮ್ಮ ತಲೇಲಿ ಹೊಟ್ಟೇನೆ ತುಂಬಿಕೊಂಡಿದೆ ಅಂದ್ಲು. ನಿಜಾನೇ ಇರಬಹುದು ಅನಿಸ್ತು ಅದೇಕೋ ಗೊತ್ತಿಲ್ಲ ಹೊಟ್ಟೆಗೂ ಮತ್ತು ನನ್ನ ತಲೆಗು ಅವಿನಭಾವವಾದ ಸಂಭ೦ದ. ಅದೇಕು ಗೊತ್ತಿಲ್ಲ ಹೊಟ್ಟೆ ನೋವು ಬಂತು ಅಂದ್ರೆ ತಲೆ ನೋವು ನೂರಕ್ಕೆ ನೂರು ಬರಲೇಬೇಕು. ತಲೆಗೂ ಅಷ್ಟೇ ಯಾವಾಗಲು ಹೊಟ್ಟೇದೆ ಯೋಚನೆ. ಯಾಕೋ ಆದರು ಸ್ವಲ್ಪ ಅವಳು ಹೇಳಿದ್ದನ ಅರಗಿಸಿಕೊಳ್ಳಲು ಆಗಲಿಲ್ಲಾ ಏಕಂದ್ರೆ ನಮ್ಮ ಅಪ್ಪ ಹೇಳ್ತಿದ್ರು ನಿನ್ನ ತಲೇಲಿ ಸಗಣಿ ಗೊಬ್ರನೆ ಇರೋದು ಅಂತ. ಈಗ ಶುರುವಾಯಿತು ನೋಡಿ ಗೊಬ್ರನ ಇಲ್ಲ ಹೊಟ್ಟೆನ ಅಂತ. ಆಯಿತು ಒಬ್ಬ ತಲೆಯ ಡಾಕ್ಟರಗೆ ತೋರಿಸಿ ಬಿಡೋಣವೆಂದು ಯೋಚಿಸಿ, ಶನಿವಾರ ಬೆಳಿಗ್ಗೆ ಎದ್ದು ನನ್ನ ನಿತ್ಯ ಕರ್ಮಗಳನ್ನು ಮುಗಿಸಿ ಹೊರಡೋಣ ಎನ್ನುವಾಗ ನನ್ನ ಹೊಟ್ಟೆಯ ಕರೆ ಬಂದೆ ಬಿಟ್ಟಿತ್ತು. ಮತ್ತೆ ಎಲ್ಲವನ್ನು ಮುಗಿಸಿ ನನ್ನ Kinetic ಸ್ಟಾರ್ಟ್ ಮಾಡಿದೆ. ಡಾಕ್ಟರ ಬಳಿ ಹೋಗಿ ನನ್ನ ಎಲ್ಲ ದುಃಖವನ್ನು ತೋಡಿಕೊಂಡೆ. ಡಾಕ್ಟರ ಹೇಳಿದರು ನಿಜವಾಗಿಯೂ ಇದು ನನ್ನ ಕೇಸ್ ಅಲ್ಲ ನೀನು ಹೊಟ್ಟೆಯ ಡಾಕ್ಟರ ಬಳಿ ಹೋಗೆಂದು ಕಳಿಹಿಸಿದರು. ಮತ್ತೆ ಬಂದ ದಾರಿಗೆ ಸುಂಕವಿಲ್ಲ ಅಂತ Kinetic ಏರಿ ಹೊಟ್ಟೆಯ ಡಾಕ್ಟರ ತಲುಪಿದೆ. ಅವರು ತಪಾಸಣೆ ಮಾಡಿ ೫ ಮಾತ್ರೆ ಬರದು ಕೊಟ್ಟರು ಮತ್ತು ಡಯಟಿಂಗ್ ಹೇಳಿದರು. ಒಂದು ವಾರದ ನಂತರ ಬಂದು ಭೇಟಿಯಾಗಿ ಅಂತ ಹೇಳಿದರು. ನಡಯಿತು ನನ್ನ ಹೊಟ್ಟೆ ನೋವನ್ನು ಹೊಡೆದೋಡಿಸುವ ಮಹಾ ಸಮರ. ಸಮರವೇನೋ ನಡೀತಾನೆ ಇತ್ತು ಆದರೆ ಹೊಟ್ಟೆನೋವು ಮಾತ್ರ ಕಮ್ಮಿ ಆಗಲಿಲ್ಲ. ಒಂದು ವರ್ಷ ಮಾತ್ರೆ ನುಂಗಿ ನುಂಗಿ ಹೊಟ್ಟೆಲೆ ಮಾತ್ರೆಗಳ ಫ್ಯಾಕ್ಟರಿನೆ ಹುಟ್ಟಿಕೊಂಡಿದೆ. ಇದನ್ನ ಹೇಗಾದರೂ ಮಾಡಿ ಕಂಡು ಹಿಡಿಯಲೇಬೇಕೆಂದು ಪಣ ತೊಟ್ಟು ಯೋಚಿಸ್ದಾಗ ಗೊತ್ತಾಯಿತು. ೪ ವರ್ಷಗಳ ಹಿಂದೆ ಹೊಟ್ಟೆನೋವನ್ದ್ರೆನೆ ಗೊತ್ತಿಲ್ದಿರೋ ನನಗೆ ಇದು ಹೇಗೆ ಬಂತು ಅಂತ. ಆಗ ನನ್ನನ್ನ ನಾನು ಯಾವುದಾದರು ಕೆಲಸದಲ್ಲಿ ತೊಡಗಿಸ್ಕೊಂಡು ಸ್ವಲ್ಪ ಬ್ಯುಸಿ ಇರ್ತಿದ್ದೆ. ಈಗ ಸ್ವಲ್ಪ ಆಲಸಿ ಆಗಿದ್ದೇನೆ ಅನ್ನಿಸುತ್ತೆ. ಅದಕ್ಕೆ ಹೊಟ್ಟೆ ತಲೆಲ್ಲಿ ಮನೆ ಮಾಡಿದೆ. ಆಗ ನೆನಪಾಗಿದ್ದು (Idle mind is devils workshop) ಅಂತ. ನನ್ನ ಮಟ್ಟಿಗೆ Devil ಅಂದ್ರೆ ಹೊಟ್ಟೇನೆ ಇರಬೇಕು.ಅದಕ್ಕೆ ನನ್ನನ್ನ ನಾನು ಬ್ಯುಸಿ ಯಾಗಿಟ್ಟುಕೊಂಡಿದ್ದೇನೆ. ಈಗ ನಾನು ಎದೆ ತಟ್ಟಿ ನನ್ನ ಹೆಂಡತಿಗೆ ಹೇಳಬಹದು. ನನಗೆ ಹೊಟ್ಟೆನೋವಿಲ್ಲ ಅಂತ ಎದೆ ನೋವೆ ಬರದಿರಲೆಂದು ಆಶಿಸುತ್ತೇನೆ. ...

Rating
No votes yet