’ಅಮೆರಿಕದ ಬ್ಲೂಮಿಂಗ್ಟನ್ ಹೊಲಗಳು” !

’ಅಮೆರಿಕದ ಬ್ಲೂಮಿಂಗ್ಟನ್ ಹೊಲಗಳು” !

ಬರಹ

ಮೆಕ್ಕೇ ಜೋಳ, ಸೊಯಾಬೀನ್ ಬೆಳೆಯ ಮಧ್ಯೆ ವಿಂಡ್ ಮಿಲ್ ಗಳು, ಇರುವ, ’ಅಮೆರಿಕದ ಬ್ಲೂಮಿಂಗ್ಟನ್ ಹೊಲಗಳು ” ! ಅಮೆರಿಕದ ಹೊಲಗಳನ್ನು ನೋಡುವುದೇ ಒಂದು ಹೊಸ ಅನುಭವ ! ಮೈಲುಗಟ್ಟಲೆ ಕಾರಿನಲ್ಲಿ ಹೋದಷ್ಟೂ ನಿಮ್ಮ ಎರಡು ಬದಿಯಲ್ಲೂ ಆಳೆತ್ತರೆಕ್ಕೆ ಬೆಳೆದು ಸೊಂಪಾಗಿ ಗಾಳಿಯಲ್ಲಿ ತೇಲಾಡುವ ಮೆಕ್ಕೇಜೋಳದ ತೆನೆಗಳನ್ನು ನೀವು ವೀಕ್ಷಿಸಬಹುದು. ಹೌದು. ಇನ್ನೊಂದು ಬೆಳೆಯೆಂದರೆ, ಸೊಯಾಬೀನ್ ! ಗೋಧಿಬೆಳೆ, ಕಡಿಮೆಯಾಗಿದೆಯಂತೆ ! ಮೆಕ್ಕೇಜೋಳದಿಂದ ಪೆಟ್ರೋಲಿಗೆ ಪರ್ಯಾಯವಾದ ಇಂಥನವನ್ನು ತಯಾರಿಸುತ್ತಾರೆ. ಹೊಲಗಳಿಗೆ ನೀವುಸೊಗಸಾದ ಟಾರ್ ಅಥವಾ ಸಿಮೆಂಟ್ ರಸ್ತೆಯಲ್ಲಿ ಹೋಗಬಹುದು. ಅಲ್ಲಿಗೆ ಬರುವ ರೈತರೂ ಜೀನ್ಸ್ ಧರಿಸಿ, ಕಾರಿನಲ್ಲಿ ಬರುತ್ತಾರೆ. ನಮ್ಮ ದೇಶದ ಬಡರೈತರ ವ್ಯವಸಾಯದ ವೈಖರಿ ಹಾಗೂ ಅಮೆರಿಕದ ಪ್ರಗತಿಪರ, ಬೇಸಾಯಗಾರರ ಕಾರ್ಯಭಾರದ ಹೋಲಿಕೆಯನ್ನು ಮಾಡಲು ಸಾಧ್ಯವಾಗದಷ್ಟು ಎತ್ತರದಲ್ಲಿದ್ದಾರೆ, ಅವರು ! ಜೀವನದ ಎಲ್ಲರಂಗಗಳಲ್ಲೂ ಯಂತ್ರ, ಹಾಗೂ ವೈಜ್ಞಾನಿಕ ಉಪಕರಣಗಳನ್ನು ಸಮರ್ಥವಾಗಿ ಬೆಳಸಿ, ತಮ್ಮ ಜೀವನ ಶೈಲಿಯನ್ನು ಸುಧಾರಿಸಿಕೊಂಡಿದ್ದಾರೆ. ಅಮೆರಿಕದಲ್ಲಿ ಶ್ರಮಜೀವಿಗಳಿದ್ದಾರೆ. ಅವರು ಯಂತ್ರಗಳ ಜೊತೆಜೊತೆಯಲ್ಲಿ ದುಡಿಯುತ್ತಾರೆ. ಕೂಲಿಮಾಡುವ ಅವರ ವಿಧಾನ ಬೇರೆಯತರಹ. ಎಲ್ಲ ಅಮೆರಿಕನ್ನರೂ ವಿದ್ಯಾವಂತರಲ್ಲ. ಅವರಿಗೆ ವಿದ್ಯೆ ಕಲಿಯುವ ಪ್ರಕ್ರಿಯೆ ಅತ್ಯಂತ ದುಬಾರಿ. ಈಗ ಹೊಸ ಅಧ್ಯಕ್ಷ, ಶ್ರೀ ಒಬಾಮ ಬಂದಮೇಲೆ, ಅನೇಕ ಸೌಲಭ್ಯಗಳನ್ನು ಒದಗಿಸುವುದಾಗಿ ಆಶ್ವಾಸನೆಯಿತ್ತಿದ್ದಾರೆ. ಒಂದು ವಿಷಯವೆಂದರೆ, ಧಾನ್ಯಗಳಲ್ಲಿ ವೈವಿಧ್ಯತೆಯಿಲ್ಲ. ನಮ್ಮಲ್ಲಾದರೋ, ರಾಗಿ, ಜೋಳ, ನವಣೆ, ಹಾರಕ, ತೊಗರಿ, ಹುಚ್ಚೆಳ್ಳು, ಕೊತ್ತಂಬರಿ, ಜೀರಿಗೆ, ಮುಂತಾದ ಹಲವಾರು ಬೆಳೆಗಳಿವೆ. ಅಮೆರಿಕನ್ ಯುವಕ, ತನ್ನ ಜೀವನ, ಹಾಗೂ ತನ್ನ ವೃತ್ತಿಯನ್ನು ಪ್ರೀತಿಸುತ್ತಾನೆ. ಅದರಲ್ಲಿ ತನ್ನ ಎಲ್ಲಾ ಸಾಮರ್ಥ್ಯವನ್ನೂ ವಿನಿಯೋಗಿಸಿ ಯಶಸ್ಸಿನ ಶಿಖರವನ್ನು ಮುಟ್ಟಿ ಅನೇಕ ವಿಕ್ರಮಗಳನ್ನು ಸಾಧಿಸಬಹುದೆಂಬ ವಿಚಾರವನ್ನು ಎಲ್ಲರಿಗೂ ಪ್ರಚುರಪಡಿಸುತ್ತಾನೆ ! ಗಾಳಿ, ಹಾಗೂ ಸೌರ-ಶಕ್ತಿಯನ್ನು ಚೆನ್ನಾಗಿ ಉಪಯೋಗಿಸಿ, ಅದರ ಸದುಪಯೋಗ ಪಡೆಯುತ್ತಿದ್ದಾರೆ, ಅಲ್ಲಿಯ ಜನ ! ಅಮೆರಿಕನ್ನರ ಪ್ರತಿಕ್ರಿಯೆ ಬಹಳ ಬೇಗ. ಯಾವುದಾದರೂ ಹೊಸ ಪದ್ಧತಿ, ಚೆನ್ನಾಗಿ, ಫಾಯಿದೆಯಿದೆಯೆಂದು ಗೊತ್ತಾದರೆ, ಅದನ್ನು ತಕ್ಷಣ ತಮ್ಮ ಜೀವನದಲ್ಲಿ ಲಾಗುಮಾಡುತ್ತಾರೆ. ಹಾಗೆಯೇ ಒಂದು ಪದ್ಧತಿ ಚೆನ್ನಾಗಿಲ್ಲದಿದ್ದರೆ, ಅದನ್ನು ಕಿತ್ತೊಗೆಯುತ್ತಾರೆ ಸಹಿತ ! ವೈಜ್ಞಾನಿಕ ದೃಷ್ಟಿಕೋನವನ್ನು ಅಲ್ಲಿನ ಜನರೆಲ್ಲಾ ಬೆಳಸಿಕೊಂಡು ಅದನ್ನು ನಂಬುತ್ತಾರೆ. ಕೆಲಸದ ಸಮಯದಲ್ಲಿ ಸೋಮಾರಿತನ ತೋರಿಸದೆ, ಚೆನ್ನಾಗಿ ಮೈಬಗ್ಗಿಸಿ ದುಡಿಯುತ್ತಾರೆ. ವಾರಾಂತ್ಯವಾಗುವುದನ್ನೇ ಕಾದಿದ್ದು, ಶನಿವಾರ, ಮತ್ತು ರವಿವಾರ ತಮ್ಮ ಆಫೀಸಿನ ಬಗ್ಗೆ ಮರೆಯುವಷ್ಟು ಮನೋಭಾವವನ್ನು ಬೆಳೆಸಿಕೊಂಡಿದ್ದಾರೆ. ಚಿತ್ರ- ವೆಂಕಟೇಶ್.