ಹರಸಿದ ಸಂಪದಿಗರಿಗೆಲ್ಲಾ ಧನ್ಯವಾದಗಳು

ಹರಸಿದ ಸಂಪದಿಗರಿಗೆಲ್ಲಾ ಧನ್ಯವಾದಗಳು

ನಮ್ಮ ಮಗಳು ಸ್ಮಿತಾ ಪದವಿ ಪೂರ್ವ ಪರೀಕ್ಷೆಯಲ್ಲಿ ತೊಂಭಾತ್ತಮೂರು ಶೇಕಡಾ ಅಂಕ ಪಡೆದು, ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ ಎಂಟು ನೂರ ಎಪ್ಪತ್ತ ಆರನೇ ಸ್ಥಾನ ಗಳಿಸಿದರೂ ಮೊನ್ನೆ ಗುರುವಾರದಂದು ಎಂಟು ನೂರ ಮೂವತ್ತಾರಕ್ಕೆ ಎಲ್ಲಾ ಸಾಮನ್ಯ ವರ್ಗದ ಸೀಟುಗಳು ಖಾಲಿಯಾದಾಗ ಸ್ವಲ್ಪ ಹೊತ್ತು ಏನು ಮಾಡಲೂ ತೋಚಿರಲಿಲ್ಲ.
ಆದರೆ ಮಾಜೀ ಸೈನಿಕರ ವರ್ಗದ ಅಡಿಯಲ್ಲಿ ಇದ್ದ ಮೂರು ಸೀಟುಗಳ ಪೈಕಿ ಒಂದು ಉಳಿದುಕೊಂಡಿತ್ತು ಅನ್ನುವ ವಿಷಯ ತಿಳಿದಾಗ ಸಮಾಧಾನ ಆಯ್ತು. ಆದರೂ ೮೩೬ ಮತ್ತು ೮೭೬ರ ನಡುವೆ ಯಾರಾದರೂ ಮಾಜೀ ಸೈನಿಕರು ಆ ಒಂದು ಕೊನೆ ಸೀಟನ್ನು ಎತ್ತಿಕೊಂಡು ಬಿಟ್ಟರೆ ಏನು ಮಾಡುವುದು ಅನ್ನುವ ಯೋಚನೆಯೂ ಬಂತು. ಮಗಳು ಸ್ಮಿತಾಳಿಗೆ ಅಂದೆ: "ನೀನು ವೈದ್ಯಳೆ ಆಗಬೇಕೆಂದಿದ್ದರೆ ಅದು ನಿನಗೆ ಸಿಗಬಹುದು ಕಾಡು ನೋಡೋಣ".

ಒಂದೊಂದೆ ಸಂಖ್ಯೆ ಕೂಗಿದಾಗಲೂ ಸುತ್ತಲೂ ಕಣ್ಣು ಹಾಯಿಸಿ ಸಮಾಧಾನ ಪಟ್ಟುಕೊಂಡದ್ದಾಯ್ತು.
ಅಂತೂ ೮೭೬ ಸಂಖ್ಯೆ ಕೂಗಿದಾಗ ಹೋಗಿ ನಮ್ಮ ದಾಖಲೆಗಳನ್ನು ಒಪ್ಪಿಸಿದೆವು.
ಅಂತೂ ಸುಳ್ಯದ ಕೆವಿಜಿ ವೈದ್ಯಕೀಯ ಕಾಲೇಜಿನಲ್ಲಿ, ಸ್ಮಿತಾಳಿಗೆ ಸೀಟು ದೊರಕಿಸಿಕೊಂಡು ಹೊರ ಬರುವಾಗ ರಾತ್ರಿ ಎಂಟು ಘಂಟೆ.
ಇದರ ಹಿಂದೆ ಕೆಲಸ ಮಾಡಿದ ನನ್ನೆಲ್ಲಾ ಸಂಪದ ಬಂಧುಗಳ ಶುಭ ಹಾರೈಕೆಗಳಿಗೆ ನಾನು ಧನ್ಯವಾದ ಹೇಳುತ್ತಿದ್ದೇನೆ.

Rating
No votes yet

Comments