ನಿಶ್ಚಿಂತ ಚಿಂತನೆಗಳು

ನಿಶ್ಚಿಂತ ಚಿಂತನೆಗಳು

ನಿಶ್ಚಿಂತ ಚಿಂತನೆಗಳು

ಯೋಚನೆಗಳಿಗಿಲ್ಲ ಪರ್ಯವಸಾನ ಉಸಿರಾಡುವತನಕ,
ನೂರುರೂಪಧಾರಿ ಯೋಚನೆಸ್ವರೂಪ ಸುಕದುಃಖತವಕ.
ಚಿಂತನೆಗಿಹುದು ಸ್ವಂತ ಮೆದುಳ ಪೂರ್ಣ ಸ್ವಾತಂತ್ರ್ಯ,
ಅಂತೆಲ್ಲ ಚಿಂತನೆಗಳ ಬೆಳೆಸುವ ಅವರ್ಣ ತಾಂತ್ರ್ಯ!

ವಿವಿಧ ರೀತಿ ಪರಿಪರಿಯ ಪರಿಸ್ತಿತಿಗನ್ವಯವಾಗಿ
ವೈವಿಧ್ಯ ವರಸೆಯಲಿ ಅನುಭವಗಳಾಧಾರವಾಗಿ
ಆಶೆನಿರಾಶೆಗಳ ನೀತಿಯನೀತಿಗಳ ಮೆಟ್ಟಿನವಲಂಬಿಸಿ,
ದುರಾಶಿಗಳ ದುರ್ನಡತೆಗಳ ಪೆಟ್ಟಿನ ಆತ್ಮವಂಚನೆ;

ಆರಾಮದ ವಾಹನಕಿರಬೇಕು ಚತುರ್ಚಕ್ರ ಸಾಗಲು,
ಆಗಮಿಸಿದ ಯೋಚನೆಗಳಿಗೆ ಬೇಕಿಲ್ಲ ಮುನ್ನುಗ್ಗಲು,
ಪಳಗದ ಪ್ರಾಣಿಗಳ ಹತೋಟಿ ಅಸಾಧ್ಯವಿರುವಂತೆ,
ನೂರಾಲೋಚನೆಗಳ ನಿಯಂತ್ರಣ ನಿದರ್ಶನ ಚಿಂತೆ!

ಹಲವುವೇಳೆ ಸಾಲದು ಬಾಳಿನನುಭವ ಯಶಸ್ಸಿಗೆ,
ಕೆಲವುಸಲ ಕಣ್ತೆರೆದು ನಡೆದರೂ ಎಡವಿ ಕುಸಿವಂತೆ;
ಆಗೆಲ್ಲಿತ್ತು ಬುದ್ಧಿಯೋಚನೆ ಸಹಾಯವಾಗದೆ ಮನಸ್ಸಿಗೆ?
ಹೇಗೆಲ್ಲ ಎತ್ತಿದ್ದರು ಮುನ್ನಾಲೋಚನೆ ನಷ್ಟವನುಭವಿಸುವಂತೆ!

ಯೋಚನೆಗಳ್ಹತೋಟಿಗೆ ಬೇಕು ಕೆಲವು ವಿರುದ್ಧ ಆಯುಧಗಳು,
ತೀರಾಲೋಚನೆ, ಸಂಯಮ, ಸಹನೆ, ಅನುಭವ ಪಾಂಡಿತ್ಯ,
ವಿವೇಕ, ತರ್ಕ, ದೂರದೃಷ್ಟಿ, ಸಂಯುಕ್ತ ಬುದ್ಧಿವಿದ್ಯೆಗಳು,
ಸುವಿಸ್ವಾಸಿಗಳ ಸಲಹೆ, ಅನುಭವಕೋಶ ಬಂಡಾರ ಪ್ರತಿನಿತ್ಯ.

ಅನಾಥರು ನತದೃಷ್ಟರು ಏಕಾಕಿ ಅಙ್ಞಾತವಾಸಿಗಳು,
ಸಲಹೆ ಸ್ವೀಕರಿಸೆ ಕಕ್ಕಾಬಿಕ್ಕಿ ಹುಡುಕಿ ತಪಸ್ಸು ಮಾಡಿದರೂ.
ಜ್ಙಾನೋದಯವಾಗುವುದು ಕೇವಲ ಕೆಲರಿಗೆ, ಮಾಹಾಮುನಿಗಳಿಗೆ;
ಸಾದಾರಣರ ತಪಸ್ಸು ವಿಪರ್ಯಾಸ, ಸೋತಂತೆ ಶನಿಗಳಿಗೆ!

- ವಿಜಯಶೀಲ
***

Rating
No votes yet